ಅಮಾವಾಸ್ಸೆ ಮತ್ತು ದೀಪಾವಳಿ ಹಬ್ಬ
ಅಂದು ದೀಪಾವಳಿ ಹಬ್ಬ ಮತ್ತು ಅಮಾವಾಸ್ಸೆ , ಹೊಸದಾಗಿ ಮಾಡುವೆ ಆಗಿದ್ದ ನನ್ನ ಗೆಳೆಯ ಮತ್ತು ಅವನ ಹೆಂಡತಿ ಅತ್ತೆ ಮನೆಗೆ ದೀಪಾವಳಿ ಹಬ್ಬಕ್ಕೆ ಅಂತ ತನ್ನ ಹೊರಟರು. ಅವರ ಅತ್ತೆ ಮನೆ ಅವರ ಮನೆಯಿಂದ ಸುಮಾರು 45 ಕಿ.ಮೀಟರ್ ಹೋಗಬೇಕು. ಹೊಸದಾಗಿ ಮದುವೆಯಾಗಿದ್ದರಿಂದ ಹಣ್ಣು ಹಂಪಲು ಹೊಸ ಬಟ್ಟೆಯನ್ನು ಮತ್ತು ಪಟಾಕಿಯನ್ನು ಸಹ ಕರೀದಿಸಿ ಹೋದರು. ಅಲ್ಲಿ ಅವರಿಗೆ ಅದರ ಸ್ವಾಗತ ಕಾದಿತ್ತು. ನನ್ನ ಗೆಳೆಯ ತನ್ನ ಹೆಂಡತಿಯ ತಮ್ಮಣ ಜೊತೆ ಪಟಾಕಿಯನ್ನು ಹೊಡೆದು ಊಟಕ್ಕೆ ತಯಾರಾದರು. ಹಬ್ಬದ ಊಟ ದಿನದಂದು ಊಟ ಅಂದ್ರೆ ಕಮ್ಮಿನ ಎರಡು ಮೂರು ರೀತಿಯ ಪಲ್ಯ, ಕೋಸಂಬರಿ, ಕಜ್ಜಾಯ, ಹಪ್ಪಳ, ವಡೆ, ಹೀಗೆ ಮೃಷ್ಟಾನ ಬೋಜನವೇ ತಯಾರಾಗಿತ್ತು. ನನ್ನ ಗೆಳೆಯ ಗಡದ್ದಾಗಿ ಹೊಟ್ಟೆ ತುಂಬಾ ತಿಂದು ಕೈಗೆ ದಾರ ಕಟ್ಟಿಕೊಂಡು ಎಲೆ ಅಡಿಕೆ ಹಾಕಿಕೊಂಡ. ನಂತರ ಅವನು ನಾನು ಮನೆಗೆ ಹೋಗಬೇಕು ಮನೆಯಲ್ಲಿ ಯಾರು ಸಹ ಇಲ್ಲ ನಮ್ಮ ತಾಯಿ ನನ್ನ ತಂಗಿಯ ಮನೆಗೆ ಹೋಗಿದ್ದಾರೆ, ನಾನು ಹೊರಡುವೆ ಅಂತ ರೆಡಿಯಾದ. ಇದನ್ನು ಕಂಡ, ಅತ್ತೆ ಮಾವ ಬೇಡ ಇಷ್ಟು ಹೊತ್ತಲ್ಲಿ ಬೇಡ ಅಳಿಯಂದ್ರೆ, ನಾಳೆ ಬೆಳಿಗ್ಗೆ ಹೊಗಿರಂತೆ ಹೋಗೋ ದಾರಿ ಬೇರೆ ಸರಿ ಇಲ್ಲ ದಾರಿಯಲ್ಲಿ ಇತ್ತೀಚಿಗೆ ದೆವ್ವಗಳ ಕಾಟ ಜಾಸ್ತಿ ಆಗಿದೆ ಅದು ಅಲ್ಲದೆ ಇವತ್ತು ಅಮಾವಾಸ್ಸೆ, ಅದರಲ್ಲೂ ಹೊಸದಾಗಿ ಮದುವೆ ಬೇರೆ ಆಗಿದ್ದಿರಾ ಎಂದರು. ಆದರೆ ನನ್ನ ಸ್ನೇಹಿತ ಕೇಳಲಿಲ್ಲ ನಾನು ಹೋಗಲೇಬೇಕು ಎಂದು ರೆಡಿಯಾದ. ಹೆಂಡತಿಯನ್ನು ಅಲ್ಲಿಯೇ ಬಿಟ್ಟು ಎರಡು ದಿನ ಬಿಟ್ಟು ಹೆಂಡತಿಯನ್ನು ಕರೆದುಕೊಂಡು ಹೋಗಲು ಬರುವುದಾಗಿ ಹೊರಟ. ಅವರ ಊರಿನಿಂದ (ಮನೆಯಿಂದ) ಅಷ್ಟೊತ್ತಿಗೆ ಬಸ್ಸು ಇಲ್ಲದ ಕಾರಣ ಬಸ್ಸು ಹತ್ತಲು ಸುಮಾರು ನಾಲ್ಕು ಕಿ.ಮೀಟರ್ ನಷ್ಟು ನಡೆದುಕೊಂಡು ಹೋಗಬೇಕು. ಅದೇ ರೀತಿ ನನ್ನ ಗೆಳೆಯ ನಡೆದುಕೊಂಡು ಹೊರಟ ದಾರಿಯ ಮದ್ಯೆ ಕಾಡು ಬೇರೆ. ಹೋಗುತ್ತಿದ್ದಾಗ ಬೈಕೊಂದು ಬಂತು ಅದನ್ನು ನಿಲ್ಲಿಸಲು ಪ್ರಯತ್ನಿಸಿದ ಆದರೆ ಅವನು ನಿಲ್ಲಿಸಲಿಲ್ಲ. ಆಗಾಗಲೇ ರಾತ್ರಿ 11:30 ಆಗಿತ್ತು, ಹಾಗೆ ಮುಂದೆ ನಡೆದುಕೊಂಡು ಹೋಗುತ್ತಿರಬೇಕಾದರೆ ಕಾರೊಂದು ಬಂತು ಅದನ್ನು ನಿಲ್ಲಿಸಲು ಕೈನ ಅಡ್ಡ ಇಟ್ಟ, ಸ್ವಲ್ಪ ಮುಂದೆ ಹೋದ ಕಾರು ನಿಂತಿತು ಅದನ್ನು ಕಂಡ ನನ್ನ ಗೆಳೆಯ ಖುಷಿಯಾಗಿ ಓಡಿ ಹೋಗಿ ಕಾರಿನ ಬಾಗಿಲು ತೆಗೆದು ಕಾರಿನಲ್ಲಿ ಕುಂತ. ಕಾರು ನಿದಾನವಾಗಿ ಮುಂದೆ ಹೋಗುತ್ತಾ ಇತ್ತು. ಸಂತೋಷವಾಗಿ ನನ್ನ ಗೆಳೆಯ ಥ್ಯಾಂಕ್ಸ್ ಹೇಳಲು ಡ್ರೈವರ್ ಕಡೆ ತಿರುಗಿದ, ಆದರೆ ಅಲ್ಲಿ ಗಾಡಿಯ ಚಾಲಕ ಇಲ್ಲ. ಇದನ್ನು ನೋಡಿ ನನ್ನ ಗೆಳೆಯನಿಗೆ ತುಂಬಾ ಗಾಬರಿಯಾಯಿತು. ಜೊತೆಗೆ ಮುಖದ ತುಂಬಾ ಬೆವರು ಬರ ತೊಡಗಿತು, ಭಯ ಶುರು ಆಯಿತು. ನಂತರ ತನ್ನ ಅತ್ತೆ ಮಾವಂದಿರು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.( ದಾರಿಯಲ್ಲಿ ಇತ್ತೀಚಿಗೆ ದೆವ್ವಗಳ ಕಾಟ ಜಾಸ್ತಿ ಆಗಿದೆ) ಇದನ್ನು ನೆನೆದು ಹೃದಯ ಬಡಿತ ಜಾಸ್ತಿ ಆಗುತ್ತಾ ಬಂತು. ಹೀಗೆ ಸುಮಾರು 3 ಕಿ.ಮೀಟರ್ ಹೋದ ಕಾರು ಸಡನ್ನಾಗಿ ಪೆಟ್ರೋಲ್ ಬಂಕ್ ಹತ್ತಿರ ನಿಂತಿತು. ನಿಂತಿದ್ದೆ ತಡ ನನ್ನ ಗೆಳೆಯ ದೆವ್ವ, ದೆವ್ವ ಅಂತ ಜೋರಾಗಿ ಕಿರುಚಿತ್ತಾ ಓಡುತ್ತಿದ್ದ, ಸಡನ್ನಾಗಿ ಕಪಾಳಕೆ ಜೋರಾಗಿ ಹೊಡೆದು. ಅಯ್ಯೋ ಪಾಪಿ ನನ್ನ ಕಾರಿನಲ್ಲಿ ಪೆಟ್ರೋಲ್ ಕಾಳಿ ಆಗಿ ತಳ್ಳಿಕೊಂಡು ಬರುತಿದ್ದರೆ, ನೀನು ನನ್ನ ಕಾರಿನಲ್ಲಿ ಕುಳಿತು ಬಂದು ದೆವ್ವ ದೆವ್ವ ಅಂತ ಕಿರುಚುತ್ತೀಯ ಎಂದ. ನನ್ನ ಗೆಳೆಯ ಸುಸ್ತೋ ಸುಸ್ತು ........
Comments
ಉ: ಅಮಾವಾಸ್ಸೆ ಮತ್ತು ದೀಪಾವಳಿ ಹಬ್ಬ