ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ
ಇದು ತುಂಬಾ ಹಳೆಯ ಸಿನಿಮಾ , ಕೆಲವು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ನೋಡಿದೆ.
ಅಲ್ಲಿ ಗಮನಿಸಿದ ಕೆಲವು alliteration ವಾಕ್ಯಗಳು
- ಮಾರ್ಕೆಟ್ ನಲ್ಲಿ ಮೂಸಿ ನೋಡೋ ಮುಠ್ಠಾಳ ಇಲ್ಲ !
- ಭವ್ಯ ಭಾರತದ ಭವಿಷ್ಯ ದ ಬುನಾದಿ ಭದ್ರವಾಗಿರಬೇಕಾದರೆ…
- ಶಿಷ್ಯರಿಗೆ ಕರ್ಣೋಪದೇಶ ಮಾಡುವಾಗ ಕರ್ಕಶವಾದ ಕಂಠಕಹಳೆಯಿಂದ …..
- ಕಸುಬಿಗೆ ತಕ್ಕ ಕಂಕಣ !
- ಮಂಕು ಜನಕ್ಕೆ ಶಂಖದಲ್ಲಿ ಬಂದರೇ ತೀರ್ಥ
ಕೆಲವು ತಮಾಷೆಯ ದೃಶ್ಯಗಳು/ಸಂಭಾಷಣೆಗಳು
1)
ರೋಗಿಯಿಂದ ಡಾಕ್ಟರರ ಯೋಗಕ್ಷೇಮ ವಿಚಾರಣೆ !
- ಡಾಕ್ಟ್ರೇ , ಹ್ಯಾಗಿದೆ ದೇಹಸ್ಥಿತೀ ?
2)
-ತಡೀರಿ , ಸ್ವಲ್ಪ ಕಾಫಿ ತರ್ತೀನಿ.
-ಅದೆಲ್ಲ ಇರ್ಲಿ ಬಿಡಮ್ಮ ..
( ಇನ್ನೊಬ್ಬ ಬಾಯಿ ಹಾಕಿ) ನನಗೆ ಸ್ಟ್ರಾಂಗ್ ಇರ್ಲಿ !
3) ಡಾಕ್ಟರ್ ಹೇಳಿಕೆ
-ಹಾಸ್ಪಿಟಲ್ ನಲ್ಲಿ ಯಾವುದೋ ಪೇಶಂಟಿಗೆ ತುಂಬಾ ಸೀರಿಯಸ್ ಅಂತೆ . ಎಲ್ಲಾ ಏರ್ಪಾಡು ಮಾಡಿ ಬಂದೆ
??!! 'ಎಲ್ಲಾ' ಏರ್ಪಾಡು ? ಏನೆಲ್ಲ ಏರ್ಪಾಡು ಮಾಡಿ ಬಂದರೋ ? :)
4)
-ನನಗೆಲ್ಲೋ ನಾಷ್ಟಾ ?
-ಸುಮ್ಮನಿರೋ ದುಷ್ಟಾ !
5) ಕುಚೇಷ್ಟೆ ಇಲ್ಲದೆ ಪ್ರತಿಷ್ಠೆ ಬಾರದು.
6) ಎಲ್ಲಕ್ಕಿಂತ ಬಾಲಕೃಷ್ಣ ಅಭಿನಯದ ಈ ದೃಶ್ಯ ಸೂಪರ್ !
- ಇಲ್ಲೀತನ್ಕ ನಿಮ್ಮಿಂದ ಮುಚ್ಚಿಟ್ಟಿದ್ದ ಒಂದು ದೋಡ್ಡ ಧರ್ಮಸೂಕ್ಷ್ಮಾನ ನಿಮಗೆ ಈಗ ಬೋಧನೆ ಮಾಡುವೆ , ಗಮನ ಇಟ್ಟು ಕೇಳಿಸ್ಕೊಳ್ಳಿ . ಪ್ರಪಂಚದಲ್ಲಿ ತಂಟೆ ,ತಕರಾರು , ತರಲೆ ಮಾಡದೆ ಯಾವನೂ ದೊಡ್ಡ ಮನುಷ್ಯ ಆಗೋದಿಕ್ಕೆ ಸಾಧ್ಯವೇ ಇಲ್ಲ , ಕಾರ್ಯಸಾಧನೆ ಮಾಡೋನು ಅಂತಹ ಅವಕಾಶ ಸಿಕ್ಕೀತೇ ಅಂತ ಹೊಂಚು ಹಾಕಿ ಕಾಯ್ತಾ ಇರಬೇಕು. ಅವಕಾಶ ಸಿಕ್ಕಾಗ ದಯಾ-ದಾಕ್ಷಿಣ್ಯ , ಮಾನ-ಮರ್ಯಾದೆ , ರೀತಿ-ನೀತಿ ಅಂತ ಒಂದನ್ನೂ ನೋಡದೇ ಕೆಲಸ ಸಾಧಿಸಬೇಕು. …
- ತಂಟೆ ,ತಕರಾರು, ತರಲೆ ಅಂದ್ರೆ ಏನು ಗುರುಗಳೇ ?
- ಅದೆಲ್ಲಾ ಹೇಳಿ ಕೊಡೋ ವಿಷ್ಯ ಅಲ್ಲ , ಸಂಸ್ಕಾರದಿಂದ ಬರಬೇಕಾದ ದೈವದತ್ತ ವರ ಅದು.
Comments
ಉ: ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ
ನನ್ನ ಧಾಟಿಯ ನೀನರಿಯೆ.... ಹಾಡಿನ ೨ನೆಯ ಚರಣದ ಈ ಕೆಳಗಿನ ಸಾಲು ಕೂಡ alliterationನ ಉದಾಹರಣೆ ಅಲ್ಲವೇ?
"....ಕಾತರಿಸಿ ಕೈಹಿಡಿದ ಕಾಂತೆಯ ಹೃದಯ ಕಾಣಿಸದೇ...."
In reply to ಉ: ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ by keshavmysore
ಉ: ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ
ಹೌದು. 'ಮನ ಮೆಚ್ಚಿದ ಮಡದಿ " ಚಿತ್ರದಲ್ಲಿ ಇಂಧ ವಾಕ್ಯಗಳು ರಾಶಿ ರಾಶಿ!
In reply to ಉ: ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ by shreekant.mishrikoti
ಉ: ಬೆರೆತ ಜೀವ - ನಾನು ನೋಡಿದ ಹಳೆಯ ಸಿನಿಮಾ
ಆದರೆ ".... ನನ್ನ ಧಾಟಿಯ ನೀನರಿಯೆ...." ಬೆರೆತ ಜೀವ ಚಿತ್ರದ್ದಲ್ಲವೆ?