ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 28, 2018
೧) ಎಲ್ಲಾರೂ ನಮ್ಮವರೇ. ೨) ನಮ್ಮ ಬೆನ್ನು ನಮಗೆ ಕಾಣುವದಿಲ್ಲ. ೩) ಮನಸ್ಸು ಸ್ವಚ್ಚವಾಗಿರಬೇಕು. ೪) ಯಾರ ಜತೆಗೂ ಧ್ವೇಷ ಕಟ್ಟಿಕೋಬಾರದು. ೫) ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು. ೬) ಯಾರ ಭಾಗ್ಯ ಹೇಗೋ ಯಾರು ಬಲ್ಲರು ? ತಿಪ್ಪೆ ಉಪ್ಪರಿಗೆ ಆಗಬಹುದು , ಉಪ್ಪರಿಗೆಯು ತಿಪ್ಪೆ ಆಗಬಹುದು ೭) ಯಾವಾಗಲೂ ಒಳ್ಳೆಯ ಮಾತಾಡಬೇಕು . ೮) ಕೈಲಾದ ಒಳ್ಳೆಯ ಕೆಲಸ ಮಾಡಬೇಕು. ೯) ದೇವರು ನನಗೆ ಏನೂ ಕಡಿಮೆ ಮಾಡಿಲ್ಲ , ಕೊರತೆ ಅನಿಸಿದರೆ ‍ನಾವು ಪಡೆದುಕೊಂಡು ಬಂದದ್ದು ಅಷ್ಟೇ ಇರುತ್ತದೆ. ಇವು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 27, 2018
ಸಂಕ್ರಮಣ ಹಬ್ಬಕ್ಕೆ ಉತ್ತರ ಕನಾ೯ಟಕ ಮತ್ತು ಮಹಾರಾಷ್ಟ್ರದಲ್ಲಿ ಕುಸುರೆಳ್ಳು ವಿನಿಮಯದ ಪದ್ಧತಿ ಇದ್ದು, ಆ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕುಸುರೆಳ್ಳು ಮಾಡುವ ವಿಧಾನ ಬಹಳಷ್ಟು ತಾಳ್ಮೆ ಬೇಡುವಂಥದು. ಸಕ್ಕರೆ ಪಾಕ ಮಾಡಿಟ್ಟುಕೊಂಡು , ಇದ್ದಲ ಒಲೆಯ ಮೇಲೆ ಒಂದು ಬುಟ್ಟಿಯಲ್ಲಿ ಎಳ್ಳು ಹಾಕಿ ನಿಧಾನವಾಗಿ ಒಂದೊಂದೇ ಚಮಚ ಸಕ್ಕರೆ ಪಾಕ ಹಾಕುತ್ತ ಕೈ ಆಡಿಸುತ್ತಿರಬೇಕು. ಇದನ್ನು ನಮ್ಮ ಅವ್ವ ರಾತ್ರಿ ಮಲಗುವ ಮೊದಲು , ಎಲ್ಲ ಕೆಲಸ ಮುಗಿದ ಮೇಲೆ ಮಾಡುತ್ತ ಕೂಡುತ್ತಿದ್ದಳು. ಹೀಗೆ ಒಂದು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
April 27, 2018
“ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”. ಇದರಲ್ಲಿವೆ, ಅವರ ಏಳು ಬರಹಗಳು. ಪ್ರತಿಯೊಂದು ಬರಹವೂ ನಮ್ಮ ಭಾವನೆಗಳನ್ನು ತೀಡಿ, ಹೃದಯವನ್ನು ತಟ್ಟುತ್ತದೆ. ಅವನ್ನು ಓದುತ್ತ ಹೋದಂತೆ, ಮನಸ್ಸು ದ್ರವಿಸುತ್ತದೆ. ಇದು ನಮ್ಮದೇ ಮನೆಯ ತಾಯಿ-ಮಗಳ ಬಗೆಗಿನ ಬರಹಗಳು ಅನಿಸಿ ಬಿಡುತ್ತದೆ. ೨೦೧೧ರಲ್ಲಿ ಬೆಳಗಾವಿಯಲ್ಲಿ ಜರಗಿದ ವಿಶ್ವ ಕನ್ನಡ…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
April 26, 2018
ಮುಂದೊಮ್ಮೆ ಒಳಿತ ಕಂಡೆ ಕಾಣವೆವೆಂದು ದುಗುಡ ದುಮ್ಮಾನಗಳ ಸಹಿಸಿಹರು ಇಂದು | ಮೇಲೇರುವಾ ಆಸೆ ಜೀವಿಯ ಗುಣವಹುದು ಆಸೆಯಲೆ ಬದುಕಿಹುದು ಗೊತ್ತಿಹುದೆ ಮೂಢ|| 
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
April 25, 2018
ಸಕಲರನು ಪಾಲಿಪುದು ಪೊರೆಯುವುದೆ ಧರ್ಮ ಜಗದಗಲ ಜಗದುದ್ದ ಭೇದವೆಣಿಸದ ಮರ್ಮ | ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ ಇಹಪರಕೆ ಸಾಧನವು ಕರ್ಮವೋ ಮೂಢ || 
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
April 21, 2018
     ಮುಕ್ತಿಪಥ       ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8 ಸೂತ್ರಗಳಂತೆ ಒಟ್ಟು  40 ಸೂತ್ರಗಳನ್ನು ಅಳವಡಿಸಲಾಗಿದೆ. ಇದರ ಕನ್ನಡ ಭಾವಾನುವಾದವನ್ನು ಮೂಢನ ಮುಕ್ತಕಗಳ ರೂಪದಲ್ಲಿ ಸಹೃದಯರ ಮಂದಿಟ್ಟಿರುವೆ. ಮೂಲ ಕೃತಿಯನ್ನೂ ಇಲ್ಲಿ ಅವಗಾಹನೆಗೆ ಮಂಡಿಸಿದೆ.        ಮುಕ್ತಿಪಥ  (ಆದಿಗುರು ಶ್ರೀ…
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
April 14, 2018
"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ." "ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು. "ಹೇಳಿ ಸಾರ್, ಏನು ಬರೋಣವಾಯಿತು?" "ಒಂದು ಜಾತಿ ಸರ್ಟಿಫಿಕೇಟ್ ಬೇಕಿತ್ತು. ಕೌಂಟರಿನಲ್ಲಿ ಅರ್ಜಿ ಕೊಟ್ಟೆ. ತೆಗೆದುಕೊಳ್ಳಲಿಲ್ಲ. ತಹಸೀಲ್ದಾರರಿಗೇ ಕೊಡಿ ಅಂದರು. ಅದಕ್ಕೇ ನಿಮಗೇ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ". ಅರ್ಜಿ ನೋಡಿ ಬೆಚ್ಚಿಬಿದ್ದ ತಹಸೀಲ್ದಾರರು, "ಏನ್ಸಾರ್ ಇದು? ಬಸವಣ್ಣನವರ ಜಾತಿ…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
April 13, 2018
1. ರೂಪಕಗಳು   ಶಿಶಿರದಲ್ಲಿ ಅವಿತ  ಕೊರಳ ಬಿಸಿಯಾರದ ಮಾತು ಹೊಸ್ತಿಲೇರಿದ ಹೊಸ ಋತು  ಒಡೆವ ಸಂತಸದ ಚಿಗುರು ಚಿಲಿಪಿಲಿ ಕುಕು ಕಲರವ ಕೇಕೆಗಳು ವಸಂತನಿಗಂಟಿದ ರೂಪಕಗಳು     2. ಕಾಲರ್ ಟ್ಯೂನ್   ವಸಂತನಿಗೆ ವೈವಿಧ್ಯದ ಕಾಲರ್ ಟ್ಯೂನ್ ಹರಿಬಿಡುವ ಬಣ್ಣ ಬಣ್ಣದ  ವಿಧವಿಧ ಹಕ್ಕಿಗಳು     3. ಸಾಣೆ   ರಾತ್ರಿ ಅಚಾನಕ ಮಳೆ ಸುರಿದು  ಹೊಳೆವ ಬೆಳಗು  ವಸಂತನ ಸೊಂಪಿಗೆ ಹಕ್ಕಿ ಹೊರಳಿಸಿ ಕೊರಳು ಹಿಡಿದಿದೆ ಸಾಣೆ ಇಂಪಿಗೂ!   ಇನಿಯಳ ಸೆಳೆವ  ಹಕ್ಕಿಯ ಕಲೆ ಎಂಥ ಸೊಬಗು !!      4. ಯಾವ ಘರಾನ   ಎಷ್ಟು…
ಲೇಖಕರು: sadananda c
ವಿಧ: ಚರ್ಚೆಯ ವಿಷಯ
April 07, 2018
ನಾವು ಅದೆಷ್ಟೋ ಬಾರಿ ಖುಷಿ, ಸಂತೋಷ, ಆನಂದ, ನೆಮ್ಮದಿ ಇತ್ಯಾದಿ ಇತ್ಯಾದಿ ಪದಗಳಿಂದ ಕರಿಯಿಸಿಕೊಳ್ಳೋ ಅದನ್ನು ಅಥವಾ ಇವೆಲ್ಲದರ ಮಿಶ್ರಣದಂತೆ ಕಾಣಿಸಿಕೊಳ್ಳುವ ಆನಂದವನ್ನು ಕಂಡುಕೊಳ್ಳಲು ಸಫಲರಾಗುವುದೇ ಇಲ್ಲ ಎಂದೆನ್ನಿಸುತ್ತದೆ. ಅದೆಷ್ಟೋ ಬಾರಿ. ಅದೆಷ್ಟು ಹುಡುಕಿದರೂ ಅದೆಂದೂ ಸಿಗದ ಮಯಾಮ್ರುಗದಂತೆ ಮತ್ತಷ್ಟು ದೂರ ಓಡುತ್ತಲೇ ಇದೆಯೋ  ಎಂದೆನ್ನಿಸುತ್ತದೆ. ಎಂದಾದರು ಇದೇಕೆ ಹೀಗೆಂದು ಯೋಚಿಸಿದ್ದೀರ? ಹಾಗೆ ಯೋಚಿಸಿದ್ದೆ ಆದರೆ ನೀವು ಸರಿಯಾದ ದಾರಿಯಲ್ಲಿ ಅದನ್ನು ಹುಡುಕಲು ಮೊದಲ ಹೆಜ್ಜೆಯನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
April 04, 2018
ಜಮದಗ್ನಿಯ ಹೆಂಡತಿ ರೇಣುಕೆಗೆ ಬಿಸಿಲಿನಿ೦ದ ಬಳಲಿಕೆ ಆದ ಕಾರಣ " ಜಮದಗ್ನಿ ಸೂರ್ಯನ ಮೇಲೆ ಸಿಟ್ಟಿಗೆದ್ದಾಗ ಅವನು ಛತ್ರಿ ಮತ್ತು ಮೆಟ್ಟುಗಳನ್ನು ತಯಾರಿ ಮಾಡಿ ಕೊಟ್ಟನು ಅಂದಿನಿಂದ ಮಾನವರೆಲ್ಲ ಅವನ್ನು ಬಳಸುತ್ತಿದ್ದಾರೆ   ಬಾಲ ನಾಗಮ್ಮ ಹಾನುಗಲ್ಲು ರಾಜ್ಯದಲ್ಲಿ ಇದ್ದಳು   ಶೆಟ್ಟಿ ಇವತ್ತೇನೋ ಸಾಲ ಕೊಡುತ್ತಾನೆ. ಆದರೆ ವಾಯಿದೆ ತೀರಿದ ಮೇಲೆ ಆಡಬಾರದ ಮಾತು ಆಡುವನು , ಜಗಳಕ್ಕೆ ಎಳೆಯುವನು. - - ಕೋರ್ಟಿನ ಬದಲಾಗಿ ?   ಕಾಲಿಲ್ಲದ ಕುದುರೆ ಹತ್ತಿ ಹೋದ ಅಂದರೆ - - ಚಪ್ಪಲಿ ಹಾಕಿಕೊಂಡು ಹೋದ  …