ಓದದ ಪುಸ್ತಕಗಳು?

ಓದದ ಪುಸ್ತಕಗಳು?

ಓದಿದ ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಬರೆಯುವರು. (ಬೇಡ(ವಾ)ದ ಪುಸ್ತಕಗಳ ಬಗ್ಗೆ ನಾನೂ ಬರೆದಿದ್ದೆ) ಆದರೆ ಓದದ ಪುಸ್ತಕಗಳು ? ಅವುಗಳ ಬಗ್ಗೆ ಮುಂದಿನ ವಾರದ 'ಸುಧಾ'ದಲ್ಲಿ ಬರಲಿದೆ. ಏನಿರಬಹುದು? ಕಾದು ನೋಡೋಣ!

ಈ ವಾರದ ಸುಧಾದಲ್ಲಿ ವೆಲ್ಲೂರು ಆಸ್ಪತ್ರೆಯ ಸ್ಥಾಪಕರ ಹೃದಯಸ್ಪರ್ಶಿ ಕಥೆ ಧಾರಾವಾಹಿ ರೂಪದಲ್ಲಿ ಆರಂಭವಾಗಿದೆ . ಮತ್ತು ಡೇನಿಯಲ್ ಪರ್ಲ್ (ನೆನಪಿರಬಹುದು. ಪಾಕಿಸ್ತಾನದಲ್ಲಿ ಅಪಹರಣಕ್ಕೊಳಗಾಗಿ ಕೊಲ್ಲಲ್ಪಟ್ಟ ಪತ್ರಕರ್ತ)ಕುರಿತಾದ ಪುಸ್ತಕ- a mighty heart ಕುರಿತಾದ ಲೇಖನವೂ ಚೆನ್ನಾಗಿದೆ. ಇವನ್ನು ಓದಿ.

Rating
No votes yet