ಎಲ್ಲ ಪುಟಗಳು

ಲೇಖಕರು: poornimas
ವಿಧ: Basic page
November 27, 2007
ನಂಗಿಷ್ಟವಾಗೋದು ಗಣಿತಾ ಮತ್ತು ಕವಿತಾ. ಇಬ್ಬರಿಗೂ ಮಣೀತಾ ಈ ನನ್ನ ಕೊರೆತ :-)
ವಿಧ: ಚರ್ಚೆಯ ವಿಷಯ
November 27, 2007
ತಿಣಿಕಿದನು ಫಣಿರಾಯ ರಾಮಾ ಯಣದ ಕವಿಗಳ ಭಾರದಲಿ ತಿಂ ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ ಬಣಗು ಕವಿಗಳ ಲೆಕ್ಕಿಪನೆ ಸಾ ಕೆಣಿಸದಿರು ಶುಕರೂಪನಲ್ಲವೆ ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.) ವಿ.ವಿ.ಯವರು ಈ ಪದ್ಯದ ಅರ್ಥವನ್ನು ಬಹಳ ಹಿಂದೆಯೇ ಕೇಳಿದ್ದರು. ಗೊತ್ತಿರುವವರು ಹೇಳುತ್ತಿರಾ? ಮುಂಗಡವಾಗಿ ನನ್ನಿ!
ಲೇಖಕರು: shekarsss
ವಿಧ: Basic page
November 27, 2007
ಹನಿ ಹನಿ ಮಳೆಯಲಿ ತೋಯುತ ನಡೆಯಲಿ ಕೊಚ್ಚೆ ಕೊಸರಿನಲಿ ಹೆಜ್ಜೆ ಬಿರುಸಿನಲಿ ಡವ ಡವ ಬಡಿದಿದೆ ಎದೆ ಮಿಡಿತ ಸರ ಸರ ನಡೆದಿದೆ ಕಾಲ್ನಡೆತ ಅಲ್ಲಿಂದ್ದಿತ್ತ ಇಲ್ಲಿಂದ್ದತ್ತ ಜಿಗಿಯುತ ಹಾರುತ ಹೊರಟಿರುವೆ ನೀ ಯಾರ ಮನೆಯತ್ತ ಎನ್ನ ಮನಸಿನಲಿ ಎದ್ದ ಬಿರುಗಾಳಿ ಹೇಗೆ ಬನ್ನಿಸಲಿ ಹೇಳು ನವಿಲೇ
ಲೇಖಕರು: girish.shetty
ವಿಧ: Basic page
November 27, 2007
ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿರೆ ಹರಿಯುತಿವೆ ಭಾವನೆಗಳ ಮಹಾಪೂರ ಬಿದಿಗೆ ಚಂದ್ರನ ನೋಡಿ ಹುಟ್ಟಿದಂತೆ ಕಡಲಲಿ ಉಬ್ಬರ ಉಕ್ಕಿ ಬರುತಿಹ ಭಾವನೆಗಳ ಕಟ್ಟಿ ಹಾಕುವ ಆತುರ ನಿಲ್ಲುವುದೆಂತು? ಕಟ್ಟೆಯೊಡೆದು ನುಗ್ಗುತಿವೆ ಅವಳೆಡೆಗೆ ನದಿಯು ಹುಡುಕುವಂತೆ ಸಾಗರ
ಲೇಖಕರು: girish.shetty
ವಿಧ: Basic page
November 27, 2007
ಕೂತಿಹೆನು ನಾನಿಲ್ಲಿ, ಬೆಳಕು ಬರಲಂಜುವ ಕತ್ತಲಲಿ ನೆನಪುಗಳು ಲಗ್ಗೆಯಿಡುತಿವೆ ಎದೆಯಾಳದಲಿ ಕೂಗುತಿದೆ ಕತ್ತಲ ಭಯವಿಲ್ಲ ನನಗೆ ಮೌನವ ಹೆದೆಯೇರಿಸಿಯೂ ನಿರಾಯುಧ ನಾನಿಲ್ಲಿ ಒಂಟಿ ಯೋಧನ ಮೇಲೆ ಬೇಡವೊ ಸಮರ! ಕೇಳುವುವರಾರು? ನಡೆಯುತಲಿದೆ ನೆನಪುಗಳ ಪ್ರಹಾರ
ಲೇಖಕರು: girish.shetty
ವಿಧ: Basic page
November 27, 2007
ಸಾವಿರ ಕನಸುಗಳ ಕಾಣಿಸುತಿದೆ ಅವಳ ಸಾಂಗತ್ಯದಲ್ಲಿಯ ಅರೆಕ್ಷಣದ ನೀರವ ಮೌನ ನೀರಿನಿಂದ ಹೊರಬಿದ್ದ ಮೀನಿನಂತೆ ಅವಳಿಲ್ಲದ ಅರಗಳಿಗೆಯ ಶೂನ್ಯವ ಸೃಷ್ಟಿಸುವ ಜೀವನ
ಲೇಖಕರು: girish.shetty
ವಿಧ: Basic page
November 27, 2007
ತುಂಬು ಗೆನ್ನೆಗಳು ರಂಗೇರಿವೆ ಅವಳಿ ಸಂಜೆ ಸೂರ್ಯರಂತೆ ಅದುರುತಿರುವ ಅಧರಗಳು ಜಿನುಗುತಿವೆ ಜೇನ ಸವರಿದಂತೆ ನಲಿನ ನಯನಗಳು ಮಿನುಗುತಿವೆ ತಾರೆಗಳ ಸಮ್ಮೇಳದಂತೆ ನೀಳ ನಾಸಿಕವು ನಿಂತಂತಿದೆ ಹಿಮ ಪರ್ವತದಂತೆ ಎದೆಯುಸಿರಿನ ಏರಿಳಿತಕೆ ನಾಟ್ಯವಾಡುವಂತೆ ನಿಂತ ಅವಳು ಮುಂಗುರುಳ ಜೊತೆ ಸರಸವಾಡುತಿವೆ ಕಿರುಬೆರಳು ಅದರುತ್ತಾ ಬೆದರುತಿವೆ ಕಣ್ಣ ಕಾವಲಿಗೆ ನಿಂತ ರೆಪ್ಪೆಗಳು ಅವಳಂದಕೆ ಸೋತಂತೆ ಹಿಂಬಾಲಿಸಿದೆ ಅವಳ ನೆರಳು ತುಟಿ ಬಿಚ್ಚಿ ಉದುರಿಸಿದರೆ ಮುತ್ತುಗಳಂತ ಮುಗುಳ್ನಗು ಧರೆಗುರುಳುವ ಲತೆಯಂತಾದೆ ನೋಡಿ…
ಲೇಖಕರು: girish.shetty
ವಿಧ: Basic page
November 27, 2007
ನಿನ್ನ ನೋಡುವ ಕಾತರದಲಿ ಉಳಿದ ದಿನಗಳ ಕಳೆದು ಕೂಡಿಸಿದೆ ಗುಣಿಸಿ ಭಾಗಿಸಿದೆ ತಪ್ಪು ಲೆಕ್ಕಗಳ ಬರೆವ ಪುಟ್ಟ ಹುಡುಗನ ಹಾಗೆ ಏನು ಮಾಡಿದರೇನು ಮತ್ತದೆ ಹಿಡಿಸದ ಅಂಕೆ ದಿನಗಳೆದರೂ ದಿನಗಳು ಓಡುತಿಲ್ಲವೆಂಬ ಶಂಕೆ
ಲೇಖಕರು: girish.shetty
ವಿಧ: Basic page
November 27, 2007
ಚಂದುವಳ್ಳಿ ತೋಟದ ತುಂಬೆಲ್ಲಾ ಬರಿ ಹಾವುಗಳು! ಮೊನ್ನೆ ನಿನ್ನೆಯವರೆಗೆ ಜಗಮಗಿಸುತಿದ್ದವು ಗಿಡದ ಎಡೆಯಲಿ, ಎಲೆ ಬಳ್ಳಿಗಳ ಬಳಿಯಲಿ ಮಿಂಚುತಾ ಬಣ್ಣ ಬಣ್ಣದ ಹೂಗಳು ಮುಳ್ಳುಗಳೇ ಕಾಣಿಸುತಿಲ್ಲ ಕಾವಲಿಗೆ ಯಾರು ಇಲ್ಲ ಮುರುಟಿ ಬಿದ್ದ ಗಿಡಗಳು ಬಿದ್ದಿವೆ ಅಲ್ಲಲ್ಲಿ ಕರಟಿ ಹೋದ ಎಸಳು ಆವರಿಸಿತ್ತು ಹಾವಿನ ಬುಸು ಬುಸು ತುಂಬಿ ತೋಟದ ಬಯಲು ಕೇಳಿಸುತಿಲ್ಲ ಮೊದಲಿದ್ದ ಕಿಲ ಕಿಲ ಹಕ್ಕಿಗಳ ಕೂಗಿನ ಬದಲು ಗಾಳಿಯ ಗರಳದಿ ಕಲುಕಿದ ವಿಷಮೋರಗ ಸುಡುವ ಬಿಸಿಲಿಗೂ ಬಗ್ಗದ ಗುಂಪು ಗುಂಪು ಉರಗ ಹೂವ ಕೊಯ್ಯ ಬಂದ ಕೈಗೆ ಭಯ…
ಲೇಖಕರು: psananth
ವಿಧ: Basic page
November 27, 2007
ಹುಡುಕಬೇಡಿ ಪ್ರೀತಿಯ ಮೂಲ ನಾಶವಾದೀತು ಮಾನವ ಕುಲ ಪ್ರೀತಿಯಲ್ಲು೦ಟು ಹಲವು ಬಗೆ ತಪ್ಪಿ ಬಳಸಿದರೆ ತೆರಬೇಕಾದೀತು ತೆರಿಗೆ ಪ್ರೀತಿಗೂ ಇದೆ ಕೆಲವು ಕಟ್ಟುಪಾಡು ಮರೆತರೆ ಜೀವನ ನಾಯಿಪಾಡು ಪ್ರೀತಿಯ ಕಣ್ಣುಗಳಿಗೆ ಮುಖ್ಯವಲ್ಲ ಅ೦ದಚೆ೦ದ ಬೆರೆಯಬೇಕು ಹೃದಯಗಳಲ್ಲಿ ಒಳ್ಳೆಯ ಅನುಬ೦ದ ಪ್ರೀತಿಯು ಬಯಸುತ್ತದೆ ಇನ್ನೊಬ್ಬರ ಮನಸ್ಸು ಹತ್ತಿರವಾಗದ್ದಿದ್ದರೆ ನುಚ್ಚುನೂರಾಗುತ್ತದೆ ಕಟ್ಟಿದ ಕನಸ್ಸು ಪ್ರೀತಿ ಹ೦ಚಿಕೊಳ್ಳಲು ಅಗತ್ಯ ಬಿಚ್ಚು ಮನಸ್ಸು ನಡುವೆ ಬರುವುದಿಲ್ಲ ಹಿರಿಯ-ಕಿರಿಯ ವಯಸ್ಸು ಹುಟ್ಟು ತಾಯಿತ೦ದೆಯ…