ಒಮ್ಮೆ ನಕ್ಕು ಬಿಡಿ _ ೭
ಬೀಚಿಯವರ ಕಛೇರಿಗೆ ಪ್ರಖ್ಯಾತ ಭವಿಷ್ಯಕಾರ ಒಮ್ಮೆ ಬಂದಿದ್ದರು , ಸ್ನೇಹಿತರು ಹೇಳಿದರು ನೀವು ಏನನ್ನೆ ನೆನೆಯಿರಿ ಅದು ಎಷ್ಟು ದಿನದಲ್ಲಿ ನೆರವೇರುತ್ತೆ ಅಂತ ಅವರು ಹೇಳ್ತಾರೆ. ನಕ್ಕ ಬೀಚಿ ನಾನು ಏನನ್ನೊ ನೆನೆದು ಅದನ್ನು ಕಾಗದದ ಮೇಲೆ ಬರೆಯುತ್ತೇನೆ ಅದು ಎಷ್ಟು ದಿನದಲ್ಲಿ ಆಗುತ್ತೆ ಅಂತ ಹೇಳ್ತೀರ , ಆ ಭವಿಷ್ಯಕಾರ ಒಪ್ಪಿದರು. ಸರಿ ಬೀಚಿ ಕಾಗದದಲ್ಲಿ ತಮ್ಮ ಕೋರಿಕೆ ಬರೆದು ಅವರ ಕೈಗೆ ಕೊಟ್ಟರು. ಆತ ಕಣ್ಣುಮುಚ್ಚಿ ಲೆಕ್ಕಹಾಕಿ ನಿಮ್ಮ ಕೋರಿಕೆ ಪ್ರಶ್ನೆಯ ಕಾಲವನ್ನು ಅನುಸರಿಸಿ ಇಂದಿನಿಂದ ಹತ್ತು ದಿನದಲ್ಲಿ ಕೈಗೂಡುತ್ತೆ ಎಂದರು. ನಂತರ ಆ ಭವಿಷ್ಯಕಾರ ಬೀಚಿ ಕೊಟ್ಟ ಕಾಗದ ತೆಗೆದು ನೋಡಿದರೆ ಅದರಲ್ಲಿ ಬರೆದಿತ್ತು
"ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟ ಬೆಂಗಳೂರಿಗೆ ಎಂದು ಬರುತ್ತೆ?"
(ಕೇಳಿದ್ದು)
Rating
Comments
ಉ: ಒಮ್ಮೆ ನಕ್ಕು ಬಿಡಿ _ ೭
ಉ: ಒಮ್ಮೆ ನಕ್ಕು ಬಿಡಿ _ ೭
ಉ: ಒಮ್ಮೆ ನಕ್ಕು ಬಿಡಿ _ ೭