ಎಲ್ಲ ಪುಟಗಳು

ಲೇಖಕರು: gururajkodkani
ವಿಧ: Basic page
February 21, 2008
ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತಿದ್ದ೦ತೆ,ಆ 30 ವರ್ಷದ ವ್ಯಕ್ತಿ ಜೋರಾಗಿ "ಅಪ್ಪಾ,ಅಪ್ಪಾ...ಹೊರಗಡೆ ಕಾಡು ನೋಡಪ್ಪಾ...ಎಷ್ಟು ಚೆನ್ನಾಗಿದೆ ಅಲ್ವಾ.."? ಎ೦ದು ಕಿರುಚಿದ ಚಿಕ್ಕ ಮಗುವಿನ೦ತೆ, 30 ವರ್ಷದ ಯುವಕನ ಈ ರೀತಿಯ ವರ್ತನೆ ಸುತ್ತಲಿನ ಜನರಿಗೆ ಆಶ್ಚರ್ಯವನ್ನು೦ಟು ಮಾಡಿತು.ಎಲ್ಲರೂ ಆ ವ್ಯಕ್ತಿಯ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 21, 2008
ನಾನು ಒಬ್ಬ ಅಳಿಯನಾಗಿರುವುದರಿಂದ 'ಅಳಿಯ' ಪದದ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಏನಪ್ಪ ಇದು ಅಳಿಯ ಅಂದ್ರೆ ಎಶ್ಟೊ ಸಲ ತಲೆ ಕೆರೆದುಕೊಂಡಿದ್ದೆ. ಕೊನೆಗೆ ಕೊಳಂಬೆ ಪುಟ್ಟಣ್ಣಗೌಡರ ನಿಗಂಟಿನಲ್ಲಿ ಇದಕ್ಕೆ ಉತ್ತರ ಸಿಕ್ಕಿತು.ನಮ್ಮ ಹಿರಿಯರು ಹೇಗೆ ಒಂದೊಂದು ಪದದಲ್ಲಿ ಸಮಱಿ(ಒಪ್ಪವಾಗಿಸಿ) ಅರಿತವನ್ನ ಅಡಗಿಸಿಟ್ಟಿದ್ದಾರೆ ಅಂತ ತಿಳಿದಾಗ ತುಂಬ ನಲಿವಾಯಿತು. ಅಳಿಯ = ಬಯಸುವವನು, ಎಳಸುವವನು ( 'ಹಬ್ಬಿಗ' ಅಂತಾನು ಅಂತರಂತೆ, ಹಬ್ಬಿಗ ಅಂದ್ರೆ ಎಲ್ಲ ಹಬ್ಬಗಳಲ್ಲು ಇರುವವನು) ಮಾದರಿ: ಚಳಿವೆಟ್ಟಳಿಯ…
ಲೇಖಕರು: prasadbshetty
ವಿಧ: Basic page
February 21, 2008
ಸಿಹಿ ಮುತ್ತುಗಳೊಂದಿಗೆ...with sweet kiss..." ® ಸಿಹಿ ಮುತ್ತು..... ಇಂದಿನ ಸಿನೀಮಾಗಳಲ್ಲಿನ ನಾಯಕ ನಾಯಕಿಯರು ಕೊಟ್ಟು ಕೊಳ್ಳುವ ಸಿಹಿಮುತ್ತು... ಆಗಬಹುದಲ್ಲವೇ ಅವರ ಜೀವಕ್ಕೆ ಅಪತ್ತು...? ® .....ಅನುಕರಣೆ ಇಂದಿನ ಸಿನೀಮಾಗಳಲ್ಲಿನ ನಾಯಕ ನಾಯಕಿಯರು ಕೊಂಡು ಕೊಟ್ಟು ಕೊಳ್ಳುವ ಸಿಹಿಮುತ್ತುಗಳು ವಿದೇಶಿಯರ ಅನುಕರಣೆಯೇ...? ? ಪ್ರಸಾದ್
ಲೇಖಕರು: roopablrao
ವಿಧ: ಬ್ಲಾಗ್ ಬರಹ
February 21, 2008
ಮೊನ್ನೆ ಆಟೊಗಾಗಿ ಕಾಯುತ್ತಿದ್ದೆ. ನಮ್ಮ ಎಲೆಕ್ಟ್ರಾನಿಕ್ ಸಿಟಿ ಎಂದರೆ ಯಾರೂ ಬರುವುದಿಲ್ಲ. ಬೇರೆ ಆಟೊ ಹುಡುಕುತ್ತಿದ್ದೆ. ಆಷ್ಟರಲ್ಲಿ ಒಬ್ಬ ಮಹಿಳೆ ಬಂದಳು. ನನ್ನನ್ನು ಯಾವುದೋ ಅಡ್ರೆಸ್ ಕೇಳಿದಳು (ತಮಿಳಲ್ಲಿ). ನಾನು ತಮಿಳು ಬರುವುದಿಲ್ಲವಾದರೂ "ನಂಗೆ ತೆರಿಯಾದು. ಆಟೊ ಕೇಳ್ಂಗೊ" ಎಂದೆ. ಆಕೆ ಆಟೊವೋಂದರ ಬಳಿಗೆ ಹೋಗಿ ಕೇಳಿದಳು ತಮಿಳಿನಲ್ಲೆ. ಆತ ಕೊಟ್ಟ ಉತ್ತರ "ಅಮ್ಮ ನಮ್ಮ ತಾಯಿ ಕನ್ನಡನಲ್ಲಿ ಕೇಳಮ್ಮ " ಆಕೆ" ಎನಕ್ಕೆ ಕನ್ನಡ ತೆರಿಯಾದು. ಉನಕ್ಕೆ ತಮಿಲ್ ವರದಿಲ್ಲೆಯಾ?" ಎಂದಳು…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
February 21, 2008
ಮಂಗಳೂರಿನ ಕೆಲವು "ಅತಿಮಡಿವಂತ" ಕಾಲೇಜು ಹಿಂದಿ ಅಧ್ಯಾಪಕರು "'ಸಂಸ್ಕಾರ' ಕಾದಂಬರಿಯನ್ನು ಬೋಧಿಸಲು ಮುಜುಗರವಾಗುತ್ತದೆ, ದಯವಿಟ್ಟು ಅದನ್ನು ತೆಗೆದುಹಾಕಿ," ಎಂದದ್ದು ನಿಮಗೆ ಗೊತ್ತಿರಬಹುದು. ಅವರ ಈ ಕೋರಿಕೆಗೆ ಆ ಪ್ರದೇಶದ ಸಾಹಿತ್ಯಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಿವೆ ಎನ್ನುವ ಸಂದೇಹ ನನ್ನದು. ಆದರೆ ಆ ಆಯಾಮಗಳು ಇಲ್ಲಿ ಅಪ್ರಸ್ತುತ. ಇಲ್ಲಿ ನಮಗೆ ಮುಖ್ಯವಾಗಬೇಕಿರುವ ಆಯಾಯಮವನ್ನು ಮುಂದಿಟ್ಟುಕೊಂಡು, ಸ್ಯಾನ್‍ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ (ಮೈಸೂರು ಮೂಲದ)…
ಲೇಖಕರು: narendra
ವಿಧ: ಪುಸ್ತಕ ವಿಮರ್ಶೆ
February 20, 2008
ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ) ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019 ಪುಟಗಳು:105+6 ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ…
ಲೇಖಕರು: narendra
ವಿಧ: Basic page
February 20, 2008
ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ) ಭಾಸ್ಕರ ಹೆಗಡೆ ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019 ಪುಟಗಳು:105+6 ಬೆಲೆ:ರೂ.100 ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ…
ಲೇಖಕರು: Girishmg
ವಿಧ: Basic page
February 20, 2008
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈ-ಕವಿಯು ಹೆಚ್ಚಾಗಿ ಉತ್ಸಾಹಿ ಯುವಕರನ್ನು ಸದಸ್ಯರನ್ನಾಗಿಹೊಂದಿದ್ದು, ಅವರಲ್ಲಿ ಪ್ರಮುಖವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಿದ್ದಾರೆ. ಈಚಿನ ದಿನಗಳಲ್ಲಿ ಈ-ಕವಿ ಸಂಸ್ಥೆ , ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
February 20, 2008
ವಿದ್ಯೆಗೆ...ಸರಸ್ವತಿ,...ದುಡ್ಡಿಗೆ...ಲಕ್ಷ್ಮಿ,...ಆದರೆ...,ಫ್ಯಾಶನ್‍ಗೆ ಯಾವ ದೇವರು.....?
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 20, 2008
ಹದಿನಾರರ ಈಚೆ ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ. ಹದಿನಾರರ ಆಚೆ ಖುಷಿ ಮತ್ತು ಅಳಲು ಯಾವುದರೊಳಗೆ ಯಾವುದು ಹುಡುಕಿಕೊಳ್ಳುವುದೇ ದೊಡ್ಡ ಪಾಠ.