ಋಣಾನುಬಂಧ ಕೊನೆಯ ಭಾಗ
ಮರುದಿನ ಬೆಳಿಗ್ಗೆ ಎಂದಿನಂತೆ ಸಿದ್ದಾರ್ಥ ತಿಂಡಿ ತಿಂದು ಕಲ್ಯಾಣಿಯನ್ನುಕರೆದೊಯ್ಯಲು ರೂಮಿಗೆ ಬಂದರೆ ಅವಳಿನ್ನೂ ರಾತ್ರಿಯ ಕೊಪದಲ್ಲೇ ಇದ್ದಳು.ಇಲ್ಲ ನಾನು ಬರುವುದಿಲ್ಲ ನೀವು ಹೋಗಿ ಬನ್ನಿ ಎಂದಳು. ಸಿದ್ದಾರ್ಥನೂ ಹೆಚ್ಚು ಬಲವಂತ ಮಾಡಲು ಹೋಗದೆ ತಾನು ಹೊರಡುತ್ತೇನೆ ಎಂದು ತನ್ನ ಪಾಡಿಗೆ ತಾನು ಹೊರಟ.
ಪ್ರೆಸ್ ಗೆ ಬಂದು ಕೆಲಸದಲ್ಲಿ ನಿರತನಾಗಿದ್ದ. ಮಧ್ಯಾಹ್ನ ಊಟದ ಸಮಯಕ್ಕೆ ಕೈ ತೊಳೆದುಕೊಂಡುಬಂದು ಇನ್ನೇನು ಊಟಕ್ಕೆ ಕೂಡೋಣ ಎನ್ನುವಷ್ಟರಲ್ಲಿ ಮನೆಯಿಂದ ಮೊಬೈಲ್ ಗೆ ಕರೆ ಬಂತು. ಏನಿರಬಹುದೆಂದು
ನೋಡಿದರೆ ಸಿದ್ದಾರ್ಥನ ತಾಯಿ ಅಳುತ್ತಾ ಸಿದ್ದು ಕಲ್ಯಾಣಿ ಪತ್ರ ಬರೆದಿಟ್ಟು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟಿದ್ದಾಳೆ ಕಣೋ ನೀನು ಬೇಗ ಬಾ ಎಂದು ಒಂದೇ ಉಸಿರಿನಲ್ಲಿ ಹೇಳಿದರು. ಸಿದ್ದಾರ್ಥನಿಗೆ ಏನೊಂದು ಗೊತ್ತಾಗಲಿಲ್ಲ. ಅಮ್ಮ ಸಮಾಧಾನ ಮಾಡಿಕೊಂಡು ನಿಧಾನವಾಗಿ ಹೇಳು ಏನೆಂದು ಬರೆದಿಟ್ಟಿದ್ದಾಳೆ. ಜೀವನದಲ್ಲಿ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟಿದ್ದಾಳೆ ಕಣೋ ಎಂದರು. ಸಿದ್ದಾರ್ಥನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಅಮ್ಮ ನಾನು ಈಗಲೇ ಬರುತ್ತೇನೆ ಎಂದು ಕರೆ ಕಟ್ ಮಾಡಿ ಸೀದಾ ಮನೆಗೆ ಬಂದ. ರೂಮಿನ ಬಳಿ ಬಂದಾಗ ಅಮ್ಮ ಅಲ್ಲೇ ಅಳುತ್ತಾ ಕೂತಿದ್ದರು.
ಅಮ್ಮ ಎಷ್ಟು ಹೊತ್ತಾಯಿತು ಅವಳು ಒಳಗೆ ಹೋಗಿ. ಬೆಳಿಗ್ಗೆ ತಿಂಡಿ ತಿಂದು ಸ್ವಲ್ಪ ಹೊತ್ತು ಸುಮ್ಮನೆ ಮಹಡಿ ಮೇಲೆ ಕುಳಿತಿದ್ದಳು. ಆಮೇಲೆ ನಾನೇ ಒಳಗೆ ಕರೆದೆ. ಒಳಗೆ ಬಂದವಳೇ ನನ್ನ ಬಳಿಯೂ ಏನೂ ಮಾತಾಡಲಿಲ್ಲ. ಸೀದಾ ರೂಮಿಗೆ ಹೋಗಿ ಬಾಗಿಲು ಹಾಕಿ ಕೊಂಡಳು. ಆಮೇಲೆ ಊಟದ ಸಮಯಕ್ಕೆ ಅವಳನ್ನು ಕರೆಯೋಣ ಎಂದು ರೂಮಿನ ಬಳಿ ಹೋದಾಗ ಅಲ್ಲಿ ಪತ್ರ ಬಿದ್ದಿತ್ತು ಎಂದು ಕೈಲಿದ್ದ ಪತ್ರವನ್ನು ಕೊಟ್ಟರು. ಅದನ್ನು ಬಿಡಿಸಿ ಓದಿದ ಸಿದ್ದಾರ್ಥ. ಅದರಲ್ಲಿ ಹೆಚ್ಚೇನೂ ಬರೆದಿರಲಿಲ್ಲ. ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿತ್ತು. ಸಿದ್ದಾರ್ಥ ಎಷ್ಟು ಬಾರಿ ಕೂಗಿದರೂ ಒಳಗಿನಿಂದ ಯಾವುದೇ ಉತ್ತರ ಬರಲಿಲ್ಲ. ಸಿದ್ದಾರ್ಥ ಒಂದು ಕಬ್ಬಿಣದ ರಾಡ್ ತೆಗೆದುಕೊಂಡು ಬಂದು ಬಾಗಿಲನ್ನು ಒಡೆಯಲು ಪ್ರಯತ್ನಿಸಿದ ಹದಿನೈದು ನಿಮಿಷಗಳ ನಂತರ ಬಾಗಿಲು ತೆರೆದುಕೊಂಡಿತು. ಒಳಗೆ ಮಂಚದ ಮೇಲೆ ಕಲ್ಯಾಣಿ ಪ್ರಜ್ಞೆ ಇಲ್ಲದೆ ಮಂಚದ ಮೇಲೆ ಮಲಗಿದ್ದಳು. ಅವಳ ಪಕ್ಕದಲ್ಲಿ ಆತ್ಮಹತ್ಯೆಗೆ ಬಳಸಿದ ಯಾವುದೇ ವಸ್ತು ಕಾಣಲಿಲ್ಲ. ಸಿದ್ದಾರ್ಥನಿಗೆ ಒಂದು ಕ್ಷಣ ಏನೋ ಒಂದು ಅನುಮಾನ ಬಂತು. ಇರಲಿ ಎಂದು ಕೊಂಡು ಅವನಿಗೆ ಪರಿಚಯವಿದ್ದ ಡಾಕ್ಟರ ಗೆ ಕರೆ ಮಾಡಿ ಹೀಗೆ ನನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತೇನೆ. ಏನೇನು ಪರೀಕ್ಷೆ ಮಾಡಬೇಕೋ ಎಲ್ಲ ಕಾನೂನು ಬದ್ಧವಾಗಿಯೇ ಮಾಡಿ ಎಂದು ಕರೆ ಕಟ್ ಮಾಡಿ ಅವಳನ್ನು ಎತ್ತುಕೊಂಡು ಆಸ್ಪತ್ರೆಗೆ ಬಂದ.
ಅರ್ಧ ಗಂಟೆಯ ನಂತರ ಆಚೆ ಬಂದ ಡಾಕ್ಟರ ಸಿದ್ದಾರ್ಥನನ್ನು ತಮ್ಮ ಕೋಣೆಗೆ ಕರೆದುಕೊಂಡು ಹೋಗಿ ಕೂಡಿಸಿಕೊಂಡರು. ಸಿದ್ದಾರ್ಥ ಕುತೂಹಲದಿಂದ ಹೇಳಿ ಡಾಕ್ಟರ್ ಅವಳು ಏನು ತೆಗೆದುಕೊಂಡಿದ್ದಳು. ಡಾಕ್ಟರ ಸಿದ್ದಾರ್ಥನ ಕಡೆ ಒಮ್ಮೆ ನೋಡಿ ಸಿದ್ದಾರ್ಥ ಅಸಲಿಗೆ ನಿಮ್ಮ ಹೆಂಡತಿ ಏನೂ ತೆಗೆದುಕೊಂಡಿಲ್ಲ. ಅವರು ಪ್ರಜ್ಞೆಯೇ ತಪ್ಪಿರಲಿಲ್ಲ. ನೇರವಾಗಿ ಹೇಳಬೇಕೆಂದರೆ ಅವರು ನಿಮ್ಮ ಬಳಿ ಬರೀ ನಾಟಕ ಆಡಿದ್ದಾರೆ ಎಂದರು. ತಕ್ಷಣ ಸಿದ್ದಾರ್ಥನಿಗೆ ತನ್ನ ಅನುಮಾನ ನಿಜ ಎಂದೆನಿಸಿತು. ನನ್ನನ್ನು ಹೆದರಿಸಲು ಅವಳು ಮಾಡಿದ ನಾಟಕ ಇದು ಎಂದು ಗೊತ್ತಾಗಿ ಮೈ ಎಲ್ಲ ಉರಿಯಿತು. ಆಸ್ಪತ್ರೆಯಲ್ಲಿ ಏನೂ ಮಾತಾಡುವುದು ಬೇಡ ಎಂದು ನಿರ್ಧರಿಸಿ ಅವಳನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದು ಕೂಡಲೇ ಅವರ ಅಪ್ಪನಿಗೆ ಕರೆ ಮಾಡಿ ಮನೆಗೆ ಬರಲು ತಿಳಿಸಿದ.
ಸಿದ್ದಾರ್ಥನ ಮಾತಿನಲ್ಲಿದ್ದ ಆತಂಕವನ್ನು ಗ್ರಹಿಸಿದ ಕಲ್ಯಾಣಿಯ ಅಪ್ಪ ಹಾಗೂ ಅಮ್ಮ ಕೂಡಲೇ ಹೊರಟು ಸಿದ್ದಾರ್ಥನ ಮನೆಗೆ ಬಂದರು. ಮನೆಯಲ್ಲಿ ಏನೋ ಒಂದು ರೀತಿ ಸ್ಮಶಾನ ಮೌನ ಆವರಿಸಿತ್ತು. ಮನೆಗೆ ಬಂದವರನ್ನು ಸಿದ್ದಾರ್ಥನೆ ಬರ ಮಾಡಿಕೊಂಡ. ಅವರು ಬಂದಿದ್ದನ್ನು ನೋಡಿದ ತಕ್ಷಣ ರೂಮಿನಲ್ಲಿದ್ದ ಕಲ್ಯಾಣಿ ಆಚೆ ಬಂದಳು. ಬಂದವಳೇ ಸೀದಾ ಅವಳ
ಅಮ್ಮನ ಬಳಿ ಹೋಗಿ ನಿಂತುಕೊಂಡಳು. ಕಾಫಿ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರೂ ಹಾಲಿನಲ್ಲಿ ಕುಳಿತಿದ್ದರು. ಕಲ್ಯಾಣಿಯ ತಂದೆಯೇ ಮಾತು ಶುರು ಮಾಡಿದರು. ಹೇಳಿ ಅಳಿಯಂದರೆ ಏನು ವಿಷಯ ಕೂಡಲೇ ಹೊರಟು ಬನ್ನಿ ಎಂದು ಹೇಳಿದಿರಿ. ಯಾಕೆ ನನ್ನ ಮಗಳು ಏನಾದರೂ ತೊಂದರೆ ಕೊಡುತ್ತಿದ್ದಾಳ ಎಂದು ನಗುನಗುತ್ತ ಕೇಳಿದರು. ಸಿದ್ದಾರ್ಥ ಒಮ್ಮೆ ಕಲ್ಯಾಣಿಯ ಕಡೆ ನೋಡಿ ಅದನ್ನು ನೀವೇ ನಿಮ್ಮ ಮಗಳನ್ನು ಕೇಳಿ ಎಂದ. ತಕ್ಷಣ ಕಲ್ಯಾಣಿಯ ತಂದೆಗೆ ಏನೋ ಯಡವಟ್ಟು ಆಗಿದೆ ಎಂದು ಅರಿವಾಯಿತು. ತಮ್ಮ ಮಗಳ ಕಡೆ ತಿರುಗಿ ಯಾಕಮ್ಮ ಏನಾಯ್ತು ಎಂದು ಕೇಳಿದರು. ತಕ್ಷಣ ಕಲ್ಯಾಣಿ ಒಂದೇ ಮಾತಿನಲ್ಲಿ ಅಪ್ಪ ನನಗೆ ಇಲ್ಲಿ ಇರಲು ಇಷ್ಟ ಇಲ್ಲ ನಾನು ವಾಪಸ್ ಬಂದು ಬಿಡುತ್ತೇನೆ ಎಂದಳು.
ಒಂದು ನಿಮಿಷ ಎಲ್ಲರೂ ಕಲ್ಯಾಣಿಯ ಕಡೆ ಗಾಭರಿಯಿಂದ ನೋಡಿದರು. ಕಲ್ಯಾಣಿ ಯಾರ ನೋಟವನ್ನೂ ಎದುರಿಸಲು ಸಾಧ್ಯವಾಗದೆ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದಳು. ತಕ್ಷಣ ಸಿದ್ದಾರ್ಥನ ಅಪ್ಪ ಕಲ್ಯಾಣಿ ಏನಮ್ಮ ಏನು ಮಾತಾಡ್ತಾ ಇದ್ದೀಯ ನೀನು. ಇನ್ನು ಮದುವೆಯಾಗಿ ಸರಿಯಾಗಿ ಒಂದು ತಿಂಗಳಾಗಿಲ್ಲ ಆಗಲೇ ಹೋಗುತ್ತೀನಿ ಎನ್ನುತ್ತಿದ್ದೀಯಲ್ಲ? ಯಾಕೆ ಏನಾಯ್ತು? ನೋಡಮ್ಮ ಸಂಸಾರ ಎಂದಮೇಲೆ ಸಣ್ಣ ಪುಟ್ಟ ವಿಷಯಗಳು ಬರುತ್ತವೆ ಹೋಗುತ್ತವೆ ಅಷ್ಟಕ್ಕೆಲ್ಲ
ಮನೆ ಬಿಟ್ಟು ಹೋಗುತ್ತೀನಿ ಎಂದರೆ ಹೇಗಮ್ಮ? ಏನಿದ್ದರೂ ಮಾತಾಡಿ ಬಗೆಹರಿಸಿಕೊಳ್ಳಬೇಕು ಎಂದು ಮಗನ ಕಡೆ ತಿರುಗಿ ಸಿದ್ದು ಯಾಕೆ ಏನು ಸಮಸ್ಯೆ ನಿಮ್ಮಿಬ್ಬರ ನಡುವೆ. ಅವಳೇನೋ ಚಿಕ್ಕ ಹುಡುಗಿ ನಿನಗಾದರೂ ಬುದ್ಧಿ ಬೇಡವ? ಸಣ್ಣ ಪುಟ್ಟ ವಿಷಯಗಳು ಅಪ್ಪ ಅಮ್ಮನವರೆಗೂ ಬರಲೇ ಬಾರದು. ನೀವು ನೀವೇ ಬಗೆಹರಿಸಿಕೊಳ್ಳಬೇಕು. ಪಾಪ ಸುಮ್ಮನೆ ಕಲ್ಯಾಣಿಯ ಅಪ್ಪ ಅಮ್ಮನಿಗೆ ಗಾಭರಿ ನೋಡು. ಅಲ್ಲಿ೦ದ ಬಂದಿದ್ದಾರೆ. ಬೀಗರೇ ನೀವು ಏನೂ ಚಿಂತೆ ಮಾಡಬೇಡಿ ನಿಮ್ಮ ಮಗಳು ನಮ್ಮ ಮಗಳು ಇದ್ದ ಹಾಗೆ ನಿಮ್ಮ ಪಾಡಿಗೆ ನೀವು ಹೊರಡಿ. ಅಷ್ಟರಲಿ ಕಲ್ಯಾಣಿ ಮತ್ತೆ ಇಲ್ಲ ನಾನು ಇಲ್ಲಿ ಇರಲ್ಲ ನಮ್ಮ ಮನೆಗೆ ಹೋಗಬೇಕು ಎಂದು ಸೀದಾ ರೂಮಿಗೆ ಹೋಗಿ ಮೊದಲೇ ಸಿದ್ಧ ಪಡಿಸಿಕೊಂಡಿದ್ದ ಬ್ಯಾಗನ್ನು ತೆಗೆದುಕೊಂಡು ಬಂದು ಅಮ್ಮನ ಪಕ್ಕ ನಿಂತಳು.
ಸಿದ್ದಾರ್ಥನ ಅಮ್ಮ ಎದ್ದು ಅವಳ ಪಕ್ಕ ಹೋಗಿ ಅವಳ ತಲೆ ನೇವರಿಸಿ ನೋಡಮ್ಮ ಕಲ್ಯಾಣಿ ನೀನು ಹೀಗೆ ಮಾಡಿದರೆ ನಮ್ಮ ಮನೆ ಮರ್ಯಾದೆ ಏನು ಆಗುತ್ತದೆ? ನಿನ್ನ ಸಮಸ್ಯೆ ಏನೆಂದು ಹೇಳು ಮೊದಲು. ನೀನು ಹೀಗೆ ಏನೂ ಹೇಳದೆ ಸುಮ್ಮನೆ ಹೋಗುತ್ತೀನಿ ಎಂದರೆ ಏನರ್ಥ. ಅಲ್ಲಿಯವರೆಗೂ ಸುಮ್ಮನಿದ್ದ ಕಲ್ಯಾಣಿಯ ತಾಯಿ ಸಹ ಎದ್ದು ಬಂದು ನೋಡಮ್ಮ ಕಲ್ಯಾಣಿ ಅವರು ಪಾಪ ಅಷ್ಟು ಹೇಳುತ್ತಿದ್ದಾರೆ. ಯಾಕೆ ಹೀಗೆಲ್ಲ ಮಾಡ್ತಾ ಇದ್ದೀಯ? ನಿನ್ನ ಒಪ್ಪಿಗೆ ಕೇಳಿ ತಾನೇ ಮದುವೆ ಮಾಡಿದ್ದು. ಈಗ ಹೀಗೆಲ್ಲ ಮಾಡಿದರೆ ಹೇಗೆ? ಅಮ್ಮ ಹೇಳಿದೆನಲ್ಲ ನನಗೆ ಇಲ್ಲಿರಲು ಇಷ್ಟ ಇಲ್ಲ ಎಂದು. ನಿಮಗೆ ನನ್ನನ್ನು ಕರೆದುಕೊಂಡು ಹೋಗಲು ಇಷ್ಟ ಇಲ್ಲದಿದ್ದರೆ ಹೇಳಿಬಿಡಿ ನಾನು ಎಲ್ಲೋ ಒಂದು ಕರೆ ಇರುತ್ತೇನೆ. ಸುಮ್ಮನೆ ನನ್ನನ್ನು ಪದೇ ಪದೇ ತಲೆ ತಿನ್ನಬೇಡಿ ಎಂದಳು. ಕೂಡಲೇ ಕಲ್ಯಾಣಿಯ ತಂದೆ ಸ್ವಲ್ಪ ಕೋಪದಿಂದ ಕಲ್ಯಾಣಿ ನಿನಗೆ ತಲೆ ಏನಾದರೂ ಕೆಟ್ಟಿದೆಯ ಯಾಕೆ ಹೀಗೆ ಹುಚ್ಚು ಹುಚ್ಚಾಗಿ ಮಾತಾಡ್ತಾ ಇದ್ದೀಯ?. ಸಿದ್ದಾರ್ಥನ ಕುಟುಂಬದ ಹಾಗೆ ನಿನ್ನನ್ನು ಯಾರೂ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಅಂಥದ್ದಾರಲ್ಲಿ ನಿನಗೇನೂ ಆಗಿದೆ? ಸಿದ್ದಾರ್ಥ್ ನೀನಾದರೂ ಏನಾಯ್ತು ಎಂದು ಹೇಳಪ್ಪ ಎಂದರು. ಸಿದ್ದಾರ್ಥ್ ನಡೆದ ವಿಷಯವೆಲ್ಲ ತಿಳಿಸಿ ಆತ್ಮಹತ್ಯೆಯ ನಾಟಕ ಆಡುವಷ್ಟು ತಪ್ಪುನಾವೇನು ಮಾಡಿದ್ದೇವೋ ಗೊತ್ತಾಗುತ್ತಿಲ್ಲ. ಅವಳಿಗೆ ಇಷ್ಟ ಇಲ್ಲ ಎಂದ ಮೇಲೆ ಬೇಡ ಅವಳನ್ನು ಕರೆದುಕೊಂಡು ಹೋಗಿ. ನೋಡೋಣ ಸ್ವಲ್ಪ ದಿವಸ ಅವಳು ಮನಸು ಬದಲಾಯಿಸುತ್ತಾಳೇನೋ ಆಮೇಲೆ ಬರಲಿ ಎಂದ. ಕೂಡಲೇ ಕಲ್ಯಾಣಿ ಇನ್ಯಾವತ್ತೂ ನನ್ನ ಮನಸು ಬದಲಾಗುವುದಿಲ್ಲ. ನಾನು ಇನ್ನೆ೦ದೂಈ ಕಡೆ ಬರುವುದಿಲ್ಲ ಎಂದಳು.
ಹಾಗಿದ್ದರೆ ನಿನ್ನ ಮಾತಿನ ಅರ್ಥವೇನು ಎಂದು ಪ್ರಶ್ನಿಸಿದ ಸಿದ್ದಾರ್ಥ. ಕಲ್ಯಾಣಿ ಒಮ್ಮೆ ಎಲ್ಲರ ಮುಖವನ್ನು ನೋಡಿ ನನಗೆ ವಿಚ್ಚೇದನ ಬೇಕು ಎಂದಳು. ಆ ಮಾತು ಕೇಳುತ್ತಿದ್ದಂತೆ ಎಲ್ಲರಿಗೂ ಸಿಡಿಲು ಬಡಿದಂತಾಯಿತು. ಮದುವೆ ಆಗಿ ಇನ್ನೂ ಸರಿಯಾಗಿ ಒಂದು ತಿಂಗಳು ಕಳೆದಿಲ್ಲ. ಆಗಲೇ ವಿಚ್ಚೇದನ ಕೇಳುತ್ತಿದ್ದಾಳಲ್ಲ ಎಂದು ಎಲ್ಲರೂ ಆಶ್ಚರ್ಯಚಕಿತರಾಗಿ ಅವಳನ್ನೇ ನೋಡುತ್ತಿದ್ದರು. ಸಿದ್ದಾರ್ಥ ಏನೂ ಮಾತಾಡದೆ ಅವಳ ನಡುವಳಿಕೆ ಅರ್ಥವಾಗದೆ ನಿಂತಿದ್ದರೆ ಉಳಿದವರೆಲ್ಲರೂ ಅವಳನ್ನು ಕಾರಣ ಕೇಳುವುದರಲ್ಲಿ ಸಮಾಧಾನ ಮಾಡುವುದರಲ್ಲಿ ನಿರತರಾಗಿದ್ದರು. ಆದರೆ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಕಲ್ಯಾಣಿ ಇರಲಿಲ್ಲ. ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ಅರಿತ ಕಲ್ಯಾಣಿಯ ತಂದೆ ತಾಯಿ ಅವಳನ್ನು ಕರೆದುಕೊಂಡು ಮನೆಗೆ ಹೊರಟರು. ಇತ್ತ ಸಿದ್ದಾರ್ಥ ಯಾಕೆ ತನ್ನ ಬಾಳು ಹೀಗಾಯಿತು ಎಂದು ಚಿ೦ತಿಸುತ್ತಾ ಅಲ್ಲೇ ಕುಸಿದು ಕುಳಿತ.
ಒಂದೆರಡು ತಿಂಗಳುಗಳ ಕಾಲ ಪ್ರತಿದಿನ ಒಬ್ಬರೊಲ್ಲಬ್ಬರು ಸಿದ್ದಾರ್ಥ, ಆತನ ತಾಯಿ ಹಾಗೂ ತಂದೆ, ಕಲ್ಯಾಣಿಗೆ ಅವರ ಮನೆಗೆ ಕರೆ ಮಾಡಿ ಅವರ ಮನ ಒಲಿಸಲು ಪ್ರಯತ್ನಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಸಿದ್ದಾರ್ಥ ನಂತರ
ಅವಳು ಬಂದರೆ ಬರಲಿ ಇಲ್ಲದಿದ್ದರೆ ಇಲ್ಲ ಎಂದುಕೊಂಡು ತನ್ನ ಪಾಡಿಗೆ ತಾನು ಎಂದಿನಂತೆ ಬದುಕಲು ಶುರು ಮಾಡಿದ. ಕೆಲದಿನಗಳ ನಂತರ ವಿಚ್ಚೇದನದ ನೋಟಿಸ್ ಬಂದಿತು. ಇಬ್ಬರೂ ಲಾಯರ್ ಬಳಿ ಕೌನ್ಸೆಲಿಂಗ್ ಗೆ ಬಂದಾಗ ಇಬ್ಬರ ಸಮಸ್ಯೆಗಳನ್ನು
ವಿಚಾರಿಸಿದಾಗ ಸಿದ್ದಾರ್ಥ ನಡೆದ ವಿಷಯವನ್ನೆಲ್ಲ ತಿಳಿಸಿದ. ಲಾಯರ್ ಸಿದ್ದಾರ್ಥನಿಗೆ ಪರಿಚಯ ಇದ್ದಿದ್ದರಿಂದ ಕಲ್ಯಾಣಿ ಹೋದ ಮೇಲೆ ಅವಳು ಕೊಟ್ಟ ಕಾರಣ ಏನೆಂದು ವಿಚಾರಿಸಿದಾಗ ಅವಳ ಕೋಪಕ್ಕೆ ಸರಿಯಾದ ಕಾರಣವನ್ನು ಕೊಡಲಿಲ್ಲ. ಸುಮ್ಮನೆ ತನಗೆ ನಿನ್ನೊಡನೆ ಇರಲು ಇಷ್ಟವಿಲ್ಲವೆಂದು ತಿಳಿಸಿದರು. ಸಿದ್ದು ನಾನೊಂದು ವಿಷಯ ಹೇಳಲಾ? ಬಹುಶಃ ಕಲ್ಯಾಣಿ ಮುಂಚೆ ಬೇರೆ ಯಾರನ್ನೋ ಇಷ್ಟ ಪಟ್ಟಿರಬೇಕು. ಅವರ ಮನೆಯಲ್ಲಿ ಅದಕ್ಕೆ ವಿರೋಧಿಸಿ ನಿನ್ನೊಡನೆ ಮದುವೆ ಮಾಡಿದ್ದಾರೆ ಎನಿಸುತ್ತದೆ. ಅದಕ್ಕೆ ಅವಳು ಹೀಗೆ ಮಾಡುತ್ತಿದ್ದಾಳೆ ಎನಿಸುತ್ತದೆ. ಸಿದ್ದಾರ್ಥನಿಗೆ ಈ ವಿಷಯ ಕೇಳಿದ ಮೇಲೆ ಮನಸು ಚೂರು ಚೂರಾಯಿತು. ಇನ್ನು ಅವಳ ಬಗ್ಗೆ ಯೋಚಿಸುವುದು ವ್ಯರ್ಥ ಎಂದುಕೊಂಡು ತನ್ನ ಪಾಡಿಗೆ ತಾನಿರಲು ನಿರ್ಧರಿಸಿದ.
ವರ್ಷದ ನಂತರ ವಿಚ್ಚೇದನ ಪತ್ರಕ್ಕೆ ಸಹಿ ಹಾಕಿ ಕಳುಹಿಸಿಕೊಟ್ಟ. ಸಿದ್ದಾರ್ಥನ ಬಳಿ ಬಂದ ಅವರ ತಂದೆ ತಾಯಿ ಸಿದ್ದು ನಿನ್ನ ಮುಂದಿನ ನಿರ್ಧಾರ ಎಂದು ಕೇಳಿದರು. ಸಿದ್ದಾರ್ಥ ಒಮ್ಮೆ ಅವರ ಕಡೆ ನೋಡಿ ಒಂದು ದೀರ್ಘ ಉಸಿರನ್ನು ಎಳೆದುಕೊಂಡು ಅಪ್ಪ ನೋಡಿ ವಿಪರ್ಯಾಸ ಎಂದರೆ ಇದೆ ಎನಿಸುತ್ತದೆ. ನಾನು ಇಷ್ಟ ಪಟ್ಟ ಹುಡುಗಿ ನನಗೆ ಸಿಗಲೇ ಇಲ್ಲ. ಇನ್ನು ನೀವು ನೋಡಿ
ಇಷ್ಟ ಪಟ್ಟ ಹುಡುಗಿ ನನ್ನನ್ನು ಇಷ್ಟ ಪಡಲೇ ಇಲ್ಲ. ಬಹುಶಃ ನನಗೆ ಸಂಸಾರದ ಯೋಗ ಇಲ್ಲ ಎನಿಸುತ್ತದೆ ಎಂದು ವಿಷಾದದ ನಗೆ ನಕ್ಕು...ಆದ್ದರಿಂದ ಇನ್ನು ಮುಂದೆ ನಾನು ಒಂಟಿಯಾಗಿಯೇ ಇರಲು ನಿರ್ಧರಿಸಿದ್ದೇನೆ. ದಯವಿಟ್ಟು ನನ್ನನ್ನು ಈ ವಿಷಯದಲ್ಲಿ
ಬಲವಂತ ಮಾಡಬೇಡಿ ಎಂದು ತನ್ನ ಕೋಣೆಯ ಕಡೆ ನಡೆದ.
Comments
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by partha1059
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by makara
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by partha1059
ಉ: ಋಣಾನುಬಂಧ ಕೊನೆಯ ಭಾಗ
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by kamalap09
ಉ: ಋಣಾನುಬಂಧ ಕೊನೆಯ ಭಾಗ
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by chandana.rupa
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by Jayanth Ramachar
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by chandana.rupa
ಉ: ಋಣಾನುಬಂಧ ಕೊನೆಯ ಭಾಗ
In reply to ಉ: ಋಣಾನುಬಂಧ ಕೊನೆಯ ಭಾಗ by Jayanth Ramachar
ಉ: ಋಣಾನುಬಂಧ ಕೊನೆಯ ಭಾಗ