ಆಯ್ತು ಡಿಯರ್ - ಗೊ ಅಹೆಡ್

ಆಯ್ತು ಡಿಯರ್ - ಗೊ ಅಹೆಡ್

(ಎಲ್ಲೋ ಓದಿದ್ದು)

ಹೀಗೆ ಒಂದೆಡೆ ಜನ ಗುಂಪುಗಟ್ಟ್ ಹರಟೆ ಹೊಡೆಯುತ್ತಿದ್ದರು

ಯಾರದ್ದೊ ಮೊಬೈಲ್ ರಿಂಗ್ ಆಯ್ತು

ಅತ್ತಕಡೆಯಿಂದ
"ಹಾಯ್ ಡಿಯರ್ " ಹೆಣ್ಣು ದ್ವನಿ
"ಹಲ್ಲೊ ಹೇಳು ಡಾರ್ಲಿಂಗ್ " ಇವನು
"ಇವತ್ತು ಒಂದು ಪಾರ್ಟಿ ಇದೆ ಹೋಗಲಾ"
"ಆಯ್ತು ಡಿಯರ್ - ಗೊ ಅಹೆಡ್ "

"ಹಾಗೆ ನಿಮ್ಮ ಕಾರ್ ತೆಗೆದುಕೊಂಡು ಹೋಗಲಾ"
"ಓ ಅದಕ್ಕೆನು ಡಿಯರ್ - ಗೊ ಅಹೆಡ್ . ನಿನ್ನ ಖುಶಿ ನನ್ನ ಖುಶಿ"

" ಬೆಳಗ್ಗೆ ನಿಮ್ಮ ಪರ್ಸ್‌ ಇಂದ ದುಡ್ಡು ತಗೊಂಡಿದ್ದೆ"
" ಅಷ್ಟೆ ತಾನೆ . ನನ್ನ ದುಡ್ಡು ನಿನ್ನ ದುಡ್ಡು ತಾನೆ"

"ಓ ಡಿಯರ್ . ಇವತ್ತು ಹಾಗೆ ಬರ್ತಾ ಜ್ಯುವೆಲ್ಲರೀಸ್ ತಗೊಳ್ಳಾ"
" ಖಂಡಿತಾ ಡಿಯರ್ ಗೊ ಅಹೆಡ್"

"ಅಯ್ಯೋ ನೀವೆಷ್ಟು ಒಳ್ಳೆಯವರು ರೀ"
"ಚಿನ್ನ ಪರವಾಗಿಲ್ಲ ನಿಂಗೇನು ಬೇಕೊ ಹಾಗೆ ಇರು ಸರೀನಾ"

"ಬಾಯ್"
"ಬಾಯ್"

ಅಲ್ಲಿಂದ ಫೋನ್ ಕಟ್ ಆಯ್ತು
"ಯಾರದ್ದೋ ಫೋನ್" ಆತನ ಸ್ನೇಹಿತ ಕೇಳಿದ
"ಯಾರಿಗೆ ಗೊತ್ತು. ಯಾವದೊ ಲ್ಯಾಂಡ್ ಲೈನ್ ನಿಂದ ಬಂದಿದೆ"

ನಗುವಿನ ಅಲೆ

Rating
No votes yet

Comments