ಎಲ್ಲ ಪುಟಗಳು

ಲೇಖಕರು: shekarsss
ವಿಧ: Basic page
January 03, 2008
ನೋಡಾ ನಗರೀಕರಣದ ಲಗ್ಗೆ ಸೆಳೆಯುತಿದೆ ಎಲ್ಲರ ಜಗ್ಗಿ ಜಗ್ಗಿ ಆಗಸದೆತ್ತರ ಏರಿದೆ ನೆಲದ ಬೆಲೆ ಕಂಗಾಲಾಗಿಹರು ಜನ ಸಿಗದು ನೆಲೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ, ಜನ ಮಾಲಿನ್ಯ ಭೂಗಳ್ಳರ ಹಾವಳಿ, ಭೂಗತರ ಧಾಳಿ ಎಲ್ಲವೂ ಅಸ್ಥವ್ಯಸ್ಥ, ಎಲ್ಲರೂ ತಟಸ್ಥ ಎಗ್ಗಿ ನಡೆಯುತಿದೆ ಕಾರುಬಾರು ಇದ್ದವರದ್ದೇ ಇಲ್ಲಿ ದರಬಾರು ಸಾಮಾನ್ಯ ಜನತೆಯ ಕನಸುಗಳ ಕೊಂದು ಮೆಕ್ಕುವರು ರಸಗವಳ ನಿಲ್ಲದೆ ಸಾಗಿದೆ ನಿತ್ಯ ಹರಣ ಹಬ್ಬಿದೆ ಎಲ್ಲೆಡೆ ಅಸಮತೋಲನ ಕುಣಿದಾಡುತಿದೆ ಪಾಪದ ಹಣ ಕುರುಡಾಗಿಹರು ಇಲ್ಲಿ ಬಹಳ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
January 03, 2008
  ರೈಲು ಬ್ರಿಡ್ಜಿನಡಿ ತೊರೆಯ ನೀರಲ್ಲಿ ಆಡುವ ಬಾತುಕೋಳಿ ಜೋಡಿ ಉರುಳುವ ಗಾಲಿ ಎಬ್ಬಿಸುವ ನೀರ ಕಂಪನಕ್ಕೆ ಮೈ ಒಡ್ಡುತ್ತ ನಲಿದಿದೆ  
ಲೇಖಕರು: shekarsss
ವಿಧ: Basic page
January 03, 2008
ಅವಸರದ ಜೀವನ ಅತಿವೇಗದ ಯಾನ ಅತಿ ಉದ್ವೇಗದ ಮನ ಆಧುನಿಕತೆಯ ವರದಾನ ಹತ್ತು ಹಲವು ದಾರಿ ಕವಲೊಡೆದ ಗುರಿ ದ್ವಂದ್ವ ಮನಸ್ಥಿತಿಯ ಪರಿ ಕಂಗೆಡುತಿದೆ ಮತಿ ಜಾರಿ ಮನಸುಗಳು ಮಲಿನ ಮಾತುಗಳು ಮಾಲಿನ್ಯ ಮೌಲ್ಯಗಳ ಪಲಾಯನ ಸರಿದ ಸಾತ್ವಿಕ ಜೀವನ
ಲೇಖಕರು: vinay_bomma
ವಿಧ: ಬ್ಲಾಗ್ ಬರಹ
January 03, 2008
ಕೆಲ ದಿನನ ಹಿಂದೆ ಅಸ್ಟೆ ನಾನು ಇಲ್ಲಿ ಸೇರಿಕೊಂಡೆ. ಎಲ್ಲರೂ ಅವರು ತಿಳಿದಿದ್ದನ್ನ ಬರೀತಾ ಇದ್ದಾರೆ, ಸುಮಾರು ಲೇಖನ ಓದಿದೆ. ನನಗೂ ಏನಾದರೂ ಬರೆವ ಆಸೆ. ಒಬ್ಬರು ಯಾರೋ ಹೀಗೆ ಬರೆದಿದ್ದರು.... "ಪ್ರೀತಿ ತ್ಯಾಗ....????" ಅಂತ, ಸುಮ್ಮನೇ ನನಗೆ ತಿಳಿದಿದ್ದನ್ನ ಬರೆಯುವ ಆಸೆ ಆಯಿತು. ಹೇಗೋ ಒಫೀಸಿನಲ್ಲಿ ಬಿಡುವಿನ ಸಮಯದಲ್ಲಿ... ..! "ಪ್ರೀತಿ......... ತ್ಯಾಗ....????" ಪ್ರೀತಿಯಲ್ಲಿ ನನಗೆ ಇನ್ನೂ ಅನುಭವ ಇರದ ಕಾರಣ, ನಾನು ನನ್ನ ಸ್ನೇಹಿತರ ಜೊತೆ ಆದದ್ದನ್ನು ನೋಡಿ ಸ್ವಲ್ಪ ಪ್ರೀತಿ…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
January 03, 2008
ಒಗಟುವಿನ ಉತ್ತರ ಹುಡುಕಿ... * ಕೆಂಪು ಅಜ್ಜಿಗೆ ಬಿಳಿ ಕೊಡೆ...___ * ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ...___
ಲೇಖಕರು: shekarsss
ವಿಧ: Basic page
January 03, 2008
ಕನಸಿನ ಲೋಕ ಅಮೇರಿಕಾ ಹಂಗಂತಾರೆಲ್ಲರು ಯಾಕಾ ಇದು ಐಶಾರಾಮಿ ಜೀವನಕಾ ಭೂರಮೆಯೊಳಗಿನ ನಾಕ ಕುಡಿಯೊಡೆದೊಡನೆ ಕಿವಿಹಿಂಡಿ ಅಲ್ಲಿಯ ಕನಸನು ಬಿತ್ತುವರು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಪಯಣವ ಅಲ್ಲಿಗೆ ಬೆಳೆಸುವರು ಪಾಲಕರಿಗೆ ಸಾರ್ಥಕ ಮನೋಭಾವ ಮಕ್ಕಳಿಗೆ ಸಾಧಿಸಿದ ಅನುಭವ ಹೊಸ ಹುರುಪು ಹೊಸ ಉಲ್ಲಾಸ ಅತಿ ಸುಂದರ ಆ ಕ್ಷಣ ಆ ದಿನ ಆದಷ್ಟು ಕನಕ ಅತ್ಯಧಿಕ ಸುಖ ಮತ್ತೆ ಬಂದಾರಾ ಇಲ್ಲಿಯ ತನಕ ಮರೆಯಲಾಗದ ಹೆತ್ತವರ ತವಕ ಕಾಣುವರು ಕೊನೆಗೆ ಮುಪ್ಪಿನಲಿ ನರಕ ( ಮರೆತವಿರಿಗಾಗಿ ಮಾತ್ರ ಅನ್ವಯ )
ಲೇಖಕರು: sunilkumara.ms
ವಿಧ: ಬ್ಲಾಗ್ ಬರಹ
January 03, 2008
ಬನ್ನಿ ಗೆಳೆಯರೇ ಬನ್ನಿ ಎಲ್ಲರೂ ಒಂದುಗೂಡಿ ಬನ್ನಿ ನಾವು ನೀವೆಲ್ಲರೂ ಸೇರಿ ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ ಆಚರಿಸುವ ಹೊಸ ವರುಷವ ಸಂಭ್ರಮಿಸಿ ಸವಿಯುವ ನವ ಹರುಷವ ಹಿಂದಣದ ಕಹಿಯನು ಮರೆವಿನ ಹಾದಿಯಲ್ಲೇ ಮರೆತು ಮುಂದಣದ ಏಳಿಗೆಯ ಹಾದಿಯನು ಮರೆಯದ ಮನದಿಂದ ನೆನೆದು ಒಬ್ಬರನೊಬ್ಬರು ಅಂತರಾಳದಿಂದ ಅರಿತು ಸಂತಸದ ಸವಿ ಸೊದೆಯಲಿ ಬೆರೆತು ನಮ್ಮೆಲ್ಲರ ಭವಿಷ್ಯದ ಹಾಡಿಗೆ ಬೆಳಕಾಗುವ ರಸ ಕವಿತೆಯೊಂದು ರಚಿಸುತಾ ಕಣಿದು ಕುಣಿದು ಹಾಡುವ ಬನ್ನಿ! ರಚನೆ…
ಲೇಖಕರು: sunilkumara.ms
ವಿಧ: Basic page
January 03, 2008
ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೦೮ -ಸುನಿಲ್ ಮಲ್ಲೇನಹಳ್ಳಿ ಬನ್ನಿ ಬನ್ನಿ ಗೆಳೆಯರೇ ಬನ್ನಿ ಎಲ್ಲರೂ ಒಂದುಗೂಡಿ ಬನ್ನಿ ನಾವು ನೀವೆಲ್ಲರೂ ಸೇರಿ ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ ಆಚರಿಸುವ ಹೊಸ ವರುಷವ ಸಂಭ್ರಮಿಸಿ ಸವಿಯುವ ನವ ಹರುಷವ ಹಿಂದಣದ ಕಹಿಯನು ಮರೆವಿನ ಹಾದಿಯಲ್ಲೇ ಮರೆತು ಮುಂದಣದ ಏಳಿಗೆಯ ಹಾದಿಯನು ಮರೆಯದ ಮನದಿಂದ ನೆನೆದು ಒಬ್ಬರನೊಬ್ಬರು ಅಂತರಾಳದಿಂದ ಅರಿತು ಸಂತಸದ ಸವಿ ಸೊದೆಯಲಿ ಬೆರೆತು ನಮ್ಮೆಲ್ಲರ ಭವಿಷ್ಯದ ಹಾದಿಗೆ ಎಂದೆಂದೂ ಬೆಳಕಾಗುವ ರಸ ಕವಿತೆಯೊಂದು ರಚಿಸುತಾ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
January 03, 2008
ಇಂಡೋನೇಷ್ಯಾದ ಬಾಲಿ ಪಟ್ಟಣದಲ್ಲಿ ಜಗತ್ತಿನ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮಾವೇಶ ಕಳೆದ ತಿಂಗಳು ನಡೆಯಿತು. ಜಗತ್ತೆಲ್ಲ ಕಳೆದ ಶತಮಾನದಿಂದೀಚೆಗೆ ಭೂಮಿಯ ಮೇಲೆ ಘಟಿಸುತ್ತಿರುವ ಹವಾಮಾನದ ವೈಪರೀತ್ಯಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಒಂದು ಒಮ್ಮತದ ತೀರ್ಮಾನಕ್ಕೆ ಬರುತ್ತಿದ್ದರೆ, ಜಗತ್ತಿನ ದೊಡ್ಡಣ್ಣ ಅಮೆರಿಕ ಮಾತ್ರ ಹಠ ಮಾಡುತ್ತಿತ್ತು. "ನಾವು ಇಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಣಯವನ್ನು ಒಪ್ಪುವುದಿಲ್ಲ; ಇದರ ಬದಲಿಗೆ ನಮ್ಮಂತಹ ಜಗತ್ತಿನ ಇತರ ಶ್ರೀಮಂತ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 03, 2008
ಮನುಷ್ಯನ ತಲೆಯನ್ನ ದೆವ್ವಗಳೋ , ದೇವತೆಗಳೋ ಸವಾರಿ ಮಾಡ್ತಾ ಇರ್ತಾರಂತೆ . ಇದನ್ನ ತಿಳಕೊಂಡು ತಲೆಯಿಂದ ಎಲ್ಲವನ್ನ ಕೆಡವಿಕೊಂಡೋನು , ಆದದ್ದರ ಬಗ್ಗೆ , ಆಗಬೇಕಾದ್ದರ ಬಗ್ಗೆ ಸರಿಯಾಗಿ ತಿಳಕೊಂಡು , ವರ್ತಮಾನದಲ್ಲಿ ಬದುಕೋದು ಜಾಣತನ . ಪ್ರೆಸೆಂಟ್ ಇಸ್ ಎ ಪ್ರೆಸೆಂಟ್ ಅಂತ ಒಂದು ಮಾತು ಇಂಗ್ಲೀಷಲ್ಲಿದೆ . ಈ ಕ್ಷಣ ಅನ್ನೋದು ಒಂದು ಉಡುಗೊರೆ ಅಂತ . ನಿನ್ನ ನೀನು ಅರಿತುಕೋ ಅಂತ ಇನ್ನೊಬ್ಬರಿಗೆ ಉಪದೇಶ ಹೇಳೋದು ಸುಲಭ . ನಮ್ಮನ್ನ ನಾವು ಅರಿತುಕೊಳ್ಳೋದು ಕಷ್ಟ . ಇರಲಿ. ನನ್ನ ತಲೆಯಿಂದ ಅಂತೂ…