ಎಲ್ಲ ಪುಟಗಳು

ಲೇಖಕರು: kamala belagur
ವಿಧ: ಬ್ಲಾಗ್ ಬರಹ
January 13, 2018
ಸಭ್ಯ ಸಂಸ್ಕೃತಿಯ ಹೆಗ್ಗುರುತು ನೀರು; ಬಾಯಾರಿದವರಿಗೆ ಅಮೃತ ಸ್ವರೂಪಿ ನೀರು; ಪ್ರಕೃತಿಯ ವರದಾನ ನೀರು; ಜೀವ ಜಂತುಗಳ ಜೀವದಾಯಿನಿ ನೀರು... ಕಣ್ಣು ಹಾಯಿಸಿದೆಡೆ ಹಸಿರು; ದಟ್ಟ ಕಾಡು ಹರಿವ ನೀರಿನ ಜುಳು ಜುಳು ನಿನಾದ; ಪಕ್ಷಿ ಸಂಕುಲದ ಚಿಲಿಪಿಲಿ ಗಾನ ಎಲ್ಲವೂ ಕಾಣೆಯಾಗಿಹುದಿಲ್ಲಿ.... ಮಾನವ ನಿರ್ಮಿತ ಗಗನ ಚುಂಬಿ ಕಟ್ಟಡಗಳು, ಹೂಳು ತುಂಬಿದ ಕೆರೆಕಟ್ಟೆಗಳು, ಗುಳೆ ಹೋದ ಪಕ್ಷಿ ಸಂಕುಲ ಮಾಯವಾದ ಮಳೆ ಬಟ್ಟ ಬಯಲಾದ ಕಾಡುಮೇಡು ಬರಿದಾದ ಭೂದೇವಿಯ ಒಡಲು... ಕಾಣೆಯಾಗಿಹುದಿಲ್ಲಿ ಮಾನವನ ಅಂತಃಸಾಕ್ಷಿ…
ಲೇಖಕರು: vishu7334
ವಿಧ: ಬ್ಲಾಗ್ ಬರಹ
January 11, 2018
IMDb: http://www.imdb.com/title/tt0079470/     ಎರಡನೇ ವಿಶ್ವ ಯುದ್ಧದ ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ- ಹೇಗೆ ಜಪಾನಿಗಳ ಈ ಒಂದು ದಾಳಿಯಿಂದ ಅಮೇರಿಕಾ ವಿಶ್ವ ಯುದ್ಧಕ್ಕೆ ಧುಮುಕಿತು ಮತ್ತು ವಿಶ್ವ ಯುದ್ಧದ ಚಿತ್ರಣವನ್ನು ಮತ್ತು ಭವಿಷ್ಯವನ್ನು ಬದಲಾಯಿಸಿತು. ಈ ಘಟನೆಯನ್ನೊಳಗೊಂಡ ಚಿತ್ರ ‘ಪರ್ಲ್ ಹಾರ್ಬರ್’ ಕೂಡ ಹಾಲಿವುಡ್ ನಲ್ಲಿ ನಿರ್ಮಾಣವಾಗಿತ್ತು. ಆದರೆ ಆ ಚಿತ್ರ ಪರ್ಲ್ ಹಾರ್ಬರ್ ನ ದಾಳಿಯನ್ನು ನೆಪವಾಗಿಟ್ಟುಕೊಂಡು ಆ ಘಟನೆಯಲ್ಲಿ ಭಾಗಿಯಾದ ಜನಗಳ…
ವಿಧ: ಬ್ಲಾಗ್ ಬರಹ
January 10, 2018
ಕನ್ನಡ ಬಂಧುಗಳೆ, ನನ್ನ "ಜೀವನ ತರಂಗಗಳು" ಹಾಗೂ "ಮಂಥನ" ಕವನಸಂಕಲನ ದಿಂದ ಕೆಲವು ಕವನಗಳನ್ನು ಆರಿಸಿ ಶ್ರೀ ಪುತ್ತೂರು ನರಸಿಂಹ ನಾಯಕ್ ಸಂಗೀತ ಜೋಡಿಸಿ ಅವರು ಹಾಗೂ ಕೆ.ಎಸ್ ಸುರೇಖ ಮತ್ತು ನಾಗಚಂದ್ರಿಕ ಭಟ್ ಸುಶ್ರಾವ್ಯ ವಾಗಿ ಹಾಡಿರುತ್ತಾರೆ.ಇದರಲ್ಲಿ ೯ ಗೀತೆಗಳಿದ್ದು ಸುಮಧುರ ಹಾಗೂ ಅರ್ಥಗರ್ಭಿತ ವಾಗಿವೆ.
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
January 02, 2018
ಅಭಿಮಾನಿಯ ನಾಲ್ಕು ಸಾಲು   ’ಭಕ್ತಿ’ ಮನಸ್ಸಿನ ಅನೇಕ ಚಕಿತ ಸ್ಥಿತಿಗಳಲ್ಲೊಂದು.   ’ದೈವ’ ಭಕ್ತಿ ಮನುಷ್ಯ ಮನಸ್ಸನ್ನು ತಿಳಿಯಾಗಿಸುವ ಒಂದು ದಾರಿಯೂ ಹೌದು.   ಈ ತಿಳಿಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ದೇವ’ಸ್ತುತಿ’.  ಅದಕ್ಕೆ ಇಂಬು ಕೊಟ್ಟು ಮನಸ್ಸನ್ನು ತೇಲಿಸುವುದು ಸ್ತುತಿ ಭಾವತುಂಬಿ ರಾಗದಲ್ಲಿ ಹರಿದಾಗ.    ಕೀರ್ತನೆಗಳಿಗೆ  ಪಂ.ಭೀಮಸೇನ ಜೋಶಿಯವರಂತೆ ಜೀವ ತುಂಬಿ ಹಾಡಿದವರು  ಶ್ರೀ ವಿದ್ಯಾಭೂಷಣರು.   ಸಂಗೀತ  ಜ್ಞಾನವಿಲ್ಲದ  ನನ್ನಂತಹ  ಮಂದಿಗೆ  ಅವರು  ತಮ್ಮ ಸಿರಿಕಂಠದಿಂದ…
ಲೇಖಕರು: raguks
ವಿಧ: ಪುಸ್ತಕ ವಿಮರ್ಶೆ
December 27, 2017
ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು. ಹೊಸ ವಿಷಯ ವಸ್ತುಗಳನ್ನು ಹೇಗೆ ಬಳಸಬೇಕು ಬಳಸಬೇಡವೇ, ರಂಗ ಮಾಧ್ಯಮದ ಚೌಕಟ್ಟೇನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ರಂಗಭೂಮಿಯ ರೂಪ ಎದ್ದು ನಿಲ್ಲುತ್ತದೆ. ಹೀಗೆ ಯಕ್ಷಗಾನ ಬಯಲಾಟದ ಸ್ವರೂಪ ಆಗುತ್ತಿರುವ ಬದಲಾವಣೆ ಹಾಗೂ ಸಂಬಂಧಿಸಿದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 15, 2017
1957ರ Pyasa ಚಿತ್ರದಲ್ಲಿನ ಗುರುದತ್ ಅಭಿನಯದhttps://youtu.be/0TnNOVn2HEo ಈ ಸುಪ್ರಸಿದ್ಧ ಹಾಡಿನ ಧಾಟಿಯಲ್ಲಿ ರಾಜಕುಮಾರ್ ಅಭಿನಯದ 1962 ರ ಮಹಾತ್ಮಾ ಕಬೀರ್ ಚಿತ್ರhttps://youtu.be/G_OS86a9IjM ದಲ್ಲಿ 43 ನಿಮಿಷಗಳ ನಂತರ ಈ ಕೆಳಕಂಡ ಸಾಲುಗಳ ಹಾಡನ್ನು ಕೇಳಿ ಮೂಲೋಕದಾ ನಾಥ ಶ್ರೀರಾಮನಮ್ಮ ಮಹಾರಾಮ ಸಂಕಲ್ಪಕೆದುರಿಲ್ಲವಮ್ಮ ಅನಾದಿ ಅನಂತ ಅಖಂಡ ಅಪಾರ ಸದಾ ಭಕ್ತರ ಪಕ್ಷ ಶ್ರೀರಾಮರಕ್ಷ ಪ್ರಭೋ ರಾಮ್ , ಪ್ರಭೋ ರಾಮ್ , ಪ್ರಭೋ ರಾಮ್ ! ರವಿ ತಾರೆ ಶತಕೋಟಿಗಳ ಕಾಂತಿ ರಾಮ ಮಹಾ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 11, 2017
ಇನ್ನೊಮ್ಮೆ ನಕ್ಕು ಬಿಡಿ! ಯಾಕೆಂದರೆ .... - - - - - - ಗುಂಪಿನಲ್ಲಿ ಒಬ್ಬ- ನಾನು ಈಗ ಹೇಳಲಿರುವ ನಗೆಹನಿಯನ್ನು ಸಜ್ಜನರಾದ ನೀವು ಯಾರಾದರೂ ಈಗಾಗಲೇ ಕೇಳಿದ್ದರೆ ನನ್ನನ್ನು ತಡೆಯಿರಿ . ಯಾರೋ ಒಬ್ಬರು ಬಾಯಿ ಹಾಕಿದರು - ನೀವು ಮುಂದುವರೆಸಿ ; ಸಜ್ಜನರಾರೂ ಯಾವುದೇ ನಗೆಹನಿಯನ್ನ ಅದಕ್ಕೂ ಮೊದಲು ಕೇಳಿರುವುದಿಲ್ಲ! - - - - - ಕೋಳಿಗಳು ತತ್ತಿ ಇಡುವುದು ಏಕೆ ? -ಎಸೆದರೆ ಒಡೆದು ಹೋಗುವವಲ್ಲ , ಅದಕ್ಕೆ ! - - - - - ನ್ಯಾಯಾಧೀಶ - ನೀವು ಗಂಡನಿಗೆ ಕುರ್ಚಿಯಿಂದ ಹೊಡೆದದ್ದೇಕೆ ? ಮಹಿಳೆ -…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 08, 2017
ಇದು ತುಂಬಾ ಹಳೆಯ ಸಿನಿಮಾ , ಕೆಲವು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ನೋಡಿದೆ. ಅಲ್ಲಿ ಗಮನಿಸಿದ ಕೆಲವು alliteration ವಾಕ್ಯಗಳು - ಮಾರ್ಕೆಟ್ ನಲ್ಲಿ ಮೂಸಿ ನೋಡೋ ಮುಠ್ಠಾಳ ಇಲ್ಲ ! - ಭವ್ಯ ಭಾರತದ ಭವಿಷ್ಯ ದ ಬುನಾದಿ ಭದ್ರವಾಗಿರಬೇಕಾದರೆ… - ಶಿಷ್ಯರಿಗೆ ಕರ್ಣೋಪದೇಶ ಮಾಡುವಾಗ ಕರ್ಕಶವಾದ ಕಂಠಕಹಳೆಯಿಂದ ….. - ಕಸುಬಿಗೆ ತಕ್ಕ ಕಂಕಣ ! - ಮಂಕು ಜನಕ್ಕೆ ಶಂಖದಲ್ಲಿ ಬಂದರೇ ತೀರ್ಥ ಕೆಲವು ತಮಾಷೆಯ ದೃಶ್ಯಗಳು/ಸಂಭಾಷಣೆಗಳು 1) ರೋಗಿಯಿಂದ ಡಾಕ್ಟರರ ಯೋಗಕ್ಷೇಮ ವಿಚಾರಣೆ ! - ಡಾಕ್ಟ್ರೇ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 06, 2017
ಪ್ರಾಚೀನ ಕಾಲದಲ್ಲಿ ಒಂದು ರಾಜ್ಯದಲ್ಲಿ. ವಿರಾಟ ಎಂಬ ಸ್ವಚ್ಛ ಮತ್ತು ಸಚ್ಚಾರಿತ್ರ ಉಳ್ಳ ವ್ಯಕ್ತಿ ಇದ್ದ. ಅವನು ಖಡ್ಗ ಪಟುವೂ ಆಗಿದ್ದ. ಅವನು ಪರಾಕ್ರಮಶಾಲಿ ಯೋಧನಾಗಿದ್ದರೂ ಗುಣದಲ್ಲಿ ಶಾಂತನು. ತುಂಬಾ ರಾಜಭಕ್ತ. ನ್ಯಾಯ ಬುದ್ಧಿಯಿಂದ ಹೆಸರಾಗಿದ್ದ. ವಿದ್ವಾಂಸರು ಅವನಿಗೆ ತಲೆಬಾಗುತ್ತಿದ್ದರು. ಮಕ್ಕಳು ಅವನ ಮುಗ್ಧ ಹೊಳಪಿನ ಕಣ್ಣುಗಳನ್ನು ನೋಡಿ ಸಂತಸ ಪಡುತ್ತಿದ್ದರು. ಒಂದು ಬಾರಿ ರಾಜನ ಭಾವನು ರಾಜನ ವಿರುದ್ಧ ಬಂಡೆದ್ದ. ಅವನು ತಾನೇ ರಾಜನಾಗಬೇಕೆಂಬ ಕನಸು ಕಾಣುತ್ತಿದ್ದ. ಮಹಾರಾಜರು ಈ…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
December 05, 2017
ಆಸ್ತಿಕ ಮಾಸ್ತಿಗೆ ನಾಸ್ತಿಕರೊಬ್ಬರು ಕೇಳಿದರು   'ದೇವರ ನೀವು ನಂಬುವಿರ ಅವನ ಇರುವಿಕೆಗೆ ಸಾಕ್ಷಿಇದೆಯ?'   ನಕ್ಕರು ಮಾಸ್ತಿ,  ನುಡಿ ಸ್ವಸ್ತಿ,   ’’ತಾಯಿಯ ನೆನೆ ಅವಳಲ್ಲವೆ ಮಮತೆಯ ಕೆನೆ? ನಿಸ್ವಾರ್ಥ ಕಳಕಳಿ ಕರುಣೆ ಅವಳ ವಾಂಛೆಗೆಲ್ಲಿಯ ಎಣೆ! ದೈವ ಭಾವ ಅಮೂರ್ತತೆ ...  ಅದರ ಮೂರ್ತ ರೂಪವೆ ಮಾತೆ   ಮಾತೃತ್ವದ ಹೃದಯ ಜೀವಿಗಳಿಗೆ ಕೊಟ್ಟ ಅದ್ಭುತವೆ ದೇವನಿರುವಿಗೆ ಸಾಕ್ಷಿಯಲ್ಲವೆ?”   ಉತ್ತರಿಸಿದರು ಮಗುವಿನ ನಗುವಿನ ಮಾಸ್ತಿ  ನುಡಿ ಸ್ವಸ್ತಿ                           - ಅನಂತ ರಮೇಶ್