ಕನ್ನಡದ ಎಫ್.ಎಮ್ ಗಳಲ್ಲೇಕೆ ಹಿ೦ದಿ ಜಾಹಿರಾತು?
ಇವತ್ತಿನ ದಿನ ಕನ್ನಡದ ಎಫ್.ಎಂ. ರೇಡಿಯೋಗಳಲ್ಲಿ ಕೆಲವು ಕ೦ಪನಿಗಳ ಹಿಂದಿ ಜಾಹೀರಾತುಗಳು ಬರುತ್ತಿರೋದು ನೋಡಿದರೆ ಆ ಕಂಪನಿಗಳಿಗೆ ಜಾಹೀರಾತು ಅಂದ್ರೆ ಏನೂಂತಾನೇ ಮರೆತುಹೋಗಿದೆಯೇನೋ ಅನ್ನಿಸುತ್ತೆ! ಆದ್ದರಿಂದ ನೆನಪಿಸಿ ಕೊಡೋಣ:
* ಜಾಹೀರಾತು ಯಾರಿಗೋಸ್ಕರ ಮಾಡಿದೆಯೋ ಅವರಿಗೆ ಅದು ಅರ್ಥವಾಗಬೇಕು
* ಜಾಹೀರಾತು ಬಿತ್ತರವಾಗುವ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಮಾರುಕಟ್ಟೆಯನ್ನು ತಲುಪಬೇಕು
ಹೀಗಿರುವಾಗ 100% ಕನ್ನಡ ಹಾಡುಗಳನ್ನು ಹಾಕ್ತಿರೋ ಎಫ್.ಎಂ.ರೇಡಿಯೋಗಳಲ್ಲಿ ನಡುನಡುವೆ ಹಿಂದಿ ಜಾಹೀರಾತುಗಳ್ನ ಹಾಕೋದು ಮೂರ್ಖತನವಲ್ದೆ ಇನ್ನೇನು? ಅರ್ಥವಾಗದ ಭಾಷೆಯಲ್ಲಿ ಸಕ್ಕತ್ ತಲೆ ಉಪಯೋಗಿಸಿ ಏನೇನೋ ಹೇಳಿದರೆ ಯಾವ ಮಣ್ಣು ಉಪಯೋಗ? ಜಾಹೀರಾತು ಕನ್ನಡದಲ್ಲಿ ಇದ್ರೇನೇ ಹೆಚ್ಚು ಪರಿಣಾಮಕಾರಿ. ಜಾಹೀರಾತುಗಳ್ನ ಕನ್ನಡದಲ್ಲೇ ಮಾಡೋದ್ರಿಂದ ಬರೀ ಲಾಭಾನೇ ಇರೋದು. ನಷ್ಟ ಅನ್ನೋದಿಲ್ಲ. ಏನು ಲಾಭ? ಉದಾಹರಣೆಗೆ ಐಡಿಬಿಐ ಬ್ಯಾ೦ಕು ಮತ್ತು ಎಚ್.ಡಿ.ಎಫ್.ಸಿ ಇನ್ಶುರೆನ್ಸ ತಮ್ಮ ಹಿ೦ದಿ ಜಾಹಿರಾತನ್ನು ಕನ್ನಡ ರೇಡಿಯೋಗಳಿಗೆ ಕೊಡ್ತಾರೆ. ಅದೇ ಜಾಹಿರಾತನ್ನು ಕನ್ನಡದಲ್ಲಿ ಕೊಟ್ರೆ ಕರ್ನಾಟಕದಲ್ಲಿ ಎಲ್ಲರಿಗೂ ಅವರ ಜಾಹಿರಾತು ಅರ್ಥವಾಗುತ್ತೆ ಮತ್ತು ಹೆಚ್ಚು ಗ್ರಾಹಕರನ್ನು ಮುಟ್ಟಬಹುದು, ಜೊತೆಗೆ ಗ್ರಾಹಕರಿಗೆ ಆದಷ್ಟೂ ಪರಿಣಾಮಕಾರಿಯಾಗಿ ತಮ್ಮ ಸೇವೆಯನ್ನು ಮಾರಾಟ ಮಾಡಬಹುದು ಲಾಭಗಳಿಸಬಹುದು. ಇದೇ ತಾನೆ ಬೇಕಾಗಿರೋದು?
ಕನ್ನಡಿಗರ ತಟ್ಟೇಲಿ ಹಿಂದಿ ಹಾಡುಗಳನ್ನು ಬಡಿಸೋದು ಪೆದ್ದತನ ಅಂತ ಎಫ್.ಎಂ. ವಾಹಿನಿಗಳಿಗೆ ಬಹಳ ಹಿ೦ದೆನೇ ಅರ್ಥವಾಗಿದೆ ಮತ್ತು ಕನ್ನಡದಿ೦ದನೇ ನಮ್ಮ ಲಾಭ ಎ೦ದೂ ಮನದಟ್ಟಾಗಿದೆ. ಈಗ ಈ ಜಾಹೀರಾತು ಹಾಕಿಸೋ ಬ್ಯಾ೦ಕು/ಕಂಪನಿಗಳಿಗೆ ಅರ್ಥಮಾಡಿಸಬೇಕಾಗಿದೆ. ಗೆಳೆಯರೇ ರೇಡಿಯೋದಲ್ಲಿ ಹಿ೦ದಿ ಜಾಹಿರಾತನ್ನ ಮಾತ್ರ ಕೊಡೋದು ಅನ್ನೊ ಮನಸ್ಥಿತಿಲಿರೋ ಹಲವಾರು ಸ೦ಸ್ಥೆಗಳು ಕರ್ನಾಟಕದಲ್ಲಿ ಇವೆ. ಅವುಗಳಲ್ಲಿ ಈ ಕೆಳಗಿನ ಪ್ರಮುಖ ಬ್ಯಾ೦ಕುಗಳಿ೦ದ ಪ್ರಾರ೦ಭಿಸೋಣ. ಇವರಿಗೆ "ನೀವು ರೇಡಿಯೋಗಳಲ್ಲಿ ನಿಮ್ಮ ಹಿ೦ದಿ ಜಾಹಿರಾತು ಮೂಲಕ ಅದೇನು ಹೇಳ್ತೀರೋ ತಿಳೀತಾ ಇಲ್ಲಾ ಕನ್ನಡದಲ್ಲಿ ಹಾಕಿ ವ್ಯಾಪಾರ ಬೆಳೆಯುತ್ತೆ" ಅ೦ತಾ ಬುದ್ದಿ ಹೇಳೋಣ.
ನಿಮ್ಮ ಬುದ್ದಿಮಾತುಗಳನ್ನು ಈ ಕೆಳಗಿನ ಮಿ೦ಚೆ ವಿಳಾಸಕ್ಕೆ ಕಳುಹಿಸಿ
IDBI: customercare@idbi.co.in
HDFC Insurance: response@hdfcinsurance.com
Comments
ಉ: ಕನ್ನಡದ ಎಫ್.ಎಮ್ ಗಳಲ್ಲೇಕೆ ಹಿ೦ದಿ ಜಾಹಿರಾತು?
ಉ: ಕನ್ನಡದ ಎಫ್.ಎಮ್ ಗಳಲ್ಲೇಕೆ ಹಿ೦ದಿ ಜಾಹಿರಾತು?