ಒದ್ದಾಡುವ ನೆನಪುಗಳು..
ನೀನಲ್ಲಿ ಹಾಯಾಗಿ
ಮಗ್ಗಲು ಬದಲಿಸಿದರೆ
ನನ್ನೊಳಗಿನ ಜೀವ
ಮುದದಿ ಮಿಸುಕಾಡುವುದು…
ಮಿದು ಪಾದಕ್ಕೊಂದು
ಕಟು ಕಲ್ಲು ಚುಚ್ಚಿದರೆ
ನನ್ನೀ ಕಾಲುಗಳಲ್ಲಿ
ರಕುತ ಜಿನುಗುವುದು…
ಕಣ್ಣ ಹನಿಯುಕ್ಕಿ
ಉದುರುವ ಧೈರ್ಯ ತೋರಿದರೆ
ನನ್ನೆದೆಯ ನೀಲಿ ಹೂವು
ಧಗಧಗಿಸುವುದು…
ಅಂತೆಯೇ ನಿನಗೆ
ಅವನ ಮೇಲೆ ಪ್ರೀತಿಯುಕ್ಕಿದಾಗ
ಮನದ ಮೂಲೆಯಲ್ಲಿ ನನ್ನ ನೆನಪಿನ ಅಲೆಯೊಂದು
ನಿನ್ನ ಆತ್ಮಸಾಕ್ಷಿಯಂತೆ
ವಿಲ ವಿಲ ಒದ್ದಾಡುವುದು…
Rating
Comments
ಉ: ಒದ್ದಾಡುವ ನೆನಪುಗಳು..
In reply to ಉ: ಒದ್ದಾಡುವ ನೆನಪುಗಳು.. by pallavi.dharwad
ಉ: ಒದ್ದಾಡುವ ನೆನಪುಗಳು..