ಇಳೆಯ ವ್ಯಾಮೋಹ

ಇಳೆಯ ವ್ಯಾಮೋಹ

ಜೀವನವೇ ಇಷ್ಟು, ಇರುವವರೆಗೆ ಹೊನ್ನು ಹಣ ಮಣ್ಣು
ಎಂದು ಕಿತ್ತಾಟ ಕಾದಾಟ
ಸತ್ತಮೇಲೆನಿದೆ ಬರೀ ಮಣ್ಣು

ಸಾಯುವವರೆಗೂ ದೊಡ್ಡ ಮನುಷ್ಯ
ಸತ್ತ ಮೇಲೆ ಬರಿಯ ಕಳೆ ಬರ

ಹೀಗೆ ಆಲೋಚನೆಗಳು ಮೂಡಿ
ವೈರಾಗ್ಯ ತುಂಬಿ , ಜೀವನ ನಶ್ವರ
ಆತ್ಮ ಶಾಶ್ವತ, ಇನ್ನೇಕೆ ಆಸ್ತಿ ಹಣ ವ್ಯಾಮೋಹ
ಮನುಷ್ಯ ಎಂದಿದ್ದರೂ ಹೊತ್ತಿಕೊಂಡು
ಹೋಗೋದಿಲ್ಲ ಸತ್ತಾಗ ಏನನ್ನೂ
ಒರೆಸಿಕೊಂಡು ಕಣ್ಣಾ
ಹೊರ ಬಂದು ಕಾರನೇರುತ್ತಿದ್ದಂತೆಯೇ
ಮೊಬೈಲ್ ಒಂದಕ್ಕೆ ಈದ ಉತ್ತರ
"ಹೇ ಇನ್ನೂ ದುಡ್ಡು ಕೊಟ್ಟಿಲ್ವಾ , ಯಾವಾಗ ಕೊಡೋದು"
ಘರ್ಜಿಸಿದಾಗೊಮ್ಮೆ ನಗು
ಕೇವಲ ಕೊಂಚ ಹೊತ್ತೇ ಈ ವೈರಾಗ್ಯ
ಮನುಜನ ಬಿಡದಲ್ಲಾ ಈ ಇಳೆಯ ವ್ಯಾಮೋಹ

Rating
No votes yet

Comments