ಎಂದೂ ಮರೆಯಲಾಗದ ನನ್ನ ಮೆಚ್ಚಿನ ರಮೇಶ್ ಸರ್..ಗೆ ಈ ಪತ್ರ

ಎಂದೂ ಮರೆಯಲಾಗದ ನನ್ನ ಮೆಚ್ಚಿನ ರಮೇಶ್ ಸರ್..ಗೆ ಈ ಪತ್ರ

ಗುರುಗಳೇ
ನೀವು ಇವತ್ತು ನಮ್ಮನ್ನೆಲ್ಲಾ ಬಿಟ್ಟು ಹೋದ್ರಿ...

ದೈಹಿಕವಾಗಿ ಬಿಟ್ಟು ಹೋದ್ರು ನೀವು ಕಲಿಸಿ ಹೋಗಿರುವ ವಿದ್ಯೆ ಸದಾ ನಮ್ಮಲ್ಲಿ ನಿಮ್ಮ ನೆನಪಾಗಿ ನಮ್ಮ ಜೊತೆಯಲ್ಲೇ ಇರುತ್ತದೆ.
ನಿಜ..
ನಾನು ನಿಮ್ಮ ಕಾಲೇಜಿನಲ್ಲಿ ಓದಿ ನಿಮ್ಮ ಶಿಷ್ಯನಾಗಲಿಲ್ಲಾ.. ನೀವು ನನ್ನ ಗುರುಗಳ ಗುರುಗಳು...
ಆ ನನ್ನ ಗುರುಗಳ ಮೂಲಕ ಪರಿಚಯವಾಗಿ ,ಮುಂದೇ ಇದೇ ಪರಿಚಯ ನಿಮ್ಮನ್ನು ನನ್ನ ಗುರುಗಳನ್ನಾಗಿಸಿತು..
ನಾನು ಮತ್ತೀಕೆರೆಯಲ್ಲಿದ್ದ ಮನೆಯ ಪಕ್ಕದ ಬೀದಿಯಲ್ಲೇ ನೀವಿದ್ದರೂ ನನಗೆ ತಿಳಿದಿದ್ದು ಮೂರು ವರ್ಷಗಳ ನಂತರ ನನ್ನ ಗುರುಗಳು ನಿಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋದಾಗಲೇ..

ಅದಾದ ನಂತರ ಕೆಲವೇ ದಿನಗಳಲ್ಲಿ ನನಗೆ ಅಲ್ಲಿಂದ ಮನೆ ಬದಲಾಯಿಸುವ ಸಂದರ್ಭ ಬಂದರೂ ಸಹ ನಿಮ್ಮೊಂದಿಗಿನ ಒಡನಾಟ ಕಡಿಮೆಯಾಗಿರಲಿಲ್ಲಾ... ಕೆನ್ ಕಾಲೇಜಿನಲ್ಲಿ ನೀವು ಉಪನ್ಯಾಸಕ ನಾನು ಚೇತನ ಕಾಲೇಜಿನ ವಿಧ್ಯಾರ್ಥಿ.. ಆದರೂ ಸಹ ನಿಮ್ಮ ಮೆಚ್ಚಿನ ಶಿಷ್ಯನ ವಿದ್ಯಾರ್ಥಿಯಾದ ನನಗೆ ಕಲಿಸಿದಿರಿ..

ಲ್ಯಾಂಡ್ ಸ್ಕೇಪ್ ಮಾಡೋದನ್ನ ಕಲಿಯಲು ಲಾಲ್ ಬಾಗ್, ಕಬ್ಬನ್ ಪಾರ್ಕ್ ಹಾಗೂ ಹಳ್ಳಿಗಳನ್ನು ಮೂರು ವರ್ಷ ಅಲೆದರೂ ಕಲಿಯಲಾಗಿರಲಿಲ್ಲಾ ನನಗೆ... ಅದನ್ನ ನಿವು ಒಂದೇ ದಿನ್ದಲ್ಲಿ ಕಲಿಸಿದಿರಿ.. ಹೀಗೆ ಮಾಡು ಅಂತ ನೀವು ಕೈಹಿಡಿದು ಕಲಿಸಲಿಲ್ಲಾ.. ಆದ್ರೆ ಮಾಡುವುದು ಇದಿಷ್ಟೇ ಎಂದು ನನಗೆ ಲ್ಯಾಂಡ್ ಸ್ಕೇಪ್ ಮಾಡಿ ತೋರಿಸುವುದರ ಮೂಲಕ ನನಗೆ ಕಲಿಸಿ ಕೊಟ್ಟಿರಿ.. ಇನ್ನೂ ಅನೇಕ ವಿಶ್ಯಗಳಲ್ಲಿ ನನಗೆ ಮಾರ್ಗದರ್ಶಕರಾಗಿದ್ದಿರಿ.
ಅದೇ ಕಲಿಕೆ ಇಂದು ನನಗೆಷ್ಟೋ ಕಲಿಸಿದೆ.. ಆ ಕಲಿಕೆ ನಾನು ಬದುಕಿರುವವರೆಗೂ ನಿಮ್ಮ ನೆನಪಾಗಿ ನನ್ನೊಂದಿಗೆ ಸದಾ ಇರುತ್ತದೆ..
ನಿಮ್ಮ ಪ್ರೀತಿಯ
ನಿಮ್ಮ ವಿದ್ಯಾರ್ಥಿ

ನಮ್ಮ ರಮೇಶ್ಸರದೂ ಯಾವ್ದೂ ಚಿತ್ರ ನನ್ನ್ನಲ್ಲಿ ಇಲ್ಲವಾದ್ದರಿಂದ ಅವ್ರಿಂದಾಗಿ ನಾನು ಕಲಿತ ಲ್ಯಾಂಡ್ ಸ್ಕೇಪನ್ನು ಇಲ್ಲಿ ಹಾಕಿದ್ದೇನೆ.. ಇದರಲ್ಲಿ ನನ್ನ ರಮೇಶ್ ಸರ್ ಯಾವಾಗಲೂ ಇರ್ತಾರೆ.

Rating
No votes yet

Comments