ಅಸ್ಸಾಂ ನಲ್ಲಿ ಸರಣಿ ಬಾಂಬ್

ಅಸ್ಸಾಂ ನಲ್ಲಿ ಸರಣಿ ಬಾಂಬ್

ಅಸ್ಸಾಂ ನಲ್ಲಿ ಸರಣಿ ಬಾಂಬ್ ಸ್ಪೋಟವಾಗಿದ್ದು ಸುಮಾರು 30 ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ 150 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪ್ರಮುಖ ಸ್ಥಳಗಳಲ್ಲಿ 144 ಸೆಕ್ಷನ್ ಜಾರೀ ತರಲಾಗಿದೆ. ನಗರದ ಪ್ರಮುಖ ಪ್ರದೇಶಗಳಾದ ಪಾನ್ ಬಜಾರ್, ದಿಸ್ಪುರ್ ರಸ್ತೆ, ಪ್ಯಾನ್ಸಿ ರಸ್ತೆ, ಗಣೇಶ್ ಗುರಿ ಮೇಲ್ಸೇತುವೆ ಹಾಗೂ ನಗರದ ಜಿಲ್ಲಾಧಿಕಾರಿ ನ್ಯಾಯಾಲಯದ ಬಳಿ ಹಾಗೂ ಆಸ್ಸಾಂನ ಉತ್ತರ ಭಾಗದ ಬಾರಾಪೇಟೆಯಲ್ಲಿ ಎರಡು, ಬೊಂಗೈಗಾಂವ್ ನಲ್ಲಿ ಒಂದು, ಕೋಕ್ರಜಾರ್ ನಲ್ಲಿ ಮೂರು ಬಾಂಬ್ ಗಳು ಸ್ಫೋಟಗೊಂಡಿವೆ. ಇದಕ್ಕೆ ಕಾರಣ ಉಲ್ಪಾ ಉಗ್ರರ ಕೈವಾಡದ ಶಂಕೆ ಎಂದು ತಿಳುದು ಬಂದಿದೆ. ಗುವಾಹತಿ ಒಂದರಲ್ಲೇ 5 ಕಡೆ ಸರಣಿ ಬಾಂಬ್ ಸ್ಪೋಟ ಸಂಬವಿಸಿದೆ. ಸ್ಫೋಟ ಕೃತ್ಯಕ್ಕೆ ಕಾರು, ಬೈಕು, ಹಾಗೂ ಸೈಕಲ್ ಗಳನ್ನು ಬಳಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರದಿಂದ ಹೆಚ್ಚುವರಿ ಪೊಲೀಸ್ ಪಡೆ ಬಂದಿದೆ . ಸ್ಫೋಟ ಕೃತ್ಯಕ್ಕೆ ಸಾರ್ವಜನಿಕವಾಗಿ ಭಾರಿ ಆಕ್ರೋಶ, ಖಂಡನೆ ವ್ಯಕ್ತವಾಗಿದೆ. ಇದಕ್ಕೆ ಸಂಬಂದಿಸಿದ ಇನ್ನಷ್ಟು ಮಾಹಿತಿಯನ್ನು ಪ್ರತಿಕ್ರಿಯೆಯ ಮೂಲಕ ಸೂಚಿಸಿ......

Rating
No votes yet