ಅಮರ ಪ್ರೇಮ

ಅಮರ ಪ್ರೇಮ

ಅಮರ ಪ್ರೇಮ


ಅಸ್ತಮಿಸೋ ಸೂರ್ಯನೆ,
ಸುಸ್ತಾಗಿದೆ ನಿನಗೆ
ಹಗಲಿಡೀ ಖಾರಿದ್ದೀ
ಉರಿಬಿಸಿಲನ್ನ,
ಸ್ವಲ್ಪ ವಿಶ್ರಮಿಸಿಕೋ
ಸಾಗರಿಯ ಎದೆಯಲ್ಲಿ
ನಾಳೆ ಬರುವಿಯಂತೆ
ಕಾಯುತ್ತಿರುವೆ ನಿನಗೆ.

ನಿನ್ನ ಉರಿಕಿರಣಗಳ
ನೇವರಿಸಿ ಲಾಲಿಸುವ
ಅವಳ ಕೈನ
ತಂಪು ಆಸ್ವಾದಿಸು.
ನಿನಗೂ ಬರಬಹುದು
ಅವಳ ತಂಪು ಗುಣ
ಆ ಹೃದಯ ಪ್ರೀತಿಗೆ
ಇರಲಿ ಋಣ.

ಎದೆಯೊಳಗೆ ಆರ್ಭಟದ
ಶಕ್ತಿಯಿದೆ,ರೋಷವಿದೆ
ಮುತ್ತು ರತ್ನಗಳಿವೆ
ಅವಳೊಳಗೆ
ಆದರೂ ಅವಳದ್ದು
ಅಗಾಧ ಪ್ರೇಮ
ಅಗಾಧ ಸಹನೆ

ವಾರಿಧೆಯೇ ಹಾಗೆ
ವಿವರಣೆಗೆ ನಿಲುಕದವಳು
ಭಾಸ್ಕರನೆ ಹಾಗೆ
ಸುಡು ಸುಡು ಬಿಸಿಲಿನವನು.
ಪ್ರತಿ ದಿನವೂ ಮಿಲನ!
ಪ್ರತೀ ದಿನವೂ ವಿರಹ!
ಬೆಳದಿಂಗಳ ರಾತ್ರಿಯಲಿ
ಅಮರ ಪ್ರೇಮ!

Rating
No votes yet