ಅವಾಂತರ - (ಕಥೆ)
ಹಲೋ....ಹಲೋ...ಲೋ..ಲೋ...ಮಧು ಏನೋ ಆಗಿಂದ ಮೂರು ಸಲ ಕರೆಯುತ್ತಿದ್ದೇನೆ. ಒಳ್ಳೆ ಕಿವುಡನ ಹಾಗೆ ಕೂತಿದ್ದೀಯ. ಯಾಕೋ ಏನಾಯ್ತೋ?
ನಾನು ಐದಾರು ದಿನದಿಂದ ನೋಡ್ತಾ ಇದೀನಿ. ಒಂಥರಾ ಇದ್ದೀಯ? ಯಾಕೋ ಹುಷಾರಿಲ್ವಾ?
ಇಲ್ಲ ಹರಿ...ಹಾಗೇನಿಲ್ಲ ಕಣೋ. ಐದು ದಿನ ಆಯ್ತು ಪೂರ್ವಿ ಇಂದ ಒಂದು ಫೋನ್ ಸಹ ಇಲ್ಲ. ಫೋನ್ ಮಾಡಿದ್ರೆ ಸ್ವಿಚ್ ಆಫ್ ಅಂತ ಬರ್ತಿದೆ, ಅವಳು ಆಫೀಸಿಗೂ ಬರುತ್ತಿಲ್ಲ. ಏನಾಯ್ತೋ ಏನೋ ಒಂದೂ ಅರ್ಥ ಆಗದೆ ತಲೆ ಕೆಟ್ಟು ಹೋಗಿದೆ ಕಣೋ.
ಹೋಗಲಿ ಅವಳ ಟೀಮ್ನಲ್ಲಿ ಕೇಳೋಣ ಅಂದ್ರೆ ಅಲ್ಲಿ ಯಾರೂ ನನಗೆ ಪರಿಚಯದವರು ಇಲ್ಲ. ಅವಳ ಮನೆಯ ಅಡ್ರೆಸ್ಸೂ ಅವಳು ಕೊಟ್ಟಿಲ್ಲ ಕಣೋ. ಹಿಂದೊಮ್ಮೆ ಕೊಡು ಎಂದಿದ್ದಕ್ಕೆ ಸಮಯ ಬಂದಾಗ ಮನೆಗೆ ಕರೆದುಕೊಂಡು ಹೋಗುತ್ತೀನಿ ಎಂದಿದ್ದಳು.ಥೂ...ನನಗೆ ಯಾಕೋ ಮನಸೇ ಸರಿ ಇಲ್ಲ ಕಣೋ. ಅವಳು ನನ್ನನ್ನು ಪ್ರೀತಿಸಲು ಶುರು ಮಾಡಿ ಆರೇಳು ತಿಂಗಳಾಗಿದೆ. ಯಾವತ್ತೂ ಹೀಗೆ ಆಗಿರಲಿಲ್ಲ.
ಪ್ರತಿದಿನ ಕನಿಷ್ಠ ಪಕ್ಷ ಏನಿಲ್ಲ ಅಂದರೂ ಹತ್ತರಿಂದ ಇಪ್ಪತ್ತು ಸಲ ಫೋನ್ ಮಾಡುತ್ತಿದ್ದವಳು ಈಗ ಐದು ದಿನವಾದರೂ ಫೋನಿಲ್ಲ. ಯಾರಾದರೂ ಸ್ನೇಹಿತರ ಮನೆಗೋ, ಬಂಧುಗಳ ಮನೆಗೆ ಹೋಗಬೇಕಾದರೂ ನನಗೆ ಫೋನ್ ಮಾಡಿ ಹೇಳುತ್ತಿದ್ದವಳು ಈಗ ಎಲ್ಲಿ ಹೋಗಿದ್ದಾಳೋ, ಹರಿ ಈಗ ಏನು ಮಾ
ಮಧು ನೀನು ಲಾಸ್ಟ್ ಅವಳ ಜೊತೆ ಮಾತಾಡಿದ್ದು ಯಾವತ್ತು?
ಹರಿ, ಐದಾರು ದಿನದ ಹಿಂದೆ ಹಾ...ಕ
ಹೇ ಮಧು...ಹೌದು ನೀನು ಯಾವಾಗಲೂ ಪೂ
ಹೌದು ಹರಿ...ಆದರೆ ಅದೇನೋ ಗೊತ್ತಿಲ್ಲ ಅದೇ ದಿನದಿಂದ ಅವಳ ಪ್ರೊಫೈಲ್ ಫೇಸ್ಬುಕ್ ನಲ್ಲೂ ಕಾಣುತ್ತಿಲ್ಲ.
ಹೌದಾ, ಅಂದರೆ ಅವಳು ನಿನ್ನ ಪ್ರೊಫೈಲನ್ನು ಡಿಲೀಟ್ ಮಾಡಿದ್ದಾಳ?
ಅದು ಸಾಧ್ಯವೇ ಇಲ್ಲ ಹರಿ...ಅವಳೇಕೆ
ಲೇ ಹುಚ್ಚು ಹುಚ್ಚಾಗಿ ಮಾತಾಡಬೇಡ. ಮೊದಲು ಅವಳು ಯಾವ ಟೀಮ್ ಹೇಳು.
ಅವಳು ಇನ್ಸೂರೆನ್ಸ್ ಟೀಮಿನಲ್ಲಿ ಇದಾಳೆ ಕಣೋ.
ಓಹ್ ಓಕೆ..ಅಲ್ಲಿ ನನಗೆ ಪರಿಚಯ ಇರುವ ವ್ಯಕ್ತಿ ಒಬ್ಬನಿದ್ದಾನೆ. ಅವನ ಬಳಿ ಕೇಳಿ ತಿಳಿದುಕೊಂಡು ನಾನು ನಿನಗೆ ತಿಳಿಸುತ್ತೇನೆ. ನೀನು ಇಲ್ಲೇ ಇರು.
ಅರ್ಧಗಂಟೆಯ ನಂತರ.
ಮಧು...ಮಧು...ಸಾರಿ...ಬ್ಯಾಡ್ ನ್ಯೂಸ್ ಕಣೋ....
ಹರಿ...ನನಗೆ ಗೊತ್ತಿತ್ತು ಕಣೋ ಅವಳಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿರುತ್ತಾರೆ ಎಂದು. ಛೇ...ನನ್ನ ಅನುಮಾನ ನಿಜ ಆಗೋಯ್ತು ಕಣೋ...
ಮಧು ಅದಲ್ಲ ಕಣೋ...ಅದು ಆಗಸ್ಟ್ 15 ರಂದು ಬೆಳಿಗ್ಗೆ ಅವರ ತಾಯಿ ಹೋಗಿಬಿಟ್ಟರಂತೆ ಕಣೋ. ಅದಕ್ಕೆ ಅವಳು ಆಫೀಸಿಗೆ ಬರುತ್ತಿಲ್ಲವಂತೆ. ನಾಳೆಯಿಂದ ಬರುತ್ತಾಳೆ. ಆದರೆ ಅದಕ್ಕೂ ನಿನ್ನ ಜೊತೆ ಮಾತಾಡದಿರುವುದಕ್ಕೂ ಏನು ಸಂಬಂಧ ಎಂದು ಅರ್ಥವಾಗುತ್ತಿಲ್ಲ.
ಓಹ್ ಹೌದಾ....ಅವಳು ನನಗೆ ವಿಷಯವನ್ನೂ ತಿಳಿಸಿಲ್ಲವಲ್ಲೋ....ಅವತ್ತು ಬೇಡ ಬಿಡು...ಅವಳು ದುಃಖದಲ್ಲಿರುತ್ತಾಳೆ ಆದರೆ...ಮರುದಿನವಾದರೂ ತಿಳಿಸಬಹುದಿತ್ತು....ಬಿಡು ಹೇಗಿದ್ದರೂ ನಾಳೆ ಬರುತ್ತಾಳಲ್ಲ ಆಗಲೇ ಮಾತಾಡುತ್ತೇನೆ.
ಮರುದಿನ....ಮಧ್ಯಾಹ್ನ ಊಟದ ಸಮಯ...ಸ್ಥಳ ಆಫೀಸ್ ಕ್ಯಾಂಟೀನ್
ಹಾಯ್ ಪೂರ್ವಿ...ಇವನ ಮಾತನ್ನು ಕೇಳಿಯೂ ಕೇಳದಂತೆ ಸುಮ್ಮನೆ ಊಟ ಮಾಡುತ್ತಿದ್ದಳು.
ಪೂರ್ವಿ...ಸಾರಿ ನಿಮ್ಮ ತಾಯಿ ಹೋಗಿಬಿಟ್ಟರಂತೆ. ನನಗೆ ನೆನ್ನೆ ತಾನೇ ವಿಷಯ ಗೊತ್ತಾಯ್ತು...ಐ ಆಮ್ ವೆರಿ ಸಾರಿ ಫಾರ್ ದಟ್..
ಏನು....ನೆನ್ನೆ ನಿನಗೆ ಗೊತ್ತಾಯ್ತ? ಆ ಮಾತು ಹೇಳುವುದಕ್ಕೆ ನಾಚಿಕೆ ಆಗುವುದಿಲ್ವ ಎಂದು ಮುಖ ಸಿಂಡರಿಸಿಕೊಂಡು ಅಲ್ಲಿಂದ ಎದ್ದು ಕೈ ತೊಳೆದುಕೊಳ್ಳಲು ಹೋದಳು. ಮಧುವಿಗೆ ಮುಖಕ್ಕೆ ಹೊಡೆದ ಹಾಗಾಗಿ...ಅವಳ ಹಿಂದೆಯೇ ಹೋದ.
ಪೂರ್ವಿ...ಪ್ಲೀಸ್ ನನಗೊಂದೂ ಅರ್ಥ ಆಗುತ್ತಿಲ್ಲ. ಹದಿನೈದನೆ ತಾರೀಖಿನಿಂದ ನಿನ್ನ ಫೋನ್ ಆಫ್ ಎಂದು ಬರುತ್ತಿದೆ, ಫೇಸ್ಬುಕ್ನಲ್ಲೂ ನೀನು ಸಿಗಲಿಲ್ಲ ನನಗೆ ವಿಷಯ ಗೊತ್ತಾಗಿದ್ದೆ ನೆನ್ನೆ. ಅದೂ ಸಹ ನನ್ನ ಸ್ನೇಹಿತ ಹರಿ ನಿಮ್ಮ ಟೀಮ್ ಮೇಟ್ ಬಳಿ ವಿಚಾರಿಸಿದ ಮೇಲೆಯೇ ಗೊತ್ತಾಗಿದ್ದು. ಆದರೆ ನೀನು ನೋಡಿದರೆ ಹೀಗೆ ಹೇಳುತ್ತಿದ್ದೀಯ? ಪ್ಲೀಸ್ ಪೂರ್ವಿ ನನಗೆ ಎಲ್ಲ ಗೊಂದಲಮಯವಾಗಿದೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ತಿಳಿಸು.
ಮಧು...ನಿಜವಾಗಿಯೂ ನಿನಗೆ ನಿನ್ನ ತಪ್ಪು ಗೊತ್ತಿಲ್ಲ್ವ? ಬಾ ನಿನ್ನ ತಪ್ಪು ಏನೆಂದು ತೋರಿಸುತ್ತೇನೆ...ಎಂದು ತನ್ನ ಲ್ಯಾಪ್ ಟಾಪ್ ಓಪನ್ ಮಾಡಿ ಫೇಸ್ಬುಕ್ ಓಪನ್ ಮಾಡಿ ಐದು ದಿನದ ಹಿಂದೆ ಅವಳು ಹಾಕಿದ್ದ ಸ್ಟೇಟಸ್ ಅನ್ನು ತೋರಿಸಿದಳು. "Today is the most sad day in my life, my mother passed away this morning". ನೋಡು ಮಧು ಈಗಲಾದರೂ ಗೊತ್ತಾಯ್ತ ನಿ
ಪೂರ್ವಿ ನಿಜ ಹೇಳಬೇಕೆಂದರೆ ಈಗಲೂ ನನ್ನ ತಪ್ಪೇನೆಂದು ಅರ್ಥವಾಗುತ್ತಿಲ್ಲ. ಹೌದು ನೀನು ನನ್ನ ಪ್ರೊಫೈಲನ್ನು ಡಿ
ಮಧು ಡಿಲೀಟ್ ಮಾಡದೆ ಇನ್ನೇನು ಮಾಡಬೇ
ಆಗ ಮಧುಗೆ ಜ್ಞಾನೋದಯವಾಯಿತು. ಅವನು ಮಧು ಏನು ಪೋಸ್ಟ್ ಮಾಡಿದರೂ ಅದ
Comments
ಪ್ರೀತಿ ಮಾಡ್ತಿರೋ ಹುಡುಗನಿಗೆ
ಪ್ರೀತಿ ಮಾಡ್ತಿರೋ ಹುಡುಗನಿಗೆ ತನ್ನ ತಾಯಿ ಸತ್ತ ವಿಷಯವನ್ನ ಫೋನ್ ಮಾಡಿ ಹೇಳದವಳು, ಫೇಸ್ ಬುಕ್ ಅಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿ ಇವನ ಪ್ರತಿಕ್ರಿಯೆ ನೋಡೋದು ಸ್ವಲ್ಪ unusual ಅನ್ಸುತ್ತೆ.
In reply to ಪ್ರೀತಿ ಮಾಡ್ತಿರೋ ಹುಡುಗನಿಗೆ by shridharjs
ತಾನು ಪ್ರೀತಿಸಿದ ಹುಡುಗಿ ಹಾಕಿದ
ತಾನು ಪ್ರೀತಿಸಿದ ಹುಡುಗಿ ಹಾಕಿದ ಸ್ಟೇಟಸ್ ಎಂದು ಯಾವುದನ್ನೂ ಸರಿಯಾಗಿ ಓದದೆ, ಲೈಕ್ ಬಟನ್ ಒತ್ತುತ್ತಿದ್ದ ಮಧು, ಒಂದು ವೇಳೆ 'ತನಗೆ ಮದುವೆ ನಿಶ್ಚಯ ಆಗಿದೆ' ಎಂಬ ಸ್ಟೇಟಸ್ ಪೂರ್ವಿ ಹಾಕಿದ್ದರೆ ಅದಕ್ಕೂ ಲೈಕ್ ಬಟನ್ ಒತ್ತಿ ಬಿಡುತ್ತಿದ್ದನೋ ಏನೋ?
In reply to ತಾನು ಪ್ರೀತಿಸಿದ ಹುಡುಗಿ ಹಾಕಿದ by ಮಮತಾ ಕಾಪು
ಹೌದು ಮಮತಾ ಅವರೇ..ಇತ್ತೀಚಿಗೆ
ಹೌದು ಮಮತಾ ಅವರೇ..ಇತ್ತೀಚಿಗೆ ಸುಮಾರು ಜನ ಹಾಗೆ ಮಾಡುತ್ತಿದ್ದಾರೆ. ಬರೆದಿರುವುದು ಏನೂ ಎಂಬುದನ್ನು ಆಲೋಚಿಸದೆ ಸುಮ್ಮನೆ ಲೈಕ್ ಒತ್ತುತ್ತಾರೆ.
In reply to ಪ್ರೀತಿ ಮಾಡ್ತಿರೋ ಹುಡುಗನಿಗೆ by shridharjs
ಶ್ರೀಧರ್ ಅವರೇ ಹುಡುಗಿಯ ತಾಯಿ
ಶ್ರೀಧರ್ ಅವರೇ ಹುಡುಗಿಯ ತಾಯಿ ಸತ್ತಿದ್ದಾಳೆ, ಮನೆಯಲ್ಲಿ ಎಲ್ಲರೂ ಇರುತ್ತಾರೆ ಆ ಸಂದರ್ಭದಲ್ಲಿ ಅವಳು ಫೋನ್ ಮಾಡಿ ಮಾತನಾಡಲು ಸಾಧ್ಯವಾಗದೆ ಫೇಸ್ಬುಕ್ ನಲ್ಲಿ ಹಾಕಿರುತ್ತಾಳೆ. ಇದರಲ್ಲಿ unusual ಏನೂ ಇಲ್ಲ ಅನಿಸುತ್ತದೆ :)