ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!
ತನ್ನ ದೀರ್ಘ ಪಯಣದ ಕೊನೆ ಕಂಡರು ಜ್ಯೊತಿ ಬಸು
ಮಾರ್ಗದರ್ಶಕರಿಲ್ಲದಂತೆ ಈಗ ಎಡಪಂಥೀಯರ ಬಸ್ಸು
ಆ ಜ್ಯೊತಿ ಬಸುವಿಗೆ ಕನ್ನಡಿಗರೆಲ್ಲರೂ ಸದಾ ಋಣಿಗಳು
ಆತನೇ ಆಗಿದ್ದಿದ್ದರೆ ಗೌಡರಾಗುತ್ತಿರಲಿಲ್ಲ ಪ್ರಧಾನಿಗಳು
ನಿನ್ನೆ ಆ ಸಾವಿನ ಸುದ್ದಿಯ ಓದಿ, ಕೇಳಿ, ಮಲಗಿ ಎದ್ದು
ಬೆಳಗಾಗುವಾಗ ಊರೆಲ್ಲಾ ಇನ್ನೊಂದು ಸಾವಿನ ಸದ್ದು
ತನ್ನ ಶಿಷ್ಯ ರಾಮಾಚಾರಿಯ ಹಿಂಬಾಲಿಸಿ ನಡೆದೇ ಬಿಟ್ರು
ನಶ್ವರರು ಎಲ್ಲರೆಂದು ಬೋಧಿಸಿ ಹೋದರು ನಮ್ಮೀ ಮೇಷ್ಟ್ರು
ಗಾನಲೋಕದಲ್ಲೊಬ್ಬ ಅಶ್ವತ್ಥ ನಟನೆಯಲ್ಲೊಬ್ಬನೇ ಅಶ್ವತ್ಥ
ಇಬ್ಬರನೂ ಕಳೆದುಕೊಂಡೀಗ ಆ ಲೋಕಗಳೆರಡೂ ಅಸ್ವಸ್ಥ
ಮೂರೇ ವಾರಗಳಲ್ಲಿ ಅಗಲಿದ ನಾಲ್ವರೂ ಮಹಾ ಸಾಧಕರು
ಸದ್ಯಕ್ಕೆ ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!
********************************
-ಆಸು ಹೆಗ್ಡೆ
Rating
Comments
ಉ: ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!
In reply to ಉ: ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!! by vinayak.mdesai
ಉ: ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!