ವಿಧ: Basic page
April 02, 2008
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನಲ್ಲಿರುವ, ಬೆಂಗಳೂರಿನಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಸುಮಾರು ೧೦೦ ಕಿ.ಮಿ. ದೂರದಲ್ಲಿರುವ ಯಡೆಯೂರು ತೀರ್ಥಕ್ಷೇತ್ರ ದರ್ಶನಾರ್ಥಿಗಳಿಗೆ, ಲಿಂಗಾಯತ ಸಮುದಾಯಕ್ಕೆ ಮುಖ್ಯವಾಗಿ, ಪ್ರಮುಖವಾದ ಯಾತ್ರಾಸ್ಥಳ. ಇತ್ತೀಚೆಗೆ ಒಂದು ಅಂತರ ಜಾತಿ ವಿವಾಹಕ್ಕಾಗಿ ಅಲ್ಲಿಗೆ ನಾನು ಭೇಟಿ ಕೊಟ್ಟಾಗ ಅಲ್ಲಿನ ಪರಿಸರವನ್ನು ನೋಡಿ ಅತ್ಯಂತ ಸಂತೋಷವಾಯಿತು. ಭಕ್ತಿಯುಕ್ಕಿಸುವ ದೇವಾಲಯವಿದೆ. ಸಿದ್ದಲಿಂಗೇಶ್ವರಸ್ವಾಮಿಯ ದೇವಾಲಯ. ಹೋದವರಿಗೆ ಸುಲಭವಾಗಿ ದೊರಕುವ…
ವಿಧ: ಬ್ಲಾಗ್ ಬರಹ
April 02, 2008
ದಾಸ ಸಾಹಿತ್ಯದ ವಿಷಯದಲ್ಲಿ ಕನ್ನಡ ಸಾರಸ್ವತ ಲೋಕ ಬಹಳ ಶ್ರೀಮಂತವಾಗಿದೆ. ಸುಮಾರು ೧೩೦೦೦ ಕ್ಕೂ ಹೆಚ್ಚು ಕೀರ್ತನೆಗಳು, ೩೦೦೦ ಸುಳಾದಿಗಳು, ೫೦೦ ಉಗಾಭೋಗಗಳು ಇತ್ಯಾದಿ ಇದುವರೆಗೆ ದೊರೆತಿರುವ ಅಂಕಿ ಅಂಶಗಳು. ದಾಸಸಾಹಿತ್ಯ.ಆರ್ಗ್ ನಲ್ಲಿ ಇವೆಲ್ಲವನ್ನೂ ಶೇಖರಿಸಲಾಗಿದೆ ಎಂದು ಕೇಳಿದೆ, ಇದೊಂದು ಕರ್ನಾಟಕ ಸರ್ಕಾರದ ಯೋಜನೆ. ಆದರೆ ಆ ತಾಣವನ್ನು ತೆಗೆದು ಓದಲು ಸಾಧ್ಯವಾಗುತ್ತಿಲ್ಲ. ಕೆಲವು ತಂತ್ರಾಂಶ ತೊಂದರೆಗಳಿವೆ ಅನ್ನಿಸುತ್ತೆ. , ಇಷ್ಟೆಲ್ಲಾ ಮಾಡಿದರೂ ಹೀಗೆ ಓದುಗರಿಗೆ ಅನುಕೂಲವಾಗದಿದ್ದರೆ…
ವಿಧ: Basic page
April 02, 2008
ಸಂದರ್ಶನ ಪ್ರಾರಂಭವಾಗಿತ್ತು. ಮೊದಲ ಅಭ್ಯರ್ಥಿಯನ್ನು ಒಳಗೆ ಕರೆದರು
ಸಂದರ್ಶಕ ೧ ಅಭ್ಯರ್ಥಿಗೆ: ಬನ್ನಿ, ಕುಳಿತುಕೊಳ್ಳಿ, ಭಾರತಕ್ಕೆ ಯಾವಾಗ ಸ್ವಾತಂತ್ರ್ಯ ಬಂತು ತಿಳಿಸುವಿರಾ?
ಅಭ್ಯರ್ಥಿ: ಸ್ವಾತಂತ್ರ್ಯಕ್ಕಾಗಿ ಬಹಳ ವರ್ಷಗಳಿಂದ ಹೋರಾಟ ನಡೆದಿತ್ತು, ಕೊನೆಗೆ ೧೯೪೭ರಲ್ಲಿ ಅದು ಫಲಪ್ರದವಾಯಿತು.
ಸಂದರ್ಶಕ ೨ ಅಭ್ಯರ್ಥಿಗೆ: ಸ್ವಾತಂತ್ರ್ಯ ಗಳಿಸಿದ್ದಕ್ಕೆ ಪ್ರಮುಖ ವ್ಯಕ್ತಿ ಯಾರೆಂದು ಪರಿಗಣಿಸಲಾಗುತ್ತದೆ?
ಅಭ್ಯರ್ಥಿ : ಯಾರೆಂದು ಹೇಳುವುದು. ಹಲವಾರು ಜನ ಶ್ರಮಿಸಿದ್ದಾರೆ. ಒಬ್ಬರ ಹೆಸರು…
ವಿಧ: ಚರ್ಚೆಯ ವಿಷಯ
April 02, 2008
ನಮಸ್ಕ್ರಾರ ಸಂಪದ ಮಿತ್ರರೆ,
ನಿಮಗೆ ಜ್ಣಾಪಕ ಇದ್ದರೆ, ಪಿ.ಲಂಕೇಶ್ ಹೊರತರುತ್ತಿದ್ದ "ಲಂಕೇಶ್ ಪತ್ರಿಕೆ (ಜಾಣ ಜಾಣೆಯರ ಪತ್ರಿಕೆ)"ಯಲ್ಲಿ ಪುಂಡಲೀಕ ಶೇಟ್ ಬರೆಯುತ್ತಿದ್ದ
"ಬಯಲು ಸೀಮೆ ಕಟ್ಟೆ ಪುರಾಣ" ಎಂಬ ಅಂಕಣ ಬರುತ್ತಿತ್ತು.
ನಾನು ಅವಾಗ ಸುಮಾರು 6 ಅಥವಾ 7 ನೇ ಇಯತ್ತೆಯಲ್ಲಿ ಇದ್ದೆ. ಅದಾದ ಮೇಲೂ ಸುಮಾರು ವರ್ಷ ಬರ್ತಾ ಇತ್ತು.
ಯಾರ ಬಳಿಯಾದರೂ ಅದರ ಸಂಗ್ರಹ ಇದ್ರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಲು ಸಾಧ್ಯವೇ ?
ಕಟ್ಟೆ ಶಂಕ್ರ
http://somari-katte.blogspot.com
ವಿಧ: ಬ್ಲಾಗ್ ಬರಹ
April 02, 2008
ಬರೀ ಸೀರಿಯಸ್ ಆಗಿ ಮಾತಾಡ್ತಾ, ಬರೀತಾ ಇದ್ರೆ, ತುಂಬಾ MONOTONOUS ಅನ್ಸುಕ್ಕೆ ಶುರು ಆಗತ್ತೆ, ಅಲ್ವಾ ?
ಅದಕ್ಕೆ, ಊಟದ ಮಧ್ಯೆ ಉಪ್ಪಿನಕಾಯಿ ಥರ ಒಂದು ಸಣ್ಣ ಪೋಲಿ ಜೋಕು. ಬೈಬೇಡಿ ಪ್ಲೀಸ್.
-------------------------------------------------------------------
ಪುಟ್ಟ, ಪುಟ್ಟಿ ಇಬ್ರಿಗೂ 10 ವರ್ಷ, ಆದ್ರೂ ತಾವಿಬ್ರೂ ಒಬ್ಬರನ್ನ ಒಬ್ರು ಲವ್ ಮಾಡ್ತಾ ಇರೋದು ಚೆನ್ನಾಗಿ ಗೊತ್ತು.
ಒಂದಿನ, ಅವ್ರಿಬ್ರೂ ಮದ್ವೆ ಆಗಕ್ಕೆ ಡಿಸೈಡ್ ಮಾಡ್ತಾರೆ. ಸರಿ ಅಂತ, ಪುಟ್ಟ ಇದ್ದೋನು ಪುಟ್ಟಿಯ…
ವಿಧ: Basic page
April 02, 2008
ಭಾಗ್ಯ...
ಯಾರಿಗೂ
ಸಿಗದ
ಭಾಗ್ಯ
ನನ್ನ
ಗೆಳತಿಯ
ರವಿಕೆಯೊಳಗಿನ
ಪರ್ಸಿನದ್ದು....
ಆದರೂ
ತಾನಿರುವ
ಜಾಗವನರಿಯದೆ
ಒದ್ದಾಡುತ್ತಿದೆ...
ಬಿಗಿಯಾಗುತ್ತಿದೆಯೆಂದು"
ವಿಧ: Basic page
April 01, 2008
ದೇವಾಲಯ ಚೆನ್ನಾಗಿರಬಹುದೆಂಬ ನಿರೀಕ್ಷೆಯೊಂದಿಗೆ ಕೂಡ್ಲಿಗಿ ತಾಲೂಕಿನ ಅಂಬಳಿ ತಲುಪಿದರೆ, ಕಲ್ಲೇಶ್ವರ ದೇವಾಲಯ ನಿರಾಸೆ ಮಾಡಿತು. ದೇವಾಲಯದ ಸಂಪೂರ್ಣ ನೋಟ ಎಷ್ಟು ನಿರಾಶದಾಯಕವಾಗಿತ್ತೆಂದರೆ, ದೇವಾಲಯದ ಒಂದೇ ಒಂದು ಸಂಪೂರ್ಣ ಚಿತ್ರವನ್ನು ನಾನು ತೆಗೆಯಲಿಲ್ಲ. ಇದು ಚಾಲುಕ್ಯ ಕಾಲದ ಏಕಕೂಟ ದೇವಾಲಯ. ಅಲ್ಲಿದ್ದ ಪುರಾತತ್ವ ಇಲಾಖೆಯ ಸಿಬ್ಬಂದಿಯ ಪ್ರಕಾರ, ದೇವಾಲಯದ ಗೋಪುರಕ್ಕೆ ಹಲವು ಬಾರಿ ಸುಣ್ಣ ಬಳಿದು ಬಳಿದು ಅದು ತನ್ನ ಅಂದಗೆಡಿಸಿಕೊಂಡ ಬಳಿಕ ಊರವರು ಕಡೆಗೆ ಅದನ್ನು ಬೀಳಿಸಿ(?) ಅದರ ಜಾಗದಲ್ಲಿ…
ವಿಧ: Basic page
April 01, 2008
ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.
ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ…
ವಿಧ: Basic page
April 01, 2008
ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ.ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಬೇಕು ಎಂಬುದಾಗಿ ಹೇಳಿದ್ದರು.
ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು…
ವಿಧ: ಬ್ಲಾಗ್ ಬರಹ
April 01, 2008
ಆಗಿದ್ ಆಗೇ ಬಿಡ್ಲಿ ಅವಳಿಗೆ ಒಂದ್ ಸಲನಾದ್ರು ಹೇಳ್ ಬಿಡ್ಬೇಕು....."ಏಯ್ ಹುಡ್ಗಿ ನೀನ್ ನನ್ಗೆ ಜೀವ್ ಕಣೆ ಅಂಥಾ...." ಆದ್ರೆ ಏನ್ ಮಾಡ್ಲಿ ನನ್ನ ಮನದ್ ಪಿಸುಪಿಸು ಮಾತಿಗೂ ಹೂಂಗುಟ್ಟೋ ಹೂ ಮನಸಿ ಹುಡ್ಗಿನ್ ಬರೀ ನನ್ನ ಸ್ವಾರ್ಥಕ್ಕಾಗಿ ನೋಯಿಸೋದು ಅಂದ್ರೆ....... ಹೋಗ್ಲಿ ನೀನೆ ಯೋಚ್ಸು ’ನಿನ್ ಭಾವನೆಗಳಿಗೆ ಘಾಸಿ ಮಾಡೋದಾಗ್ಲಿ ಅಥ್ವಾ ನನ್ ಭಾವನೆಗಳಿಗೆ ಮೋಸ ಮಾಡ್ಕೋಳೋದಾಗ್ಲಿ ಎರಡೂ ತಪ್ಪೇ ಅಲ್ವಾ....’ ಇದನ್ನ ನಿಂಗೆ ಹೇಗ್ ಅರ್ಥ…