ಎರಡು ಹುಚ್ಚು ನಗೆಹನಿಗಳು, ಮತ್ತೊಂದು ...
ಒಂದೆರಡು 'ಹುಚ್ಚು' ನಗೆಹನಿಗಳನ್ನು ಹನಿಗವನಗಳನ್ನಾಗಿಸಲು ಪ್ರಯತ್ನಿಸಿದ್ದೇನೆ :-)
'ಅಲ್ಪ' ಸಹಾಯ
***************************************
ಕರೆಯೊಂದು ಬಂತು, ಸಹಾಯವಾಣಿಗೆ
ನಾನೇನು ಮಾಡಲಿ, ನನ್ನ ಗೆಳೆಯ ಸತ್ತು ಹೋದ.
ಸಹಾಯವಾಣಿ ಹೇಳಿತು, ಖಾತ್ರಿ ಮಾಡಿಕೊಳ್ಳಿ ಮೊದಲಿಗೆ
ನಿಮ್ಮ ಗೆಳೆಯ ನಿಜಕ್ಕೂ ಸತ್ತಿರುವುದ.
ಅರೆ ಕ್ಷಣ ಮೌನ, ದೂರವಾಣಿಯ ಅತ್ತ ಕಡೆಗೆ
ನಂತರ ಕೇಳಿಬಂತು, ಕೋವಿ ಗುಂಡಿನ ಶಬ್ದ!
***************************************
'ಭಾವುಕ' ವ್ಯಸನಿ
***************************************
ಇಸ್ಪೀಟಾಡುತ್ತಿದ್ದೆ ಎಂದಿನಂತೆ, ಬಂತು ಒಂದು ಶವಯಾತ್ರೆ
ಒದ್ದೆಯಾದವೆನ್ನ ಕಣ್ಣುಗಳು, ಆಟದಲ್ಲಿ ಇಲ್ಲವಾಯ್ತು ಏಕಾಗ್ರತೆ.
ಗೆಳೆಯರೆಂದರು, ಪರರ ಕಷ್ಟಕ್ಕೂ ನೀನು ಸ್ಪಂದಿಸುವೆ; ನಿಜಕ್ಕೂ ನೀನು ಭಾವುಕ!
ನಾನಂದೆ, ನಾಲ್ವತ್ತು ವರ್ಷಗಳಿಂದ ಹೆಂಡತಿಯಾಗಿದ್ದಳು, ಬೆಳಿಗ್ಗೆ ತ್ಯಜಿಸಿದ್ದಾಳೆ ಇಹಲೋಕ.
***************************************
ವ್ಯತ್ಯಾಸ
***************************************
ಅಮೆರಿಕನ್ನರು ಒಯ್ದರು
ಶಾಯಿ ಪೆನ್ನನ್ನು ಆಕಾಶಕ್ಕೆ
ಅದು ಕಾರಿ ಖಾಲಿಯಾಯ್ತು
ಏನನ್ನೂ ಬರೆಯದೆ.
ಕೋಟ್ಯಾಂತರ ಖರ್ಚು ಆದರೇನು
ಕಾರದ ಪೆನ್ನು ಕಂಡುಹಿಡಿಯಲಿಕ್ಕೆ,
'ಬುದ್ಧಿವಂತ'ರು ಅವರು,
ತಯಾರಿಸಿಯೇ ಬಿಟ್ಟರು
ಅಂಥಾ ಪೆನ್ನನ್ನು ಕೊನೆಗೆ.
ಇತ್ತ, ನಾವೂ
ಹೋದೆವು ಆಕಾಶಕ್ಕೆ,
ಬರೆಯಲು ಇರಲಿಲ್ಲ ನಮಗೆ
ಕಾರದ ಶಾಯಿ ಪೆನ್ನು
ಆದರೆ ಇತ್ತು ನಮ್ಮೊಡನೆ
ಪಕ್ಕದಂಗಡಿಯ ಐವತ್ತು -
ಪೈಸೆಯ ಪೆನ್ಸಿಲ್ಲು!
***************************************
Comments
ಉ: ಎರಡು ಹುಚ್ಚು ನಗೆಹನಿಗಳು, ಮತ್ತೊಂದು ...
In reply to ಉ: ಎರಡು ಹುಚ್ಚು ನಗೆಹನಿಗಳು, ಮತ್ತೊಂದು ... by asuhegde
ಉ: ಎರಡು ಹುಚ್ಚು ನಗೆಹನಿಗಳು, ಮತ್ತೊಂದು ...
ಉ: ಎರಡು ಹುಚ್ಚು ನಗೆಹನಿಗಳು, ಮತ್ತೊಂದು ...
In reply to ಉ: ಎರಡು ಹುಚ್ಚು ನಗೆಹನಿಗಳು, ಮತ್ತೊಂದು ... by kavinagaraj
ಉ: ಎರಡು ಹುಚ್ಚು ನಗೆಹನಿಗಳು, ಮತ್ತೊಂದು ...