ಇಲಿಗಳಿವೆ ಎಚ್ಚರಿಕೆ
ನಮ್ಮ ಕೆಲವೊಂದು ಆಚರಣೆಗಳನ್ನು (ಮುದಿಯಾಗಿ ಕೈಕಾಲು ಆಡದಿದ್ದರೂ) ಪ್ರಧಾನಿ ಪಟ್ಟದಲ್ಲೇ ಇಟ್ಟುಕೊಂಡಿದ್ದೇವೆ.
ತೆಂಗಿನಕಾಯಿ ದೇವರ ಸಮೀಪ ಸ್ಥಾನ ಗಿಟ್ಟಿಸಿದರೆ,ಮರದಿಂದ ಕಿತ್ತವ ಗುಡಿಯ ಹೊರಗೆ.
ಹೂಮಾಲೆ ದೇವರನ್ನು ಅಲಂಕರಿಸಿದರೆ,ಕಟ್ಟಿದವಳಿಗೆ ಒಳಗೆ ಪ್ರವೇಶವಿಲ್ಲ.
ಭಕ್ತಿಯೇರಲು ಕ್ಯಾಸೆಟ್ ಬ್ರಾಹ್ಮೀ ಮುಹೂರ್ತದಿಂದ ಹಾಕಿರುವರು,ಕ್ಯಾಸೆಟ್ ಹಾಡಿದ ಗಾಯಕನಿಗೆ ಬಹಿಷ್ಕಾರ.ಯೇಸುದಾಸ್ ಬೇಸರದಿಂದ 'ಬೆಕ್ಕು, ಇಲಿಗಳಿಗೆ ಪ್ರವೇಶವಿದೆ,ನನಗೆ ಪ್ರವೇಶವಿಲ್ಲ'ಎಂದಿರುವರು.ನನಗೂ ಅನಿಸುತ್ತಿದೆ-ಕೆಲವು ಗುಡಿಗಳಲ್ಲಿ ದೇವರನ್ನು ಬಿಟ್ಟರೆ ಸಾಮಾನ್ಯ ಜ್ಞಾನವೂ ಇಲ್ಲದ ಇಲಿ,ಹೆಗ್ಗಣಗಳೇ ವಾಸಿಸುತ್ತಿವೆ.
ಗಂಡಸರಿಗಿಂತ ಹೆಂಗಸರೇ ಜಾಸ್ತಿ ದೇವರ ಭಕ್ತಿ ಮಾಡುವುದು,ದೇವಸ್ಥಾನಕ್ಕೆ ಹೋಗುವುದು.ಆದರೆ ಅವರಿಗೆ ವಿಧಿಸಿದ ಕಟ್ಟುಪಾಡುಗಳೇ ವಿಪರೀತ.
ಯಾಕೆ ದೇವರಿಗೆ ಮುಟ್ಟಾದವರ ಮೇಲೆ ಸಿಟ್ಟು? ತನ್ನ ಮಗುವಿಗಾಗಿ ತಾಯಿಯ ದೇಹವು ಸಂಗ್ರಹಿಸುವ ಶುದ್ಧ ರಕ್ತವಿದೆಂದು ಸ್ಕೂಲ್ ಓದುವ ಮಕ್ಕಳಿಗೂ ಗೊತ್ತಿದೆ.ಒಬ್ಬ ಕಜ್ಜಿಬುರುಕ,ಕಚ್ಚೆಹರುಕ,ಕೊಲೆಗಡುಕ ಸಹ ದೇವಸ್ಥಾನಕ್ಕೆ ಹೋಗಬಹುದು. ವಿಚಿತ್ರವೆಂದರೆ,ಇದನ್ನು ವಿರೋಧಿಸಬೇಕಾದ ಸ್ತ್ರೀಯರೇ ಇದರ ಆಚರಣೆಯನ್ನು ಶೃದ್ಧೆಯಿಂದ ಮಾಡುತ್ತಿರುವುದು.೨ ವರ್ಷದ ಹಿಂದೆ ಜಯಮಾಲ ಅಯ್ಯಪ್ಪ ದರ್ಶನ ಮಾಡಿದ್ದೇ ದೊಡ್ಡ ಅಪರಾಧವಾಯಿತು.
ಈ ದೇವಳಗಳ ಒಡೆಯರ ಕುರುಡು ನಂಬಿಕೆಗಳು ತೊಲಗಿ,ದೇವರಲ್ಲಿ ಹಾಗೂ ಜನರಲ್ಲಿ ಇವರಿಗೆ ನಿಜ ಪ್ರೀತಿ ಬರಲಿ ಎಂದು ಬಯಸುವ
-ಗಣೇಶ.
Comments
ಉ: ಇಲಿಗಳಿವೆ ಎಚ್ಚರಿಕೆ
ಉ: ಇಲಿಗಳಿವೆ ಎಚ್ಚರಿಕೆ