ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!

ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!

ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!

ಯಡ್ಡಿಗಳೇ ದಯವಿಟ್ಟು ಕೆಳಗಿಳಿದು ಬಿಡಿ ಹಿರಿಯರ ಮಾತುಗಳ ಪಾಲಿಸಿ
ಯಾರೂ ಬರುವುದಿಲ್ಲ ತಮ್ಮ ಜೊತೆಗೆ ಈಗ ತಮ್ಮ ಮಾತುಗಳ ಆಲಿಸಿ

ಗೆಲ್ಲುವ ಕುದುರೆಗಳ ಹಿಂದೆ ಗುಂಪು ಗುಂಪು ಜನರು ರೊಕ್ಕವ ಪಣಕ್ಕಿಟ್ಟು
ಸೋಲುವ ಕುದುರೆಯ ಹಿಂದೆ ಇರುವುದಿಲ್ಲ ಜನರು ಲೆಕ್ಕಕ್ಕೆ ಬರುವಷ್ಟೂ

ತಮಗೇನಂತೆ ತಮ್ಮ ಜೀವನದ ಮಹದಾಸೆ ತೀರಿಸಿಕೊಂಡಿದ್ದೀರಿ ತಾವು
ಮುಖ್ಯಮಂತ್ರಿಯಾಗಿ ಲೂಟಿ ಮಾಡಿದುದನ್ನು ಕಣ್ತುಂಬ ಕಂಡೆವು ನಾವೂ

ಮೂರು ವರುಷಕ್ಕೆ ಸಾವಿರಾರು ಕೋಟಿಗಳಿಗೂ ಮಿಗಿಲಾಗಿದೆ ತಮ್ಮ ಆಸ್ತಿ
ಇನ್ನು ಮಕ್ಕಳಿಹರಲ್ಲ ನೋಡಿಕೊಳ್ಳುತ್ತಾರೆ ಮಾಡಬೇಕಿದ್ದರೆ ಇನ್ನೂ ಜಾಸ್ತಿ

ಎಲ್ಲ ಪಕ್ಷಗಳ ತಿರಸ್ಕರಿಸಿ ಭಾಜಪಾಕ್ಕೆ ಮತನೀಡಿದರು ಕನ್ನಡಿಗರು ಅಂದು
ಯಾವ ಪಕ್ಷವನ್ನೂ ನಂಬಲಾರದ ದುಸ್ಥಿತಿಗೆ ತಂದು ನಿಲ್ಲಿಸಿದಿರಿ ತಾವಿಂದು

ಇನ್ನು ಎರಡು ವರುಷಗಳ ಗದ್ದುಗೆಯನ್ನೇರುವವರಿಗೆ ಕಾದಿದೆ ಅಗ್ನಿ ಪರೀಕ್ಷೆ
ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ತೊಡಬೇಕೀಗ ದೀಕ್ಷೆ

ಇನ್ನಾದರೂ ತೆಪ್ಪಗಿದ್ದು ನಮ್ಮ ನಾಡಿನ ಏಳಿಗೆ ಸುಗಮವಾಗುವಂತೆ ಮಾಡಿ
ಕುಮಾರನಂತೆ ಕಾಲೆಳೆಯದಿರಿ ಹೊಸಮುಖ್ಯಮಂತ್ರಿಯ ದಿನದಿನವೂ ಕಾಡಿ!
********************
 

ಈ ಹಿಂದೆ ಬರೆದದ್ದು:

ಯಡ್ಡಿಗಳೇ ದಯವಿಟ್ಟು ರಾಜೀನಾಮೆ ನೀಡಿ!


Rating
No votes yet

Comments