ಕನ್ನಡಿಗರ ಭವ್ಯ ಇತಿಹಾಸ - ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ?-'ನಾನೇಕೆ ನಾಸ್ತಿಕ ?
ನಿನ್ನೆಯ ಪ್ರಜಾವಾಣಿಯಲ್ಲಿ (೨೯-ಸೆಪ್ಟೆಂಬರ್-೨೦೦೬) ಕನ್ನಡಿಗರ ಭವ್ಯ ಇತಿಹಾಸ ಕುರಿತು ಮತ್ತೊಮ್ಮೆ ಪಾಟೀಲ ಪುಟ್ಟಪ್ಪನವರು ಬರೆದಿದ್ದಾರೆ . ಓದಿ , ಕತ್ತರಿಸಿಟ್ಟುಕೊಳ್ಳಿ .
ಹೊಸ ಮಯೂರ ಪೇಟೆಗೆ ಬಂದಿದೆ . ಓದುತ್ತಿರುವೆ .
ರಾಜೇಂದ್ರ ಚೆನ್ನಿ ಎಂಬ ಸಾಹಿತಿಗಳ ಸಂದರ್ಶನ ಇದೆ.
'ಈಚೆಗೆ ನಿಮ್ಮ ಪುಸ್ತಕಗಳು , ಕಾದಂಬರಿ ಇಂಗ್ಲೀಷಿನಲ್ಲಿ ಬಂದಿವೆಯಲ್ಲ ? ' ಎಂಬ ಮಾತಿಗೆ ಉತ್ತರವಾಗಿ ' ನಾವು ಹೆಚ್ಚು ಹೆಚ್ಚು ಬೈಲಿಂಗ್ವಲ್ ಆಗ್ತಿರೋದ್ರಿಂದ ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ಆದರೆ ಆಶ್ಚರ್ಯ ವಿಲ್ಲ . . ' ಅಂತಾರೆ!?
ಇನ್ನೊಂದು ಮಾತಿನಲ್ಲಿ ಸಾಹಿತಿಗಳು ಇತರರು ಬರೆಯುವದನ್ನು ಓದುವದಿಲ್ಲ ಎಂಬುದನ್ನು ಖಾತರಿ ಮಾಡುತ್ತಾರೆ . ಇನ್ನು ಓದುತ್ತಾರಂತೆ!
ಸೈಕಲ್ ಬಗ್ಗೆ ಒಳ್ಳೆಯ ಪ್ರಬಂಧ ಇದೆ . ಟಿಬೆಟ್ : ಅರ್ಧ ಶತಮಾನದ ಆರ್ತ ಮೊರೆ ಎಂಬ ಪುಸ್ತಕದ ಬಗ್ಗೆ ಇದೆ . ಆದರೆ ಬೆಲೆ ೩೭೫ ರೂ. ಪುಟ ೫೪೦. ಕನ್ನಡದ ಪುಸ್ತಕಗಳ ಸದ್ಯದ ಬೆಲೆ ನನ್ನ ಅಂದಾಜಿನ ಪ್ರಕಾರ ಹೀಗಿದೆ. ಒಂದು ಪುಟಕ್ಕೆ ೫೦ ಪೈಸೆಯಿಂದ ೧ ರೂಪಾಯಿ. ಹೀಗಾಗಿ ಕೆಲವು ಪುಸ್ತಕಗಳು ೫೦೦/೭೦೦ ರೂಪಾಯಿ ಬೆಲೆ ತಲುಪಿವೆ! ಹೇಗೂ ಪುಸ್ತಕ ಮಾರಾಟಕ್ಕೆ ಹತ್ತಾರು ವರ್ಷ ಬೇಕು. ಆ ಕಾಲದ ಬೆಲೆಯನ್ನು ಫಿಕ್ಸ್ ಮಾಡ್ತಾರೋ ಏನೋ ? ಅಥವ ಸಗಟಾಗಿ ಸರಕಾರಕ್ಕೆ ಮಾರಿ ಹಣ ಹಂಚಿಕೊಳ್ತಾರೋ ಏನೋ ?
ಅಮರೇಶ ನುಗಡೋಣಿ - ನಾನು ಹಿಂದೆ ಗಮನಿಸಿದ ಹೆಸರು . ಅವರ ' ತಮಂಧದ ಕೇಡು ' ನೆನಪಿನಲ್ಲುಳಿದ ಕತೆ . ಇಲ್ಲಿ ಪ್ರಕಟವಾದ ಕತೆ ಮಾತ್ರ ತಲೆ ಬುಡ ತಿಳಿಯಲಿಲ್ಲ ?
ಪದಗತಿ ಎಂಬ ಅಂಕಣ ಮಯೂರದಲ್ಲಿ ಬರುತ್ತಾ ಇದೆ. ಅಕ್ಷರ/ಶಬ್ದಾರ್ಥ/ಭಾಷಾಸಕ್ತರು ಓದಬೇಕು .
ವಸುಧಾಳ ಕಂಫರ್ಟ್ ಶಾಪ್ಪಿಂಗ್ - ವಿಚಾರಣೀಯ -ಚೆನ್ನಾಗಿದೆ.
ಮಯೂರ ಅರ್ಧ ಮಾತ್ರ ಓದಿದ್ದೇನೆ. ಉಳಿದರ್ಧದ ಬಗ್ಗೆ ಸೋಮವಾರ ಬರೆಯುವೆ.
ಅಂದ ಹಾಗೆ ಭಗತ್ ಸಿಂಗರನ್ನು ಎಲ್ಲರೂ ಜ್ಞಾಪಿಸಿಕೊಳ್ಳುತ್ತಿದ್ದಾರೆ . ೧೦೦ ನೆ ಜನ್ಮದಿನ ಇರಬಹುದು. ಈಗಾಗಲೇ ಓದಿಲ್ಲದಿದ್ದರೆ - 'ನಾನೇಕೆ ನಾಸ್ತಿಕ ?' ಕೊಂಡು ಓದಿ . ಬೆಲೆ ಬರೀ ಹದಿನೈದು ರೂಪಾಯಿ. ವಿಚಾರ ಪ್ರಚೋದಕ ಸಾಹಿತ್ಯವದು.
Comments
ಭಗತ್ ಸಿಂಗ್