ಅಂತೂ ಇಂತೂ ಸರ್ಕಾರ ಬಂತು !!

ಅಂತೂ ಇಂತೂ ಸರ್ಕಾರ ಬಂತು !!

ಅಂತೂ ಇಂತೂ ಸರ್ಕಾರ ಬಂತು !!
೪ ವರ್ಷದ ರಾಜಕೀಯ ನಾಟಕದ ನಂತರ ಕರ್ನಾಟಕದಲ್ಲಿ ಕಡೆಗೂ ಒಂದು ಸ್ಥಿರ ಸರ್ಕಾರ ಬರೋ ಕಾಲ ಕೂಡಿ ಬಂದಿದೆ. ಕರ್ನಾಟಕದ ಮತದಾರ ತನ್ನ ಜಾಣ್ಮೆಯನ್ನು ಮೆರಡಿದ್ದಾನೆ ಅಂದ್ರೆ ತಪ್ಪಿಲ್ಲ.
ಹತ್ತು ಪೈಸೆ ಕೆಲಸ ಮಾಡದೇ, ಹೆಸರಿಗೆ ಅತಿರಥ ಮಹರಥ ಅನಿಸಿಕೊಂಡಿದ್ದ ದೇಶಪಾಂಡೆ, ಧರ್ಮಸಿಂಗ್, ಪ್ರಕಾಶ್, ಯತ್ನಾಳ್ ಅಂತ ಮಹಾನುಭಾವರನ್ನೆಲ್ಲ ಮತದಾರ ಒಂದೇ ಪೆಟ್ಟಿಗೆ ಮನೆಗೆ ಕಳಸಿದ್ದಾನೆ. ಆದ್ರೆ ಅಷ್ಟೆ ಆಗಿದ್ರೆ ಈ ಬರಹ ಬರೀಬೇಕು ಅನಿಸ್ತಿರಲಿಲ್ಲ. ಮತದಾರ ಮಾಡಿರೋ ಕೆಲವು ಚಮತ್ಕಾರ ನೋಡಿ:

  1. ಬೆಳಗಾವಿಲಿ ಮರಾಠಿ ಪುಂಡರ ದಬ್ಬಾಳಿಕೆಗೆ ಕೊನೆ ಬಿದ್ದಿದೆ. ಎಂ.ಈ.ಎಸ್ ನ ಯಾವುದೇ ಅಭ್ಯ್ರಥಿಯು ಗೆಲುವಿನ ಹತ್ತಿರಕ್ಕೂ ಸುಳಿದಿಲ್ಲ.
  2. ಕನ್ನಡಿಗರ ಜೊತೆ ಕಾಲ ಕೆರೆದುಕೊಂಡು ಜಗಳಕ್ಕೆ ಬರೋ ತಮಿಳರ ಡಿ.ಎಂ.ಕೆ/ ಎ.ಐ.ಎ.ಡಿ.ಎಂ.ಕೆ ಪಕ್ಷಗಳು ಕನ್ನಡದ ನೆಲದಲ್ಲೂ ತಮ್ಮ ನೆಲೆ ಸ್ಥಾಪಿಸೋಕೆ ಬಂದೊರನ್ನ ಕನ್ನಡದ ಜನ ಹಂಗೆ ವಾಪಸ್ ಹೊಸೂರು ದಾಟಸಿ ವಾಪಸ ಕಳಸಿದ್ದಾರೆ.
  3. ತಾನು ದೊಡ್ಡ ಸ್ಟಾರ್, ಕನ್ನಡ, ಕರ್ನಾಟಕಕ್ಕಾಗಿ ಏನ್ ಮಾಡದೆ ಇದ್ರು ಗೆಲ್ತಿನಿ ಅನ್ನೋ ಹುಚ್ಚು ವಿಶ್ವಾಸದಲ್ಲಿ ಇದ್ದ ಅಂಬರೀಶ್ ಗೂ ಸರಿಯಾಗಿ ತಟ್ಟಿ ಕಳಸಿದ್ದಾರೆ.
  4. ಎಲ್ಲಕಿಂತ ಹೆಚ್ಚಾಗಿ ಗೆದ್ದ ತಕ್ಷಣ ಕರೆದ ಪ್ರೆಸ್ ಕಾನ್ಫರೆನ್ಸ್ ಅಲ್ಲಿ ಯಡಿಯೂರಪ್ಪ ಇದು ಕನ್ನಡಿಗರ ಜಯ, ನಡು-ನುಡಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ, ನಾಡಿನ ಅಭಿವೃದ್ದಿಗೆ, ನಮ್ಮ ಯುವ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸೋ ಬಗ್ಗೆ ಕೆಲ್ಸ ಮಾಡೋ ಬಗ್ಗೆ ಮಾತಾಡಿದ್ದಾರೆ.

    ಸ್ಥಳೀಯ ವಿಷಯಗಳ ಬಗ್ಗೆ, ಸ್ಥಳೀಯ ಪ್ರಭಾವಿ ನೇತಾರರ ಮಧ್ಯೆ ನಡೆದ ಈ ಕಾಳಗ ಒಂದು ಸ್ಥಿರ ಸರಕಾರ ಬರೋ ಸಾಧತೆಯನ್ನಂತು ಹೊರ ತಂದಿದೆ.
    ಹೊಸ ಸರಕಾರಕ್ಕೆ ನಮ್ಮ ಅಭಿನಂದನೆ ಸಲ್ಲಿಸೋಣ.

ಈ ಬರಹಕ್ಕೆ ಸ್ಪೂರ್ತಿ ಬನವಾಸಿ ಬಳಗದ ಎನ್ಗುರು ಬ್ಲಾಗ್. ಅವರ ಬರಹ ಇಲ್ಲಿದೆ:
http://enguru.blogspot.com/2008/05/chunaavanaa-phalitaamsha-kodtiro-hosa.html

Rating
No votes yet