ಅಶೋಕ ಚಕ್ರ

ಅಶೋಕ ಚಕ್ರ

ಅಶೋಕ ಚಕ್ರ

ಭಾರತಮಾತೆಯ ಬಾವುಟದಲ್ಲಿ
ಭಾ ರಥ ಚಕ್ರವು ಮೆರೆಯುತಿದೆ//

ನಭೋ ಮಂಡಲದ ಅಹೋರಾತ್ರಿಗಳ
ಪ್ರತಿನಿಧಿಯಾಗಿ ಹೊಳೆಯುತಿದೆ/೧/

ಶೋಕವಿಲ್ಲದ ಅಶೋಕ ಚಕ್ರವು
ದೇಶ ಶಾಖೆಗಳ ತೋರುತಿದೆ/೨/

ದಶರಥ ಪುತ್ರನ ರಾಜ್ಯದ ಕನಸನು
ನನಸಾಗಿಸಿದ ಚಕ್ರವಿದು/೩/

ಪ್ರಜಾಪ್ರಭುತ್ವದ ವಿಚಾರಧಾರೆಯ
ಸಾಕಾರಮಾಡಿದ ಚಕ್ರವಿದು/೪/

ಶಿವ ಛತ್ರಪತಿ ರಾಣಾಪ್ರತಾಪರ
ಶೌರ್ಯ ಪ್ರತಾಪದ ಛಿನ್ಹೆಯಿದು/೫/

ಗೌತಮ ಗಾಂಧಿ ಸಂತ ಕಭೀರರ
ಶಾಂತಿ ಪ್ರತೀಕದ ಛಿನ್ಹೆಯಿದು/೬/

ನೇಸರ ಕೇಸರ ಹಸಿರ ಭೂಸಿರಿಯ
ಬಿಳಿಯುಸಿರಿನ ಭಾ ರಥ ಚಕ್ರ/೭/
ಎಲ್ಲರ ಹೃದಯದ ಶ್ರೀ ಚಕ್ರ.

ಅಹೋರಾತ್ರ.
೩:೦೦ ಘಂಟೆ.
೨೩/೦೪/೦೬.

 

Rating
No votes yet