ಈ ಏಪ್ರಿಲ್ಲಿಗೇಕೊ ಮುನಿಸು...
ಯಾಕೊ ಈ ಏಪ್ರಿಲ್ ಕನ್ನಡ ನಾಡಿಗರ ಮೇಲೆ ಮುನಿಸಿಕೊಂಡಂತಿದೆ. ಪಿಬಿಎಸ್ ಹಿಂದೆಯೆ ಈಗ ಶಕುಂತಲಾದೇವಿ ಸರದಿ. ಆ ವಿದಾಯದ ಸಂತಾಪದ ಜತೆಗೆ ಏಪ್ರಿಲ್ಲಿಗೊಂದು ವಿನಂತಿ, ಈ ಪುಟ್ಟ ಕವನದಲ್ಲಿದೆ
- ನಾಗೇಶ ಮೈಸೂರು, ಸಿಂಗಪೂರದಿಂದ.
-----------------------------------------
ಈ ಏಪ್ರಿಲ್ಲಿಗೇಕೊ ಮುನಿಸು
ನಮ್ಮ ಪ್ರತಿಭೆಗಳೆ ತಿನಿಸು
ಬರಿ ದುಃಖವೆ ನಮಗುಣಿಸು
ಅಗಲಿದ ಹಿರಿಯರಿಗೆ ನಮಿಸು!
ಇನ್ನೂ ಆರಿಲ್ಲ ಪಿಬಿ ಶ್ರಿನಿವಾಸ
ಈಗ ಶಕುಂತಲಾದೇವಿ ಮೋಸ
ವಿದಾಯಗಳಿಗಿರುವಂತಿದೆ ಹರ್ಷ
ನಮ್ಮ ಪ್ರತಿಭೆಗಳೆಕಿಷ್ಟು ಆಕರ್ಷ!
ಒಂದೆಡೆ ನಿರ್ಗಮನ ಗಾನ ಮಾಧುರ್ಯ
ಮತ್ತೊಂದೆಡೆ ಕಳುವೆ ಬುದ್ಧಿ ಚಾತುರ್ಯ
ಬಡವಾಗುವ ಸರದಿ ಎಲ್ಲ್ಸಾ ತರತರದಿ
ಕನ್ನಡನಾಡಿಗೇಕೊ ಈ ಏಪ್ರಿಲ್ಲೆ ವ್ಯಾಧಿ!
ಸಾಕುಮಾಡಯ್ಯ ವಿಧಿ ಸಹಚರ
ಬರಿ ನಮಗೇಕಷ್ಟೆ ಈ ಗ್ರಹಚಾರ
ಮಸ್ತು ಬಿದ್ದಿವೆ ಕೆಲಸಕೆ ಬಾರದ ಸ್ವತ್ತು
ಗುಡಿಸಬಾರದೆ ನಮ್ಮ ನಾಡೋಜರ ಬಿಟ್ಟು?
ಆದದ್ದಾಯಿತು ವಿದಾಯ ನಿಧನ
ಇನ್ನು ಮುಂದಾದರು ತೋರಿ ನಿಧಾನ
ಕರ ಜೋಡಿಸಿ ನಮಿಸುವುದಷ್ಟೆ ಕೆಲಸ
ನಾವೀಗ ಮಾಡಬಹುದಾದ ಕನಿಷ್ಟ!
- ನಾಗೇಶ ಮೈಸೂರು, 22.ಏಪ್ರಿಲ್.2013, ಸಿಮ್ಗಾಪುರದಿಂದ
Rating
Comments
ಆಯಾಯ ಕ್ಷೇತ್ರಗಳ ಪ್ರತಿಭೆಗಳು
ಆಯಾಯ ಕ್ಷೇತ್ರಗಳ ಪ್ರತಿಭೆಗಳು ಧಿಗ್ಗಜರು ಆ ದೇವರ ಕರೆಗೆ ಓಗೊಟ್ಟು ಒಬ್ಬೊಬ್ಬರಾಗಿ ಅದೂ ಏಪ್ರಿಲ್ನಲ್ಲಿ ಅಚ್ಚರಿ ತರುತ್ತಿದೆ.
ಅಂದು ರಾಜ್ , ಈಗ ಪೀ ಬಿ ಶ್ರೀ ಮತ್ತು ಶಂಕುಂತಲ ದೇವಿ .. ಅವರೆಲ್ಲರ ಆತ್ಮಕ್ಕೆ ಸದ್ಗತಿ ಸಿಗಲಿ .
ಅವರವರ ಕೆಲಸ ಕಾರ್ಯಗಳು ಕಾರಣವಾಗಿ ಅವರು ಸದಾ ಅಮರ.
ನಿಮ್ಮ ಜೊತೆ ನಮ್ಮದು ನುಡಿ ನಮನ ..
\।
ನಮಸ್ಕಾರ ವೆಂಕಟೇಶ್ ರವರಿಗೆ,
ನಮಸ್ಕಾರ ವೆಂಕಟೇಶ್ ರವರಿಗೆ,
ತಮ್ಮ ಮಾತು ತುಂಬಾ ನಿಜ - ಪೂಲ್ ಮಾಡಲು ಏಪ್ರಿಲ್ಲೆ ವಾಸಿ ಅಂತಲೊ ಏನೊ, ಸ್ವರ್ಗಕ್ಕೆ ಈ ತಿಂಗಳಲ್ಲೆ ಈ ರೀತಿಯ ಪ್ರತಿಭಾ ಪಲಾಯನವಾಗುತ್ತಿದೆಯೊ ಏನೊ? ಅವರ ಆತ್ಮಗಳಿಗೆ ಅಲ್ಲಾದರೂ ಶಾಂತಿ ಸಿಗಲಿ.
- ನಾಗೇಶ ಮೈಸೂರು, ಸಿಂಗಾಪುರದಿಂದ
In reply to ನಮಸ್ಕಾರ ವೆಂಕಟೇಶ್ ರವರಿಗೆ, by nageshamysore
ಇದು ವಿಧಿ ನಿಯಮ ಕಂದ
ಇದು ವಿಧಿ ನಿಯಮ ಕಂದ
ಗೆಳೆಯ ಪಿಬಿಎಸ್, ಹೋದರು,
ಇಳೆಯ ಶಕುಂತಲೆಯ ಪ್ರಾಯವೆಷ್ಟು ?
ಯಾರಿಗನ್ನಿಸಿತ್ತು ತೆರಳುವವಳೆಂದು
ಹುಟ್ಟು ಸಾವಿನ ವಿಷಯ ಅವನೊಬ್ಬ ಅರಿವ,
ನಾನು, ನೀನು ಹಿರಿಯ, ಬಲ್ಲಿದ, ಆಚಾರ್ಯ,
ರಿಗೂ ಬುಲಾವು ಬರುವುದು ಮೇಲಿಂದ !
In reply to ಇದು ವಿಧಿ ನಿಯಮ ಕಂದ by venkatesh
ಅವರವರ ಸರದಿ ಬರಲವರವರ ಹಾದಿ,
ಅವರವರ ಸರದಿ ಬರಲವರವರ ಹಾದಿ,
ಹಿಡಿದು ನಡೆವುದೆ ಈ ಲೋಕಕಂಟಿದ ವ್ಯಾಧಿ,
ನಾವೆಷ್ಟೆ ಅತ್ತು ಮಾಡಿದರು ಫಿರ್ಯಾದಿ,
ಕೇಳುವವರಾರಿಲ್ಲಿ ಎಲ್ಲ ಅವರವರ ವಿಧಿ!
- ನಾಗೇಶ ಮೈಸೂರು, ಸಿಂಗಾಪುರದಿಂದ
ನಮಸ್ಕಾರ ನಾಗೇಶ್,
ನಮಸ್ಕಾರ ನಾಗೇಶ್,
ಇದೀಗ ಶ್ರೀಯುತ ಲಾಲ್ಗುಡಿ ಜಯರಾಮನ್ ಇನ್ನಿಲ್ಲದ ಸುದ್ದಿ.
ಖಂಡಿತವಾಗಿ ಕರ ಜೋಡಿಸಿ ನಮಿಸುವುದಷ್ಟೆ ಕೆಲಸ.
ಇಷ್ಟು ದಿನ ನಮ್ಮೊಡನೆ ಇದ್ದರು ಅದೇ ನಮ್ಮ ಭಾಗ್ಯ.
ವಾಣಿ, ಸಿಂಗಪುರ
In reply to ನಮಸ್ಕಾರ ನಾಗೇಶ್, by ramvani
ನಮಸ್ಕಾರ ವಾಣಿ,
ನಮಸ್ಕಾರ ವಾಣಿ,
ಯಾಕೊ ಈ ಏಪ್ರಿಲ್ ಹೆಚ್ಚೆಚ್ಚು ಕಣ್ಣಾಮುಚ್ಚೆ, ಕಾಡೆಗೂಡೆ ಆಡಿಸುತ್ತಿರುವಂತೆ ಕಾಣಿಸುತ್ತಿದೆ. ನಾವು ಬಿಡಲೊಲ್ಲದ ಹಕ್ಕಿಗಳನ್ನೆಲ್ಲ ಹುಡುಕಿ ತಡುಕಿ ಕದ್ದೊಯ್ಯುತ್ತಿದೆ. ನೀವಂದಂತೆ ನಮ್ಮ ಭಕ್ತಿಪೂರ್ವಕ, ಹೃತ್ಪೂರ್ವಕ, ಕೃತಜ್ಞತಭರಿತ ನಮನಗಳಷ್ಟೆ ನಾವು ತೋರಬಹುದಾದ ಶ್ರದ್ದಾಂಜಲಿ.
- ನಾಗೇಶ ಮೈಸೂರು, ಸಿಂಗಾಪುರದಿಂದ