ಅಕ್ಷರ ದಾಸೋಹ ಮತ್ತು ಬಿಸಿಯೂಟ ಕವನಗಳು

ಅಕ್ಷರ ದಾಸೋಹ ಮತ್ತು ಬಿಸಿಯೂಟ ಕವನಗಳು

೧)
 ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು
 ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು?
 ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ
 ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು

 ೨)
 ಅಕ್ಷರದ ದಾಸೋಹ ನಡೆದಿಹುದು ನಾಡಲ್ಲಿ,
 ಭಿಕ್ಷೆಯ೦ದದಿ ತಟ್ಟೆಗಳ ಚಾಚಬೇಕು ಸಾಲಿನಲಿ
 ಕಲಿಸುವುದ ಕಡೆಗೆಣಿಸಿ, ಗುರುಗಳೇ ಭಟ್ಟರಾಗಿ,
 ಶಿಸ್ತಿನಾ ಭಟರಾಗಿ ನೋಡಬೇಕಿದೆ ಅಕ್ಕಿ ಬೇಳೆಗಳ ಸರಿಯಾಗಿ ತೂಗಿ!!

  
 ೩)
 ಬಿಸಿಯೂಟದ ಬೇಗೆ ಹಸು ಮಕ್ಕಳ ಬಾಯಿಗೆ,
 ಎಲ್ಲೆಡೆ ಆಯ್ತು ಕಳಪೆ ಧಾನ್ಯಗಳ ಪೂರೈಕೆ
 ಪೂರಾ ತಿ೦ದವರ ಎಳೆದೊಯ್ಯಿತು ಆಸ್ಪತ್ರೆಗೆ
 'ರುಚಿ' ನೋಡಿದ ರಾಜಕಾರಣಿಗಳು ಮಾತ್ರ ಕ್ಷೇಮದಿ೦ದಲಿ ಮನೆಗೆ.

Rating
No votes yet

Comments