ಆಗುತ್ತೋ? ಆಗೊಲ್ವೋ?

ಆಗುತ್ತೋ? ಆಗೊಲ್ವೋ?

ಸೋಮಾರಿ ಪುರಾಣ

ಕ್ರೀಮ್ ಬಿಸ್ಕತ್ ನಲ್ಲಿ ಕ್ರೀಮ್ ಇರುತ್ತೆ... ಆದರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

ನೀನ್ ಬಸ್ಸಿನಲ್ಲಿ ಹತ್ತಿದ್ರೂ... ಬಸ್ ನಿನ್ ಮೇಲೆ ಹತ್ತಿದ್ರೂ ಟಿಕೆಟ್ ತೊಗೊಳ್ಳೋನು ನೀನೇ... :)

ಟಿಕೆಟ್ ತೊಗೊಂಡು ಒಳಗೆ ಹೋಗೋದು "Cinema theatre" ಗೆ… ಒಳಗೆ ಹೋಗಿ ಟಿಕೆಟ್ ತೊಗೊಳೋದು "Operation Theatre"…

Cell ನಲ್ಲಿ 'BALANCE' ಇಲ್ಲ ಅಂದ್ರೆ 'CALL' ಮಾಡೋಕೆ ಆಗೊಲ್ಲ... ಮನುಷ್ಯನಿಗೆ ’ಕಾಲು’ ಇಲ್ಲ ಅಂದ್ರೆ 'BALANCE' ಮಾಡೋಕೆ ಆಗೊಲ್ಲ...

ರೈಲು ಎಷ್ಟೇ ವೇಗವಾಗಿ ಚಲಿಸಿದರೂ ಕೊನೆಯ ಬೋಗಿ ಕೊನೆಗೇ ಬರೋದು...

ಬಸ್ ಹೋದ್ರೂ 'BUS STAND' ಅಲ್ಲೇ ಇರುತ್ತೆ... ಆದ್ರೆ ಸೈಕಲ್ ಹೋದ್ರೆ 'CYCLE STAND' ಜೊತೆಗೇ ಹೋಗುತ್ತೆ...

ನಾಯಿಗೆ ನಾಲ್ಕು ಕಾಲುಗಳೇ ಇರ್ಬಹುದು... ಆದ್ರೂ ಅದಕ್ಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕೂರೋದಕ್ಕೆ ಆಗುತ್ತಾ?  

ಸೊಳ್ಳೆ ಕಚ್ಚಿದರೆ ’ಆನೆ ಕಾಲು’ ಬರುತ್ತೆ. ಆದ್ರೆ, ಆನೆ ಕಚ್ಚಿದ್ರೆ ’ಸೊಳ್ಳೆ ಕಾಲು’ ಬರುತ್ತಾ?  

೧೦ ಇರುವೆಗಳು ಸೇರಿ ಒಂದು ಆನೆಗೆ ಕಚ್ಚಬಹುದು... ಆದ್ರೆ ೧೦ ಆನೆ ಸೇರಿ ಒಂದು ಇರುವೆನ ಕಚ್ಚೋಕೆ ಆಗುತ್ತಾ?

 

ಈ ಸೋಮಾರಿ ಪುರಾಣ ಮಿಂಚಂಚೆ ಮೂಲಕ ಬಂದದ್ದು... 

Rating
No votes yet

Comments