ಕುಡುಕರ ರಾಜ್ಯ

ಕುಡುಕರ ರಾಜ್ಯ

ಕಳ್ಳಭಟ್ಟಿಯೋ-ಸಾಚಾಭಟ್ಟಿಯೋ ಕುಡಿತ ಕೆಟ್ಟ ಚಟ.
ಕಳ್ಳಭಟ್ಟಿ ಕುಡಿದು ಒಟ್ಟೊಟ್ಟಿಗೆ ಜನ ಸತ್ತಾಗ-
ಸರಕಾರ ಅಲ್ಲಾಡುತ್ತದೆ,
ವಿರೋಧ ಪಕ್ಷ ಕಣ್ಣೀರು ಸುರಿಸುತ್ತದೆ,
ಅಬಕಾರಿ/ಪೋಲೀಸ್ ಇಲಾಖೆ ಚುರುಕಾಗುತ್ತದೆ,
ಒಂದೆರಡು ರೈಡ್-ಒಂದೆರಡು ಎರೆಸ್ಟ್, ಮುಗಿಯಿತು. ಪುನಃ ಮಾಮೂಲ್..

ಸಾರಾಯಿ ನಿಲ್ಲಿಸಿದರೆಂದು ಈ ಸರಕಾರವನ್ನು ಹೊಗಳಿದಿರಿ. ಹಳ್ಳಿಗರೆಲ್ಲಾ ಕುಡುಕರಲ್ಲ.
ರೇಶನ್,ಸ್ಕೂಲ್‌ಗೆ.. ಬರಲು ಹಳ್ಳಿಗರು ಮೈಲುಗಟ್ಟಲೆ ನಡೆಯಬೇಕು. ಸರಿಯಾದ ರಸ್ತೆ ಇಲ್ಲ.-ಅದರ ಬಗ್ಗೆ ಚಿಂತಿಸದ ಸರಕಾರ-
ಕುಡಿಯಲು ಹಳ್ಳಿಗ ಮೈಲುಗಟ್ಟಲೆ ನಡೆಯಬೇಕು. ಆತ ಕಳ್ಳಭಟ್ಟಿ ಕುಡಿಯದಿರಲು ಹಳ್ಳಿ ಹಳ್ಳಿಯಲ್ಲಿ ಬಾರ್/ವೈನ್ ಸ್ಟೋರ್ ತೆರೆಯಲು ಈ ಬಜೆಟ್‌ನಲ್ಲಿ ಅನುಮತಿ ನೀಡಿದೆ.

ನೋಡಿ, ಇಂಗ್ಲೀಷ್ ಪತ್ರಿಕೆಯೊಂದರ ಬೆಂಗಳೂರ ಆವೃತ್ತಿಯಲ್ಲಿ, ೩ನೇ ಪುಟದಲ್ಲಿ, ದಿನವೂ, ಬಲಕೈಯಲ್ಲಿ ಬಾಟಲ್,ಎಡಕೈಯಲ್ಲಿ ಹೆಣ್ಣಿನ ಸೊಂಟ ಹಿಡಿದು, ಕೈಕಾಲಲ್ಲಿ ಬಲವಿಲ್ಲದವರಂತೆ ಒಬ್ಬರಮೇಲೊಬ್ಬರು ಬಿದ್ದಿರುವ ಫೋಟೋ ನೋಡುತ್ತೀರಲ್ಲ. (ಅವರು ಏನು ಸಾಹಸ ಮಾಡಿದ್ದಾರೆಂದು ಅವರ ಫೋಟೋ ಹಾಕುತ್ತಾರೆ?)
ಇದೇ ವರ್ತನೆ ಹಳ್ಳಿಹಳ್ಳಿಯಲ್ಲೂ ಕಾಣಿಸಿಕೊಳ್ಳುವುದು.

ಕರ್ನಾಟಕವನ್ನು ಕುಡುಕರ ರಾಜ್ಯ ಮಾಡುವ ಮೊದಲು ಎಚ್ಚತ್ತುಕೊಳ್ಳಿ .ಪ್ಲೀಸ್..

(ನಾಳೆ ಕಳ್ಳಭಟ್ಟಿ ತಯಾರಿ/ರೈಡ್ ಬಗ್ಗೆ ಬ್ಲಾಗ್ ಬರೆಯುವೆನು-ಕುಡಿಯದಿದ್ದರೆ :) )
-ಗಣೇಶ.

Rating
No votes yet