ಎಲ್ಲ ಪುಟಗಳು

ಲೇಖಕರು: rameshbalaganchi
ವಿಧ: Basic page
December 29, 2007
ಮದುವೆಗೆ ಮುಂಚೆ "ಗಂಡಹೆಂಡಿರ ಜಗಳ ಗಂಧ ತೀಡಿಧ್ಹಾಂಗ" ಎಂಬ ಯಾವುದೋ ಕವಿಯ ಉತ್ಸ್ಫೂರ್ತ ಕವಿವಾಣಿಯ ಮೋಡಿಗೆ ಮರುಳಾಗಿ ಫಣಿರಾಯನಂತೆ genuine appreciationನಿಂದ ತಲೆದೂಗಿದ್ದೆ. ಅದು ಅನುಭವದ ನುಡಿಯೆಂದೂ, ಆದ್ದರಿಂದಲೇ ಗಾದೆಗಳಂತೆ ವೇದಾತೀತ ಸತ್ಯವೆಂದೂ ಮುಗ್ಧವಾಗಿ ನಂಬಿದ್ದೆ. ಈ "ಗಂಧ"ದ ಎಲರು ನನ್ನ ಮೂಗಿಗೆ ತೀಡುವುದೋ ಇಲ್ಲವೋ ಎಂಬ ಸಂಶಯವೂ ಮದುವೆಗೆ ಮೊದಲು ನನಗಿತ್ತು. ಯಾಕೆಂತೀರೋ? ನಮ್ಮದು ಸತಿಧರ್ಮದ ಪರಂಪರೆ!! ನಮ್ಮಮ್ಮನಂತೂ ನಾನು ತನ್ನ ಹಿರಿಯ ಸುಪುತ್ರನೆಂಬ plus pointಗೂ ಕೇರ್…
ಲೇಖಕರು: shekarsss
ವಿಧ: Basic page
December 29, 2007
ಇವ ಸರ್ವಸೃಷ್ಟಿಯ ಜನಕ ಜೀವರಾಷಿಗಳ ಪೋಷಕ ಸಕಲ ಕಾರ್ಯಗಳ ನಿಯಂತ್ರಕ ಎಲ್ಲಿರುವೆಯೋ ನೀ ಮಾಂತ್ರಿಕ ಕಲ್ಪನೆಗೆ ಎಟುಕದ ಜಗವೋ ಹಲವು ವಿಸ್ಮಯಗಳ ತಾಣವೋ ಕಾಣದ ಕನಸುಗಳ ಬೆನ್ನತ್ತಿ ಹುಡುಕುತ ನಡೆವೆವು ನಾವು ಅದ್ಭುತ ಮಾನವ ಕುಲವು ಇಲ್ಲಿರುವುದು ನಾಕ ನರಕವು ನಿನ್ನ ಶಕ್ತಿಯ ಸ್ಮರಿಸುತ ನಾವು ಬಾಳಿನ ಬಂಡಿ ನಡೆಸುವೆವು
ಲೇಖಕರು: shekarsss
ವಿಧ: Basic page
December 29, 2007
ಹಕ್ಕಿಯ ಹಾಡಿಗೆ ರಾಗಗಳುಂಟೆ ಹರಿಯುವ ನದಿಗೆ ಜಾಗದನಂಟೆ ಬೀಸುವ ಗಾಳಿಗೆ ಯಾರ ಚಿಂತೆ ಸುರಿಯುವ ಮಳೆಗೆ ಸುಳಿಯುಂಟೆ ಕುಣಿಯುವ ನವಿಲಿಗೆ ತಾಳಗಲಿವೆಯೇ ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ ವನ್ಯ ಮೃಗಗಳಿಗೆ ಸ್ನೇಹದ ಬರವೆ ಹಸಿರಿನ ವನಕೆ ಭೇದಗಲಿವೆಯೇ ಕಾಣುವ ಕಣ್ಣು ಕುರುಡಾಯಿತೇಕೆ ಕೇಳುವ ಕಿವಿಯು ಕಿವುಡಾಯಿತೇಕೆ ಶಾಂತಿ ಚಿತ್ತದಿ ಸಂತಸ ಮನಕೆ ನೆಮ್ಮದಿ ಬದುಕಿಗೆ ಬೇರೆ ಬೇಕೆ
ಲೇಖಕರು: veenadsouza
ವಿಧ: ಬ್ಲಾಗ್ ಬರಹ
December 28, 2007
ಬೆನಜೀರ್ ಬುಟ್ಟೊ ಹತ್ಯೆಯಾದದ್ದು ಬಹುಶಃ ಮುಸ್ಲಿಂ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವಂತಿಲ್ಲ, ನೀಡಬಾರದು ಎಂಬ ಉದ್ದೇಶವನ್ನು ಹೊಂದಿದೆ ಎಂದು ಕಾಣುತ್ತಿದೆ. ಒಬ್ಬ ಮಹಿಳೆಯನ್ನು ಈ ರೀತಿ ಹೀನಾಯವಾಗಿ ಅಂತ್ಯಕಾಣಿಸಿದ್ದು ನಿಜಕ್ಕೂ ಪುರುಷ ಪ್ರಧಾನ ಸಮಾಜಕ್ಕೆ ಹೇಸಿಗೆ ತರುವಂತಹ ವಿಷಯ. ಪ್ರಜಾಪ್ರಭುತ್ವದ ಅಂತ್ಯ ಅನ್ನುವುದಕ್ಕಿಂತಲೂ ಮಹಿಳಾ ರಾಜಕೀಯದ ಅಂತ್ಯವೆಂದರೂ ತಪ್ಪಾಗದು. ಈ ಘಟಣೆ ಸೋನಿಯಾ ಗಾಂಧಿಯನ್ನು ಚಿಂತಿಸುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ... ವಿಪರ್ಯಾಸವೆಂದರೆ ರಾಜಕಾರಣಿಗಳ…
ಲೇಖಕರು: shekarsss
ವಿಧ: Basic page
December 28, 2007
ಸ್ಪರ್ಧಾಪೂರ್ಣ ಜಗ ಆಧುನಿಕತೆಯ ವೇಗ ಇಲ್ಲಿ ಭಾವಕ್ಕಿಲ್ಲ ಜಾಗ ಮಾಡಿ ಲಾಭಕ್ಕೆಲ್ಲ ತ್ಯಾಗ ಇಲ್ಲಿ ದುಡ್ಡಿದ್ದವನೆ ದೊಡ್ಡಪ್ಪ ಅಧಿಕಾರವಿದ್ದವನೇ ನಮ್ಮಪ್ಪ ಇದು ಹುಚ್ಚು ಕುದುರೆ ಓಟ ಇದು ಯಾವ ಪರಿಯ ಆಟ ಶರವೇಗದ ಸರದಾರರು ಅಪ್ರತಿಮ, ಅಸಾಧ್ಯ ಶೂರರು ಸಕಲವ ಬಲ್ಲ ಪ್ರಗತಿಪರರು ದೇಶವನಾಳುವ ಅರಸರು ಜಾಗತೀಕರಣದ ಮಳೆ ಇಲ್ಲಿ ಸಾಮರ್ಥ್ಯಕ್ಕೆ ಬೆಲೆ ಇದ್ದವರೆಲ್ಲಾ ಗೆದ್ದವರು ಇರದವರೆಲ್ಲ ಸಾಯುವರು
ಲೇಖಕರು: roopablrao
ವಿಧ: ಬ್ಲಾಗ್ ಬರಹ
December 28, 2007
ನಾನು ಚಿಕ್ಕವಳಿದ್ದಾಗ ( ಏಳೇಂಟು ವರ್ಷ) ಮಕ್ಕಳ ಕಾದಂಬರಿಯೊಂದನ್ನು ಓದಿದ್ದೆ . ಅದರ ಹೆಸರು "ಪೂಪ್ ಕಾಡಿನಲ್ಲಿ ಪಾಪು" ಅಂತ . ಬಹಳ ಸ್ವಾರಸ್ಯಕಾರಿಯಾದ ಪುಸ್ತಕ ಅದು.  ಸುಮಾರು ೨೦೦ ರಿಂದ ೩೦೦ ಪುಟಗಳು. ಈಗ ನನ್ನ ಮಗಳು ಕತೆ ಹೇಳು ಎಂದು ಪೀಡಿಸುವಾಗಲೆಲ್ಲ ಆ ಪುಸ್ತಕದ ನೆನಪಾಗುತ್ತೆ. ಆ ಪುಸ್ತಕಕ್ಕಾಗಿ ಎಲ್ಲ leading book shops ನಲ್ಲಿ ವಿಚಾರಿಸಿದ್ದೇನೆ. ಆದರೆ ಎಲ್ಲೂ ಸಿಗಲಿಲ್ಲ . ನಿಮ್ಮಲ್ಲಿ ಯಾರಾದರೂ ಅದನ್ನು ಓದಿದ್ದರೆ ಹಾಗು ಎಲ್ಲಿ ಸಿಗುತ್ತದೆ ಎಂದು ತಿಳಿದಿದ್ದರೆ please…
ಲೇಖಕರು: ismail
ವಿಧ: Basic page
December 28, 2007
    ಕರ್ನಾಟಕದ ಸಾಹಿತ್ಯಾಸಕ್ತರಿಗೆಲ್ಲಾ ಮೇಷ್ಟ್ರಾಗಿದ್ದ ಚಿ. ಶ್ರೀನಿವಾಸರಾಜು ಇನ್ನಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಬರೆಹಗಾರರ ದೊಡ್ಡ ಬಳಗವನ್ನು ಪರಿಚಯಿಸಿದ ಹೆಗ್ಗಳಿಕೆ ಅವರದ್ದು. ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಯನ್ನು ತಿದ್ದಿ ತೀಡಿ ಮಾರ್ಗ ದರ್ಶನ ಮಾಡಿದ ಶ್ರೀನಿವಾಸರಾಜು ಅವರ ಅಗಲಿಕೆ ಕನ್ನಡ ಸಾಹಿತ್ಯ ಜಗತ್ತಿಗೆ ಆದ ದೊಡ್ಡ ನಷ್ಟ. ಮೇಷ್ಟ್ರ ಅಭಿನಂದನಾ ಗ್ರಂಥಕ್ಕೆಂದು ರಶೀದ್ ಬರೆದ ಕವನ ಇಲ್ಲಿದೆ.
ಲೇಖಕರು: roopablrao
ವಿಧ: ಬ್ಲಾಗ್ ಬರಹ
December 28, 2007
ಒಬ್ಬ ಬುದ್ದ್ದಿವಂತೆ ಇದ್ದಳು. ಅವಳಿಗೋ ಎಲ್ಲವನ್ನು ಒಗಟಾಗಿ ಹೇಳುವ ಹವ್ಯಾಸ. ಅವಳನ್ನು ಒಬ್ಬ ದಡ್ದ ಮದುವೆಯಾದ . ಒಂದು ರಾತ್ರಿ ಗಂಡ ಎದ್ದು ನೋಡುತ್ತಾನೆ. ಪಕ್ಕದಲ್ಲಿ ಹೆಂಡತಿ ಇಲ್ಲ . ಎಲ್ಲ ಕಡೆ ಹುಡುಕಿ ಸುಸ್ತಾದ. ಸ್ವಲ್ಪ ಹೊತ್ತಾದ ಮೇಲೆ ಹೆಂಡತಿ ಬಂದಳು . ಗಂಡ್ ಏನೂ ಕೇಳಲಿಲ್ಲ . ಹೀಗೆ ತುಂಬ ದಿನ ನಡೆದಾಗ ತಡೆಯಲಾಗದೆ ಗಂಡ ಒಮ್ಮೆ ಕೇಳಿಯೇ ಬಿಟ್ಟ . " ನೀನು ದಿನ ರಾತ್ರಿ ಎಲ್ಲಿಗೆ ಹೋಗ್ತೀಯ" ಹೆಂಡತಿ ಕೂಲ್ ಆಗಿ ಹೇಳಿದಳು " ಕಳೆದುಕೊಂಡವನ ಹೆಂಡತಿಯನ್ನ ಹುಡುಕೋಕೆ ಹೋದವನ ಅಪ್ಪನ ಹತ್ತಿರ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 28, 2007
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ ಬಂಗಾರ ಶಾರದೆಯ ಶ್ರೀದಿವ್ಯವಾಣಿ ಅಚ್ಚ ಕನ್ನಡಜಾಣೆ ಗಾಯತ್ರಿ ಗೀರ್ವಾಣಿ ವ್ಯಾಸ ಲಕ್ಷ್ಮೀಶರ ಕುಸುಮಕೋಕಿಲವಾಣಿ ಕರುನಾಡ ಕವಿಕುಲದ ಕನ್ನಡದ ರಸವಾಣಿ ಸಿರಿಗನ್ನಡಂ ಗೆಲ್ಗೆ ಶ್ರೀಮಂತ ವಾಣಿ ಈ ಹಾಡನ್ನು ಚಿಕ್ಕವನಾಗಿದ್ದಾಗಿನಿಂದ ನಾನು ಕೇಳುತ್ತ ಬಂದಿದ್ದೇನೆ. ಈ ಹಾಡನ್ನು ಕೇಳುತ್ತಲೆ, ನಮ್ಮ ಸಂಗೀತದಲ್ಲಿ ಶತಮಾನಗಳು ಉರುಳಿದಂತೆ ಬೇರೆಬೇರೆ ರಾಗಗಳು ಚಾಲ್ತಿಗೆ ಬರುವುದೂ ಹೋಗುವುದೂ ನನ್ನ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಆಯಾ ಕಾಲಕ್ಕೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 28, 2007
ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ ಬಂಗಾರ ಶಾರದೆಯ ಶ್ರೀದಿವ್ಯವಾಣಿ ಅಚ್ಚ ಕನ್ನಡಜಾಣೆ ಗಾಯತ್ರಿ ಗೀರ್ವಾಣಿ ವ್ಯಾಸ ಲಕ್ಷ್ಮೀಶರ ಕುಸುಮಕೋಕಿಲವಾಣಿ ಕರುನಾಡ ಕವಿಕುಲದ ಕನ್ನಡದ ರಸವಾಣಿ ಸಿರಿಗನ್ನಡಂ ಗೆಲ್ಗೆ ಶ್ರೀಮಂತ ವಾಣಿ ಈ ಹಾಡನ್ನು ಚಿಕ್ಕವನಾಗಿದ್ದಾಗಿನಿಂದ ನಾನು ಕೇಳುತ್ತ ಬಂದಿದ್ದೇನೆ. ಈ ಹಾಡನ್ನು ಕೇಳುತ್ತಲೆ, ನಮ್ಮ ಸಂಗೀತದಲ್ಲಿ ಶತಮಾನಗಳು ಉರುಳಿದಂತೆ ಬೇರೆಬೇರೆ ರಾಗಗಳು ಚಾಲ್ತಿಗೆ ಬರುವುದೂ ಹೋಗುವುದೂ ನನ್ನ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಆಯಾ ಕಾಲಕ್ಕೆ…