ಏನಿರಬಹುದು ಕಾರಣ....?
ಇತ್ತೀಚಿಗೆ ನಾನು ಅತ್ತೇಯಿಲ್ಲ
ಏನಿರಬಹುದು ಕಾರಣ?
ಕಂಬನಿ ಒರೆಸುವ ಕೈಗಳಿಲ್ಲ
ಎಂದು ಹಿಂಜರಿಯಿತೇನೋ ಮನ!
ದುಃಖವಾದರೆ ಅತ್ತುಬಿಡಬೇಕು
ಅದಕೇಕೆ ಯಾರದೋ ಹಂಗು?
ಮನಸ್ಸೇ ಹೀಗೆ ಮಾತೇ ಕೇಳುವುದಿಲ್ಲ
ಸದಾ ಇಲ್ಲದರದ್ದೇ ಗುಂಗು.
ಕಣ್ಣೀರಿಗೂ ಗೊತ್ತಾಗಿರಬೇಕು
ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು,
ಸಮಯ ಸಾಧಿಸಿ ತುಳುಕಿಬಿಡುತ್ತದೆ
ಕೆಲವೊಮ್ಮೆ ಎಲ್ಲರ ಮುಂದೂ.
ಇವರಿಬ್ಬರ ನಡುವಿನ ಕಿತ್ತಾಟದಲ್ಲಿ
ಭಾವನೆಗಳಿಗೆ ನಿರಂತರ ಪೆಟ್ಟು,
ಇದಾವುದರ ಗೊಡವೆ ಬೇಡವೆಂದು
ಓಡಿ ಹೋಗಿದೆ ಬುದ್ಧಿ ಕೈಕೊಟ್ಟು.
ಹೇಗಾದರು ಮಾಡಬೇಕಿದೆ ಬೇಗ
ಇವರ ನಡುವೆ ಸಂಧಾನ,
ಒಂದಷ್ಟು ಹೊಂದಾಣಿಕೆಗಳಾದ ಮೇಲೆ
ಆಗಬಹುದೇನೋ ಸಮಸ್ಯೆ ಶಮನ.
Rating
Comments
ಉ: ಏನಿರಬಹುದು ಕಾರಣ....?
ಉ: ಏನಿರಬಹುದು ಕಾರಣ....?
ಉ: ಏನಿರಬಹುದು ಕಾರಣ....?