ಏನ್ರೀ ಸ್ವಲ್ಪ ನಗ್ತೀರಾ ಪ್ಲೀಸ್

ಏನ್ರೀ ಸ್ವಲ್ಪ ನಗ್ತೀರಾ ಪ್ಲೀಸ್

ಜಾನ್ ಮತ್ತು ಪೀಟರ್ ATM ಗೆ ಹೋದರು

ಜಾನ್ ಹಣ ಡ್ರಾ ಮಾಡುತ್ತಿದ್ದ

ಪೀಟರ್ ಹಿಂದಿನಿಂದ ಹಃ ಹಃ ಹಃ ನನಗೆ ನಿನ್ನ ಪಾಸ್ವರ್ಡ್ ಗೊತ್ತಾಯಿತು, ನಾಲ್ಕು ನಕ್ಷತ್ರ ತಾನೇ...

ಜಾನ್ ಜೋರಾಗಿ ನಕ್ಕು ಹಃ ಹಃ ಅಲ್ಲ, ಅದು ೧೨೫೮ ಎಂದ

__________________________________________________________________________________

ಗೆಲಿಲಿಯೋ ಓದಲು ಬುಡ್ಡಿ ದೀಪ ಉಪಯೋಗಿಸುತ್ತಿದ್ದನಂತೆ,

ಗ್ರಹಾಮ್ ಬೆಲ್ ಓದಲು ಮೇಣದ ಬತ್ತಿ ಉಪಯೋಗಿಸುತ್ತಿದ್ದನಂತೆ

ಶೇಕ್ಸಪಿಯರ್ ಓದಲು ಬೀದಿ ಬೀಪ ಬಳಸುತ್ತಿದ್ದನಂತೆ...

ಇವರೆಲ್ಲ ಬೆಳಗಿನ ಹೊತ್ತು ಓದದೆ ಏನು ಮಾಡುತ್ತಿದ್ದರು??

___________________________________________________________________________________

ಪೀಟರ್ ತನ್ನ ಹೆಂಡತಿಗೆ - ಪ್ರಿಯೆ ಮೊದಲು ನೀನು ಕೋಕ್ ಬಾಟಲಿನ ಹಾಗೆ ಸಣ್ಣಗೆ ಇದ್ದೆ ಆದರೆ ಈಗ

ಹೆಂಡತಿ - ಈಗಲೂ ಕೊಕ್ ಬಾಟಲಿನ ಹಾಗೆಯೇ ಇದ್ದೇನೆ, ಮುಂಚೆ ೩೦೦ ಎಂ.ಎಲ್ ಹಾಗಿದ್ದೆ, ಈಗ ೧.೫ ಲೀಟರ್ ನ ಹಾಗಿದ್ದೇನೆ ಅಷ್ಟೇ

___________________________________________________________________________________

ಪೀಟರ್ ಹಾಗೂ ಪೀಟರ್ ನ ಹೆಂಡತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು

ಲಾಯರ್ ಕೇಳಿದರು - ನೀವು ಬೇರೆ ಆದರೆ ಮಕ್ಕಳನ್ನು ಹೇಗೆ ಹಂಚಿಕೊಳ್ಳುತ್ತೀರಿ, ನಿಮಗೆ ಮೂರು ಜನ ಮಕ್ಕಳಿದ್ದಾರೆ

ಪೀಟರ್ - ಸರಿ ಬಿಡಿ, ನಾವು ಮುಂದಿನ ವರ್ಷ ಅರ್ಜಿ ಹಾಕುತ್ತೇವೆ...!!!

____________________________________________________________________________________

ಪೀಟರ್ ಒಂದು ರೈಲಿನ ಡ್ರೈವರ್, ಒಮ್ಮೆ ರೈಲನ್ನು ನಡೆಸುತ್ತಿರುವಾಗ ಇದ್ದಕ್ಕಿದ್ದಂತೆ ಹಳಿಯನ್ನು ಬಿಟ್ಟು ಬೇರೆಡೆ ಓಡಿಸಿ ಹಾಗೂ ಹೀಗೂ ಮತ್ತೆ ಹಳಿಮೇಲೆ ತಂದ

ಅಷ್ಟರಲ್ಲಿ ಪ್ರಯಾಣಿಕರು ಕಂಗಾಲಾಗಿ ಭಯಭೀತರಾಗಿದ್ದರು. ಸ್ಟೇಷನ್ ಬಂದ ತಕ್ಷಣ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ ಬಳಿ ದೂರು ಸಲ್ಲಿಸಿದರು.

ಪೀಟರ್ ಬಳಿ ಬಂದ ಸ್ಟೇಷನ್ ಮಾಸ್ಟರ್ ಪೀಟರ್ ಗೆ ಬಯ್ಯಲು ಶುರುಮಾಡಿ ನೀನು ಹಾಗೆ ಮಾಡಲು ಕಾರಣವೇನು ಎಂದರು

ಆಗ ಪೀಟರ್, ನಾನು ಸರಿಯಾಗೇ ನಡೆಸುತ್ತಿದ್ದೆ ಅಷ್ಟರಲ್ಲಿ ಹಳಿಯ ಮೇಲೆ ಒಬ್ಬಾತ ನಿಂತಿರುವುದು ಕಾಣಿಸಿತು ಎಂದು ನಿಲ್ಲಿಸಿದ

ಸ್ಟೇಷನ್ ಮಾಸ್ಟರ್ - ನಿನಗೆ ತಲೆ ಇಲ್ಲವ ಒಬ್ಬನ ಪ್ರಾಣ ಉಳಿಸಲು ಹೋಗಿ ಇಷ್ಟು ಜನರ ಪ್ರಾಣದ ಜೊತೆ ಆಟ ಆಡಿದೆಯ, ಸುಮ್ಮನೆ ಅವನ ಮೇಲೆ ಹತ್ತಿಸಬೇಕಿತ್ತು

ಪೀಟರ್ - ನಾನು ಅದೇ ಆಲೋಚನೆಯಲ್ಲೇ ಮುಂದೆ ಬರುತ್ತಿದ್ದೆ, ಆದರೆ ರೈಲು ಹತ್ತಿರ ಬರುತ್ತಿದ್ದಂತೆ ಆತ ಓಡಲು ಶುರು ಮಾಡಿದ.

_____________________________________________________________________________________

ಪೀಟರ್ ಒಮ್ಮೆ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಕುಳಿತಿದ್ದ. ಪ್ರಶ್ನೆ ಪತ್ರಿಕೆಯಲ್ಲಿ ಸರಿ/ತಪ್ಪು ಉತ್ತರಿಸಿ ಎಂದಿತ್ತು

ಪೀಟರ್ ಗೆ ಉತ್ತರಗಳು ತಿಳಿದಿರಲಿಲ್ಲ. ಸ್ವಲ್ಪ ಹೊತ್ತು ಯೋಚಿಸಿ ತನ್ನ ಜೇಬಿನಿಂದ ಒಂದು ನಾಣ್ಯವನ್ನು ತೆಗೆದು ರಾಜ/ರಾಣಿ ಹಾಕುತ್ತ ಉತ್ತರಿಸಿದ

ರಾಜ ಬಿದ್ದರೆ ಸರಿ ಎಂದು ರಾಣಿ ಬಿದ್ದರೆ ತಪ್ಪು ಎಂದು ಉತ್ತರಿಸುತ್ತಿದ್ದ. ಮಿಕ್ಕವರು ಪರದಾಡುತ್ತಿದ್ದಾರೆ ಇವನು ಮಾತ್ರ ಆರಾಮಾಗಿ ಬರೆಯುತ್ತಿದ್ದ

ಇನ್ನೇನು ಸಮಯ ಮುಗಿಯಬೇಕು ಎನ್ನುವಷ್ಟರಲ್ಲಿ ಪೀಟರ್ ಗಾಭರಿಯಿಂದ ಒದ್ದಾಡುತ್ತಿದ್ದ. ಅವನ ಬಳಿ ಬಂದ ಮಾಸ್ಟರ್ ಯಾಕೆ ಏನಾಯಿತು ಎಂದ

ಪೀಟರ್, ಸರ್ ಎಲ್ಲಾ ಉತ್ತರಗಳನ್ನು ಅರ್ಧ ಗಂಟೆಯಲ್ಲೇ ಮುಗಿಸಿಬಿಟ್ಟೆ. ಇನ್ನೂ ಸಮಯವಿತ್ತಲ್ಲ ಎಂದು ಮರುಪರೀಕ್ಷಿಸುವಾಗ ಬೇರೆ ಬೇರೆ ಉತ್ತರಗಳು ಬರುತ್ತಿದೆ ಎಂದ..

________________________________________________________________________________________

 


ಪೀಟರ್ ಡಾಕ್ಟರ ಬಳಿ ಹೋಗಿ ಮನೆಗೆ ಬಂದು ಸೀದಾ ಅಡಿಗೆ ಮನೆಗೆ ಹೋಗಿ ಸಕ್ಕರೆ ಡಬ್ಬದ ಮುಚ್ಚಳ ತೆಗೆದು ಮುಚ್ಚಿಟ್ಟು ಹೊರಬಂದ

ಮತ್ತೆ ಅಡಿಗೆ ಮನೆಗೆ ಹೋಗಿ ಸಕ್ಕರೆ ಡಬ್ಬದ ಮುಚ್ಚಳ ತೆಗೆದು ಮತ್ತೆ ಹಾಕಿ ಆಚೆ ಬಂದ

ಸುಮಾರು ಸಾರಿ ಹೀಗೆ ಮಾಡಿದ್ದನ್ನು ಗಮನಿಸಿದ ಪೀಟರ್ ನ ಹೆಂಡತಿ ಕೇಳಿದಳು ಏನು ಮಾಡುತ್ತಿದ್ದೀರ ಆಗಿನಿಂದ?

ಪೀಟರ್ ಉತ್ತರಿಸಿದ. ಡಾಕ್ಟರ ಹೇಳಿದರೆ ಅವಾಗವಾಗ ಶುಗರ್ ಲೆವೆಲ್ ಚೆಕ್ ಮಾಡಿ ಎಂದು.

_____________________________________________________________________________________________

ಒಮ್ಮೆ ಪೀಟರ್, ಜಾನ್ ಹಾಗೂ ರಾಬರ್ಟ್ ಪೋಲಿಸ್ ಟ್ರೈನಿಂಗ್ ಗೆ ಹೋದರು. ಅಲ್ಲಿ ಇವರನ್ನು ಪರೀಕ್ಷಿಸಲು ಒಬ್ಬ ಅಧಿಕಾರಿ ಬಂದು ಮೊದಲು ರಾಬರ್ಟ್ ನನ್ನು ಕರೆದರೂ

ರಾಬರ್ಟ್ ನ ಮುಂದೆ ಒಂದು ಫೋಟೋ ೫ ಸೆಕೆಂಡ್ ಗಳ ಕಾಲ ತೋರಿಸಿ ನಂತರ ಕೇಳಿದರು. ಈಗ ಹೇಳಿ ಈ ಫೋಟೋದಲ್ಲಿರುವ ವ್ಯಕ್ತಿಯನ್ನು ಹೇಗೆ ಪತ್ತೆ ಹಚ್ಚುವಿರ ಎಂದು

ರಾಬರ್ಟ್ : ಅದು ಬಹಳ ಸುಲಭ. ಆತನಿಗೆ ಒಂದೇ ಕಣ್ಣಿರುವುದು. ಸುಲಭವಾಗಿ ಹಿಡಿಯಬಹುದು.

ಅಧಿಕಾರಿ : ರೀ ಅದು ಅವನ ಸೈಡ್ ಫೋಟೋ ಅದರಲ್ಲಿ ಒಂದೇ ಕಣ್ಣು ಕಾಣಿಸುವುದು, ನೀವು ಫೈಲ್ ಎಂದು ಕಳುಹಿಸಿದ. ನಂತರ ಜಾನ್ ಬಂದ ಆತನಿಗೂ ಅದೇ ಫೋಟೋ ತೋರಿಸಿ ಅದೇ ಪ್ರಶ್ನೆ ಕೇಳಿದ

ಜಾನ್ : ಸ್ವಲ್ಪ ಹೊತ್ತು ಫೋಟೋ ನೋಡಿ ಅವನಿಗೆ ಒಂದೇ ಕಿವಿ ಇರುವುದು ಅವನನ್ನು ಹಿಡಿಯುವುದು ಸುಲಭ ಎಂದ. ರೋಸಿ ಹೋದ ಅಧಿಕಾರಿ ಅವನನ್ನು ಆಚೆ ಕಳಿಸಿ ಪೀಟರ್ ನನ್ನು ಕರೆದ

ಪೀಟರ್ : ಮೊದಲಿಬ್ಬರಿಗಿಂತ ಹೆಚ್ಚು ಹೊತ್ತು ತೆಗೆದುಕೊಂಡು ಆ ಫೋಟೋದಲ್ಲಿರುವ ವ್ಯಕ್ತಿ ಕಾಂಟಾಕ್ಟ್ ಲೆನ್ಸ್ ಹಾಕಿದಾನೆ ಅದರಿಂದ ಅವನನ್ನು ಹಿಡಿಯಬಹುದು ಎಂದ.

ಅಧಿಕಾರಿಗೆ ಆಶ್ಚರ್ಯ ಕುತೂಹಲ ಒಟ್ಟಿಗೆ ಆಗಿ ಪೀಟರ್ ನನ್ನು ಅಲ್ಲೇ ಕೂರಲು ಹೇಳಿ ಒಳಗೆ ಹೋಗಿ ಆ ಫೋಟೋ ವ್ಯಕ್ತಿಯ ಫೈಲ್ ತೆಗೆದು ನೋಡಿದ. ಅದರಲ್ಲಿ ಆಟ ಕಾಂಟಾಕ್ಟ್ ಲೆನ್ಸ್ ಬಳಸುತ್ತಿದ್ದ

ಎಂದು ನೋಡಿ ಆಶ್ಚರ್ಯವಾಗಿ ಆಚೆ ಬಂದು ಪೀಟರ್ ನನ್ನು ಕೇಳಿದ ನಿನಗೆ ಹೇಗೆ ಗೊತ್ತಾಯಿತು ಎಂದು.

ಪೀಟರ್ : ಸಮಾಧಾನವಾಗಿ, ಅದೇನು ಮಹಾ ಆತನಿಗೆ ಇರುವುದು ಒಂದೇ ಕಿವಿ, ಒಂದೇ ಕಣ್ಣು, ಅದು ಹೇಗೆ ಆತ ಸಾಮಾನ್ಯ ಕನ್ನಡಕ ಹಾಕುತ್ತಾನೆ ಅದರಿಂದ ಕಾಂಟಾಕ್ಟ್ ಲೆನ್ಸ್ ಹಾಕಬಹುದೆಂದು

ಊಹೆ ಮಾಡಿದೆ ಅಷ್ಟೇ ಎಂದ...

___________________________________________________________________________________________________-

 

Rating
No votes yet

Comments