ಒಡೆಯರು ಸಿಕ್ಕಿದರು!

ಒಡೆಯರು ಸಿಕ್ಕಿದರು!

ಒಡೆಯರು ಬಂಗಾರಪ್ಪ ಇರಬಹುದೇ?


-just ಈಗ ಅವರಿರುವ ಪಕ್ಷವನ್ನು ನಾನಲ್ಲ, ಪರಮೇಶ್ವರನಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅದಲ್ಲದೇ ಅವರಿರುವುದು ಸೊರಬದಲ್ಲಿ, ನಾನು ಹೋಗುತ್ತಿರುವುದು ಸಾಗರ ಕಡೆಗೆ...ಸಾಗರದ MLA? ಛೇ..ಕಾಗೆಗೆ ಅಷ್ಟೂ ಬುದ್ಧಿಯಿಲ್ಲವಾ?


"ತಾವರೆಕೊಪ್ಪ ಲಯನ್ ಸಫಾರಿ" ಬಂದಾಗ ನಿಲ್ಲಲು ಹೇಳಿತು ಕಾಗೆ. ಬೈಕ್ ನಿಲ್ಲಿಸಿ ಒಳಹೋಗುತ್ತಿರುವಾಗ ಸಿಕ್ಸ್ತ್ ಸೆನ್ಸ್ ಜಾಗ್ರತೆ ಹೇಳಿತು. "ಏಯ್ ಕಾಗೆ, ಕಾಗಕ್ಕ ಗುಬ್ಬಕ್ಕ ಕತೆ ಓದಿ ಓದಿ ಬೆಳೆದವನು ನಾನು. ನಿನ್ನ ಕಂತ್ರಿ ಬುದ್ಧಿ ಇಲ್ಲೂ ತೋರಿಸಿದೆಯಾ? ಸಿಂಹಕ್ಕೆ ನನ್ನನ್ನು ಬಲಿ ಕೊಡಬೇಕೆಂದಿದ್ದೀಯಾ? ನೀನು ಕರೆದ ಕೂಡಲೇ ಹೊರಟು ಬಂದೆ..ಯಾಕೆ ಗೊತ್ತಾ? ಪುಣ್ಯಕೋಟಿಯ ನಾಡಿನವರು ನಾವು. ಪ್ರಾಣಿದಯೆ ನಮ್ಮ ನರನಾಡಿಗಳಲ್ಲಿ ಉಕ್ಕಿ ಉಕ್ಕಿ ಹರಿಯುತ್ತಿರುತ್ತದೆ..." "stop, stop.(ಕಾಗೆಗೆ ಇಂಗ್ಲೀಷೂ ಬರುತ್ತದೆ!) ನಿಮ್ಮ ದಯೆನೇ ಪ್ರಾಣಿಗಳಿಗೆ ಹಿಂಸೆಯಾಗಿರುವುದು. ಸಿಂಹಕ್ಕೆ ಬಲಿಕೊಡಲು ನಿನ್ನನ್ನು ಬೆಂಗಳೂರಿಂದ ಕರೆತರಬೇಕಾ? ಇಲ್ಲಿ ಯಾವ ಬಕ್ರಾಗಳು ಸಿಗುವುದಿಲ್ಲವಾ? ಅಲ್ನೋಡು..ನಮ್ಮ ಒಡೆಯರು.."ವನರಾಜ ಸಿಂಹ"- ನೆಟ್ ಸವ್ವಿ! ಯಾವಾಗಲೂ ನೆಟ್‌ನಲ್ಲಿ ಸರ್ಚ್ ಮಾಡುತ್ತಾ ಇರುತ್ತಾರೆ! ಹಾಗೆ ಸರ್ಚ್ ಮಾಡುತ್ತಿರುವಾಗ ಪ್ರಾಣಿ ಪ್ರಿಯರು ಸಂಪದದಲ್ಲಿ ಅಧಿಕ ಇದ್ದಾರೆ ಎಂದು ಗೊತ್ತಾಯಿತು. ಮೊದಲಿಗೆ ಹರ್ಷವರ್ಧನರನ್ನ ಕಾಂಟಾಕ್ಟ್ ಮಾಡಲು ಪ್ರಯತ್ನಿಸಿದೆವು. ಸಿಗಲಿಲ್ಲ. ಆ ಸುರೇಶ್‌ಗೆ ಶನಿವಾರ ಈಮೈಲ್ ಮಾಡಿದೆವು. ಶನಿವಾರ, ಸಂಡೆ ಈಮೈಲ್ ಸಹ ನೋಡುವುದಿಲ್ಲ ಎಂದು ಈಮೈಲ್ ಮಾಡಿ ತಿಳಿಸಿದರು.ನೆಟ್ ಬೇಡ ನೇರ ಭೇಟಿಯಾಗಿ ಕರಕೊಂಡು ಬಾ ಎಂದು ಕೆಲ ಅಡ್ರಸ್ ನನ್ನ ಬಳಿ ಕೊಟ್ಟರು. ನೆಟ್ಟಗೆ ಗೋಪೀನಾಥರ ಮನೆಗೆ ಹೋದರೆ,ಅವರು ಒಂದಲ್ಲ ಒಂದು ಗನ್ ಹಿಡಕೊಂಡಿರುತ್ತಿದ್ದರು.(ಪಾಪ, ಕಾಗೆಗೇನು ಗೊತ್ತು. ಗೋಪೀನಾಥರ ಮನೆಯಲ್ಲಿ ಕಾಫಿಕಪ್‌ನಿಂದ ಹಿಡಿದು ಪೆನ್‌ವರೆಗೆ ಎಲ್ಲಾ ಗನ್ ಆಕಾರದಲ್ಲೇ ಇರುವುದು ಎಂದು)


ಹೋಮದ ಹೊಗೆಯಲ್ಲಿ ನಾವಡರನ್ನು ಹುಡುಕುವುದೇ ಸಾಧ್ಯವಾಗಲಿಲ್ಲ..


ನಮ್ಮ ಕಾಡಿನೊಳಗಾದರೂ ನುಗ್ಗಬಹುದು.ಶರ್ಮಾರ ತೋಟದೊಳಗೆ ಸಾಧ್ಯವೇ ಇಲ್ಲಾ. ಜತೆಗೆ ಜೇನುನೊಣಗಳ ಕಾಟ.


ಕವಿನಾಗರಾಜರು ಆರಾಮ ಸಿಕ್ಕಿದರು. ನಮ್ಮ ಅಳಲು ಕೇಳಿಸಿಕೊಂಡರೂ ಸಹ. ನಂತರ ಅವರು ಜೈಲಲ್ಲಿ ಇದ್ದ ಕತೆ ಹೇಳಿದರು. ಅವರು ಪಟ್ಟ ಕಷ್ಟದ ಎದುರು ನಮ್ಮದು ಏನೂ ಅಲ್ಲ. ಪಾಪ ಅವರು ರೆಸ್ಟ್ ತೆಗೆದುಕೊಳ್ಳಲಿ ಎಂದು ಹಿಂದೆ ಬಂದೆವು. ಕೋಮಲ್ ಕರೆದ ಕೂಡಲೇ


ಹೊರಟು ಬಂದರು.ಅರ್ಧದಾರಿಯಲ್ಲಿ ಗೌಡ್ರ ಟೀಮು ಬಂದು ಅವರನ್ನ ಎಳಕೊಂಡು ಹೋದರು.


ದುಬೈಮಂಜು ಮತ್ತವರ ಫ್ರೆಂಡ್ಸ್ ಜಯಂತ್,ಪ್ರಸನ್ನ,ಕಾಮತ್..ಎಲ್ಲರೂ ಒಟ್ಟಿಗೆ ಸಿಕ್ಕಿದರು. "ಸ್ಸಾರೀ..ಸದ್ಯಕ್ಕೆ ನಾವು ದುಬೈ ಟೂರ್ ತಯಾರಿಯಲ್ಲಿ ಬಿಝಿ ಇದ್ದೇವೆ. ಹಿಂದೆ ಬಂದ ಕೂಡಲೇ ನಿಮ್ಮ ಸಮಸ್ಯೆ ಬಗೆಹರಿಸುವೆವು." ಅಂದರು. ಜತೆಗೆ ಅವರು ನಿಮ್ಮ ಅಡ್ರಸ್ ಕೊಟ್ಟು ಪ್ರಯತ್ನಿಸಲು ಹೇಳಿದರು. "ನನ್ನ ಹೆಸರು ಅವರು ಸೂಚಿಸಿದ್ದಾ? ನೆಟ್‌ನಲ್ಲಿ ನೋಡಿದಲ್ವಾ?" ಅಂದೆ. ಕಾಗೆ ತನ್ನರೆಕ್ಕೆಯಡಿಯಲ್ಲಿದ್ದ ಲಿಸ್ಟನ್ನು ತೆಗೆದು ನೋಡಿ "ಊಹೂಂ, ನಿಮ್ಮ ಹೆಸರು ಇಲ್ಲ.ಆದರೆ ದುಬೈ ಮಂಜು ಇನ್ನೂ ಒಂದು ಮಾತು ಹೇಳಿದರು " ಆ ಜನ ನಯಾಪೈಸೆ ಬಿಚ್ಚುವುದಿಲ್ಲ. ದುಬೈಗೆ ಬರುತ್ತೇನೆ ಎಂದು ಹಠಮಾಡುತ್ತಿದ್ದಾರೆ. ಕಾಗೆ ಜತೆ ಕಳುಹಿಸಿದರೆ ನಮಗೊಂದು ಕಾಟ ತಪ್ಪಿದಂತೆ.."


ಹೌದಾಆ..ಮಂಜೂ....


ಗಣೇಶ.


(ಮುಂದಿನ ಭಾಗದಲ್ಲಿ -ವನರಾಜನೊಂದಿಗೆ ಮಾತುಕತೆ)


ಹಿಂದಿನ ಕೊಂಡಿ- http://sampada.net/blog/%E0%B2%97%E0%B2%A3%E0%B3%87%E0%B2%B6/26/10/2010/28689#comment-126250

Rating
No votes yet

Comments