ಕನ್ನಡ ಜನಪದ - ನೃಪತುಂಗ

ಕನ್ನಡ ಜನಪದ - ನೃಪತುಂಗ

ಪುಸ್ತಕದಿಂದ ಬರೆದುಕೊಂಡಿದ್ದ ಒಂದು ವಿಳಾಸ ಹುಡುಕುತ್ತಿದ್ದಾಗ `ಕನ್ನಡ ಜನಪದ' ಪದ್ಯ ಸಿಕ್ಕಿತು. ಯಾವ ಪುಸ್ತಕದಿಂದ ಬರೆದುಕೊಂಡಿದ್ದೆ ತಿಳಿದಿಲ್ಲ. ಅದನ್ನು ಯಥಾವತ್ತಾಗಿ ಟೈಪಿಸಿದ್ದೇನೆ. ತಪ್ಪುಗಳಿದ್ದರೆ ತಿಳಿಸಿ.

ಚಂದ್ರು
೨೪.೦೪.೨೦೦೭

ಕನ್ನಡ ಜನಪದ - ನೃಪತುಂಗ

ಕಾವೇರಿಯಿಂದೆಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ...
ಅದರೊಳಗಂ ಕುಸುವೊಳಿಲಾ
ವಿದಿತ ಮಹಾಕೊಪಣ ನಗರದಾ ಪುಲಗೆರೇಯಾ
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಪದನರೀದು ನುಡಿಯಲುಂ ನುಡಿ
ದುದನರೀದಾರಯಲು ಮಾರ್ವರಾ ನಾಡವರ್ಗಳ್
ಚದುರರ್‍ ನಿಜದಿಂ ಕುರಿತೊ
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್

ಸುಭದರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ
ಅಭಿಮಾನಿಗಳತ್ಯುಗ್ರರ್‍
ಗಭೀರಚಿತ್ತರ್‍ ವಿವೇಕಿಗಳ್ ನಾಡವರ್ಗಳ್
- ನೃಪತುಂಗ

 

Rating
No votes yet

Comments