ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

೧.

ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು ,
ಶಾಲೆಗಳಲ್ಲಿ ಕಲಿಸುತ್ತಿಲ್ಲ .
ಕನ್ನಡದಲ್ಲಿನ ಸಂಸ್ಕೃತ ಶಬ್ದ ಉಚ್ಚರಿಸಲು ಕಷ್ಟ - ತೆಗೆದು ಹಾಕಿ , ಸುಲಭಗೊಳಿಸಿ ಎಂದೆಲ್ಲ ಅನ್ನುವ ಜನರು
ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು.
ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ.

ನನಗಂತೂ ಅವನ್ನು ಗುರುತಿಸಲು ಕಷ್ಟವಾಗುವದು . ೯೯.೯೯% ಜನಕ್ಕೂ ಹಾಗೆಯೇ ಇದ್ದೀತು.

೨.

ನಾನು ಇಂಗ್ಲೀಷು , ದೇವನಾಗರಿ ಲಿಪಿಯ ಬರಹಗಳಿಗಿಂತ ಕನ್ನಡ ಲಿಪಿಯ ಬರಹಗಳನ್ನು ಓದಲು ಇಷ್ಟಪಡುತ್ತೇನೆ.
ಹಾಗೆಯೇ ಪದ್ಯಕ್ಕಿಂತ ಗದ್ಯ .
ಹಳೆಗನ್ನಡಕ್ಕಿಂತ ಹೊಸ ಸರಳಗನ್ನಡ ಕ್ಕೆ ಪ್ರಾಶಸ್ತ್ಯ .
ಗೊತ್ತಿಲ್ಲದ ಅಕ್ಷರಗಳು , ಶಬ್ದಗಳು ನನ್ನನ್ನು ಓದಿನಿಂದ ದೂರ ಮಾಡುತ್ತವೆ.
ಮೊದಲೇ ಕನ್ನಡ ಬಳಕೆದಾರರು ಕಡಿಮೆಯಾಗುತ್ತಿದ್ದಾರೆ .
ಬಳಸದ ಭಾಷೆ ಸಾಯುವುದು ಖಂಡಿತ.
ಅದರಲ್ಲಿ ಹಳೆಯ ಅಕ್ಷರ , ಭಾರೀ ಪ್ರಮಾಣದಲ್ಲಿ ಹೊಸ ಅಕ್ಷರ ಜಾರಿಗೆ ತಂದು ಕನ್ನಡಕ್ಕೆ ಇನ್ನಷ್ಟು ಹಾನಿ ಆದೀತೇನೋ ?

೩.
ನಾನು ಜೇನುಗೂಡಿಗೆ ಕಲ್ಲು ಎಸೆಯುತ್ತಿದ್ದೇನೋ ಏನೋ ?

ಏನೇ ಇರಲಿ . ನಾನು ಪ್ರಚಲಿತ ಕನ್ನಡವನ್ನೆ ಬರೆವವನು , ಓದುವವನು.

Rating
No votes yet

Comments