ಕೌನ್ ಬನೇಗಾ ಬೇಕಾರ್ ಪತಿ

ಕೌನ್ ಬನೇಗಾ ಬೇಕಾರ್ ಪತಿ

ಲೇ ನೋಡ್ರಲಾ ಇಲ್ಲಿ. ನಂಗೆ ಅಮಿತಾಬ್ ಬಚ್ಚನ್ ಕೌನ್ ಬನೇಗ ಕರೋಡ್ ಪತಿಯಿಂದ ಲೆಟರ್ ಬಂದೈತೆ ಅಂಗೇ ಕನ್ನಡದಾಗೆ ಪ್ರಸ್ನೆ ಕೇಳ್ತಾರಂತೆ ಅಂದ ಗೌಡಪ್ಪ. ಮತ್ತೆ ಯಾವಾಗ ಹೋಗೋದು. ನಾಳೆನೆ ಕಲಾ. ನೀನು ಬಾರಲಾ ಅಂದ ನಂಗೆ. ಸರಿ ಬೆಂಗಳೂರಿಂದ ಬಾಂಬೆಗೆ ಅಂತ ಟ್ರೈನ್ ಹತ್ತಿದ್ವಿ. ಗೌಡಪ್ಪ ಸುಮ್ನೆ ಯಾವದೋ ಸೀಟ್ನಾಗೆ ಹೋಗಿ ಮಕ್ಕೊಂಡ. ಅಟ್ಟೊತ್ತಿಗೆ ಬಂದ ಟಿ.ಟಿ ಎಲ್ರಿ ನಿಮ್ಮ ರಿಸರ್ವೇಷನ್ ಟಿಕಟ್ ಅಂದ. ತೋರಿಸಿದ್ರೆ ನಿಮ್ಮ ನಂಬರ್ ಮೊದಲನೆ ಬೋಗಿಯಲ್ಲಿ ಐತೆ ಹೋಗಿ ಅಂದ. ನಾವಿದ್ದದ್ದು 32ನೇ ಬೋಗಿಯಲ್ಲಿ. ನಮ್ಮ ಸೀಟಿಗೆ ಹೋಗೋಷ್ಟತ್ತಿಗೆ 2ಗಂಟೆ ಬೇಕಾಗಿತ್ತು. ಗೌಡಪ್ಪ ಇವತ್ತು ವಾಕಿಂಗ್ ಮಾಡೋದು ತಪ್ತು ಬುಡಲಾ ಅಂದ. ನಡೆದಿದ್ದ ಸುಸ್ತಿಗೆ ಮಕ್ಕೊಂಡ್ರೆ ಮಾರನೆ ದಿನಾ ಎಚ್ಚರ ಆಗಿತ್ತು. ಬೀಡಿ ಸೇದಿ ದಂಡ ಕಟ್ಟಿದ್ದ. ಅಂಗೇ ಬಸ್ನಾಗೆ ಕಂಬ ಹಿಡ್ಕಂಡಂಗೆ ಎಮರ್ಜೆನ್ಸಿ ಹಗ್ಗ ಎಳೆದು ಅದಕ್ಕೆ ಸಾನೇ ಉಗಸ್ಕಂಡಿದ್ದ.

ಸರಿ ಬಾಂಬೆ ಬಂತು. ಸಂಜೆ ಕಲಾ ಕಾರ್ಯಕ್ರಮ ಇರೋದು. ರೆಡ್ ಲೈಟ್ ಏರಿಯಾಕ್ಕೆ ಹೋಗುವ ನಡಿಯಲಾ ಅಂದ. ಏ ಥೂ. ಅಲ್ಲಿಗೆ ಯಾಕ್ರೀ. ನಡಿಯಲಾ ಅಂದ. ಸರಿ ಹೋದ್ವಿ. ಮಗಾ ಕೆಂಪು ದೀಪ ಎಲ್ಲಿ ಅಂತ ಹುಡುಕ್ತಾ ಇದ್ದ. ಏನಲಾ ಹೆಸರು ನೋಡಿದ್ರೆ ರೆಡ್ ಲೈಟ್ ಅಂತಾ ಐತೆ. ಕೆಂಪು ದೀಪನೇ ಇಲ್ಲ ಅಂದ. ಸುಮ್ನೆ ನಡೀರಿ ಇನ್ನೊಂದು ಸ್ವಲ್ಪ ಹೊತ್ತು ಇಲ್ಲೇ ಇದ್ರೆ ಪೊಲೀಸ್ನೋರು ಎತ್ತಾಕಂಡ್ ಹೋಗಿ ವರ್ಕ್ ಮಾತ್ತಾರೆ. ಯಾಕಲಾ. ಇದು ಡೇಂಜರ್ ಏರಿಯಾ ಅಂದೆ.

ಸರಿ ಕಾರ್ಯಕ್ರಮ ಸುರುವಾತು. ಚೆಡ್ಡಿ ಸಲ್ಟು ಹಾಕಿದ್ದ. ಬಚ್ಚನ್ ಸ್ವಲ್ಪ ಸರಿಯಾಗಿ ಕುಂತ್ಕಳ್ರಿ. ದೇಸದ ಜನ ನೋಡ್ತಾರೆ ಅಂತು.

ಬಚ್ಚನ್ ಬಂದು ಗೌಡಪ್ಪಂಗೆ ಕೈ ಕೊಟ್ರು. ಮಗಾ ಸಾನೇ ಕುಲುಕಿದ. ಇನ್ನೊಂದು ಎರಡು ನಿಮಿಸ ಅಂಗೇ ಮಾಡಿದ್ರೆ. ಬಚ್ಚನ್ ಕೈ ಡಿಸ್ ಲೊಕೇಟ್ ಆಗೋದು. ಆಮ್ಯಾಕೆ ಬಚ್ಚನ್ ಕೈಗೆ ಡೆಟಾಲ್ ಹಾಕಿ ಕೈ ತೊಳಕಂಡ. ಸರ್ ನೀವು ಹೋತನ ಗಡ್ಡ ಬಿಟ್ಟಿದ್ದು ನೋಡಿ ನಮ್ಮ ಕಡೆ ಟಗರು ಅಂದ್ಕಂಡಿದ್ದೆ ಅಂದ. ಬಚ್ಚನ್ ಅಂಗೆ ಹಲ್ಲು ಕಡಿಯೋನು. ಗೌಡಪ್ಪನ ಮೈ ವಾಸನೆಗೆ ಬಚ್ಚನ್ ಅವಾಗವಾಗ ಸೆಂಟ್ ಹಾಕ್ಕಂಡ್ ಬರೋದು. ಯಾಕ್ ಸಾ. ಬದ್ಬೂ ರೇ ಅನ್ನೋದು. ನೋಡಿ ಮಹಾ ಜನರೆ ನಮ್ಮ ಮುಂದೆ ಹಾಟ್ ಸೀಟ್ ನಲ್ಲಿ ಇದ್ದಾರೆ ಮಿ.ಗೌಡಪ್ಪ ಫ್ರಮ್ ಕರ್ನಾಟಕ. ನೀವು ಹಾಟ್ ಅಂತೀರಾ ಮತ್ತೆ ಸೀಟ್ ತಣ್ಣಗೈತೆ ಅಂದ ಗೌಡಪ್ಪ. ಎಸಿ ಆಫ್ ಮಾಡ್ರಲಾ. ಸರ್ ಕ್ಯಾಮೆರಾ ಹೀಟ್ ಆಯ್ತದೆ. ಸರಿ, ಸುಮ್ಕೆ ಕೂತ್ಕಳಲಾ ಗೌಡಪ್ಪ ಅಂದ ಬಚ್ಚನ್.

ಈಗ ಮೊದಲನೆ ಪ್ರಶ್ನೆ,

ಬಚ್ಚನ್ : 1. ವಿಸ್ಕಿಗೂ ವಿಶಕ್ಕು ಇರುವ ವ್ಯತ್ಯಾಸವೇನು?

ಗೌಡಪ್ಪ : ಇದಕ್ಕೆ ಆಪ್ಸನ್ ಬೇಡ ಬುಡಿ. ವಿಸ್ಕಿ ಕುಡಿದರೆ ನಾವು ಡ್ಯಾನ್ಸ್ ಮಾಡ್ತೀವಿ. ಅದೇ ವಿಸ ಕುಡಿದರೆ ನಮ್ಮ ಮುಂದೆ ಜನ ಡ್ಯಾನ್ಸ್ ಮಾತ್ತಾರೆ,

ಬಚ್ಚನ್ : ಓಹ್ ರೈಟ್ ಆನ್ಸರ್. ಸಾವಿರ ರೂಪಾಯಿ ನಿಮ್ಮ ಜೇಬಿಗೆ.

 

ಈಗ ಎರಡನೇ ಪ್ರಶ್ನೆ

2. ಡಾಕ್ಟರ್್ಗೂ ಲಾರಿಗೂ ಇರುವ ವ್ಯತ್ಯಾಸವೇನು?

ಗೌಡಪ್ಪ : ಡಾಕಟರು ಕಾಸು ಇಸ್ಕಂಡು ಜೀವ ತೆಗೀತಾರೆ. ಅದೇ ಲಾರಿ ಯಾವುದೇ ಲಾಭವಿಲ್ಲದೆ ನಮ್ಮನ್ನು ನೇರವಾಗಿ ಮಸಾಣಕ್ಕೆ ಕಳಿಸುತ್ತದೆ. ಹಾಗೇ ನಮ್ಮ ಮನೆಯವರಿಗೆ ಇನ್ಸೂರೆನ್ಸ್  ಹಣ ಬತ್ತದೆ. ಸಮಾಜ ಕಾರ್ಯ ಅಂದ್ರೆ ಇದೆಯಾ.

ಓಹ್ ರೈಟ್ ಆನ್ಸರ್. ನೀವು ಎರಡು ಸಾವಿರ ಗೆದ್ದಿರಿ. ಮತ್ತೆ ಕಾಸು ಕೊಡಿ. ತಡ್ಕಳಲಾ.

 

ಬಚ್ಚನ್ ಈಗ ಮೂರನೇ ಪ್ರಶ್ನೆ.

3. ನಿಮ್ಮ ಹೆಂಡರು ಬಸಮ್ಮನ ವಯಸ್ಸೆಷ್ಟು?

ಗೌಡಪ್ಪ : ಲೈಪ್ ಲೈನ್. ಬೇಕು ಅದ್ರಾಗೆ ಪೋನ್ ಆರ್ ಫ್ರೆಂಡ್ ಅಂದ.

ಬಚ್ಚನ್ : ಓಹ್ ಸುಬ್ಬ. ನಿಮ್ಮ ಸ್ನೇಹಿತರು ನನ್ನ ಮುಂದೆ ಹಾಟ್ ಸೀಟ್ ನಲ್ಲಿ ಕೂತಿದ್ದಾರೆ. ಸರ್ ಬುಡಕ್ಕೆ ಐಸ್ ಮಡಗಿ, ಇಲ್ಲಾ ತಳ ಸುಟ್ಟೋದಾತು. ಏ ಥೂ. ಅವರಿಗೆ ನಿಮ್ಮ ಸಹಾಯ ಬೇಕು, ಈಗ ಗೌಡಪ್ಪ ಮಾತಾಡ್ತಾರೆ.

ಗೌಡಪ್ಪ : ಲೇ ಸುಬ್ಬ ನನ್ನ ಹೆಂಡರು ಬಸಮ್ಮಂಗೆ ವಯಸ್ಸು ಎಷ್ಟಲಾ. ಏ ನಂಗೇನು ಗೊತ್ತು. ತಹಸೀಲ್ದಾರಿಗೆ ಪೋನ್ ಮಾಡಿ ಅಂದ ಸುಬ್ಬ. ಯಾಕಲಾ. ಮೊದಲನೇ ಗಂಡ ಸತ್ತಾವ್ನೆ ಅಂತ ವಿಧವಾ ಪೆನ್ಸನ್ ತಗೋತಿದ್ದಾಳೆ ಅಂದ ಸುಬ್ಬ.

ಸುಮಾರು 40 ಅಂದ ಗೌಡಪ್ಪ.

ಓಹ್ ಇದು ಸರಿಯಾದ ಉತ್ತರ. 10ಸಾವಿರ ಗೆದ್ದಿರಿ. ಮುಂಚೆ ಆ ವಮ್ಮ ಕಾಂಗ್ರೆಸ್ನಾಗೆ ಇತ್ತಲಾ ಅಂತು ಬಚ್ಚನ್. ನಮ್ಮ ಬಸಮ್ಮನ್ನ ಅಂಬಿಕಾ ಸೋನಿ ಅನ್ಕಂಡವ್ರೆ ಅಂತಾ ಕಿಸಿಯೋನು. ಕರೋಡ್ ಪತಿ ಅಂತೀರಿ ಬರೀ ಸಾವಿರದಾಗೆ ಮಾತಾಡ್ತೀರಿ ಅಂದ ಗೌಡಪ್ಪ.

ಒಸಿ ತಡ್ಕಳಪ್ಪಾ.

 

ಈಗ 4ನೇ ಪ್ರಸ್ನೆ,

ನೀವು ಕೆರೆತಾವ ಹೋಗುವಾಗ ಚೊಂಬನ್ನು ಯಾವ ಕೈಯಲ್ಲಿ ಹಿಡಿದಿರುತ್ತೀರಿ?

ಗೌಡಪ್ಪ : ಇದೊಳ್ಳೆ ಕಥೆ ಆಯ್ತಲ್ಲಾ. ಬೀಡಿ ಎಡಗೈನಾಗೆ ಇದ್ರೆ ಬಲಗೈನಾಗೆ ಚೊಂಬು. ಏ ಥೂ ಕನ್ಫೂಸ್ ಆಯ್ತಾ ಇದೆ. ಲೈಫ್ ಲೈನ್ ಆಡಿಯನ್ಸ್ ಪೋಲ್ ಅಂದ. ಯಾವುದಲಾ ಕೋಮಲ್ ಹೇಳಲಾ. ಏ ಎಡಗೈ ಅನ್ರಿ. ಯಾಕಲಾ, ನೀವು ಬಲಗೈನಾಗೆ ಅಲ್ವರಾ ಟವಲ್ ಮಡಿಕ್ಕಳ್ಳೋದು. ಹೂ ಕಲಾ.

ಸರಿ ಎಡಗೈ. ಓಹ್ ಇದು ಸರಿ ಉತ್ತರ. 2ಲಕ್ಷ  ಗೆದ್ದಿರಿ.

 

ಈಗ 5ನೇ ಪ್ರಶ್ನೆ.

ಅಭಿಷೇಕ್ ಬಚ್ಚನ್ ಯಾರ ಮಗ?

ಡಾ.ರಾಜ್ಕುಮಾರ್ ಮಗ ಅಂದ ಗೌಡಪ್ಪ. ಎರಡೇ ನಿಮಿಸಕ್ಕೆ ದಬುದುಬು ಅಂತ ಸವಂಡ್ ಬತ್ತು, ನೋಡಿದ್ರೆ ಬಚ್ಚನ್ ಹೊಡೀತಾ ಇದ್ದ. ಯಾಕ್ ಸಾ. ಲೇ ಅವನು ನನ್ನ ಮಗ ಕನಲಾ. ಅವನನ್ನ ರಾಜ್ಕುಮಾರ್ ಮಗಾ ಅಂತ್ಯಾ. ನನ್ನ ಹೆಂಡರು ಜಯಬಾಧುರಿ ಕೇಳಿದ್ರೆ ನಿನ್ನನ್ನ ಇಲ್ಲೇ ಮಲ್ಡರ್ ಮಾಡ್ತಿದ್ಲು ಅಂತು ಬಚ್ಚನ್. ಆ ವಮ್ಮ ಕುಳ್ಳಗೈತೆ ಬುಡಿ. ಏನು ಮಾಡಕ್ಕಿಲ್ಲಾ ಅಂದ ಗೌಡಪ್ಪ.

ರಾಂಗ್ ಆನ್ಸರ್, 20ಸಾವಿರ ಕಟ್ ಮಾಡಿದೀವಿ.

 

ಸರಿ ಈಗ 6ನೇ ಪ್ರಸ್ನೆ ಕೇಳ್ತೀನಿ ಬೊಗಳು.

6. ಟ್ರೈನ್ ಯಾಕೆ ಹಳಿಮೇಲೆ ಹೋಯ್ತದೆ?

ಗೌಡಪ್ಪ : ರಸ್ತೆ ಮ್ಯಾಕೆ ಹೋದ್ರೆ ಸಾನೇ ಆಕ್ಸಿಡೆಂಟ್ ಆಯ್ತದೆ ಅದಕ್ಕೆ. ಅಂಗೇ ಟ್ರಾಪಿಕ್ ಜಾಮ್ ಆಯ್ತದೆ.

 

7ನೇ ಪ್ರಸ್ನೆ

7. ಆಟೋಗೆ ಯಾಕೆ ಸೈಡ್ ಸ್ಟಾಂಡ್ ಇರುವುದಿಲ್ಲ? ಬಸ್ಸು ಯಾಕೆ ಬಸ್ಟಾಂಡ್್ನಲ್ಲೇ ನಿಲ್ಲುತ್ತದೆ? ಕೋಳಿ ಯಾಕೆ ಮೊಟ್ಟೆ ಇಡುತ್ತದೆ? ಬಾಲ್ಡ್ ಹೆಡ್್ನಿಂದ ಏನು ಲಾಭ? ಹೇಳು ಮಗನೇ.

ಗೌಡಪ್ಪ : ಏನ್ ಸರ್. ಒಂದೇ ಬಾರಿಗೆ ಇಟೊಂದು ಪ್ರಸ್ನೆ. ಸರಿ ಹೇಳ್ತೀನಿ ಕೇಳಿ. ಆಟೋಗೆ ಸೈಟ್ ಸ್ಟಾಂಡ್ ಹಾಕಿದ್ರೆ ಭಾರ ತಡಿಯಕ್ಕಿಲ್ಲಾ ಅಂತಾ ಹಾಕಕ್ಕಿಲ್ಲ. ಬಸ್ಸನ್ನ ಸೈಕಲ್ ಸ್ಟಾಂಡ್ನಾಗೆ ನಿಲ್ಸಕ್ಕೆ ಆಗಕ್ಕಿಲ್ಲ. ಕೋಳಿ ಮೊಟ್ಟೆ ಬಿದ್ದರೆ ಒಡೆದು ಹೋಯ್ತದೆ. ಅದಕ್ಕೆ ಇಡ್ತದೆ. ಆಮ್ಯಾಕೆ ಬಾಲ್ಡ್ ಹೆಡ್್ನಿಂದ ಕೊಬ್ಬರಿ ಎಣ್ಣೆ ಉಳೀತದೆ. ಅಂಗೇ ಕಟಿಂಗ್ ವರ್ಸಕ್ಕೆ ಒಂದು ಕಿತಾ ಮಾಡ್ಸಿದ್ದರೆ ಸಾಕು ಅಂದ ಗೌಡಪ್ಪ.

ಅಟ್ಟೊತ್ತಿಗೆ ಬಚ್ಚನ್ ಪಿತ್ತ ನೆತ್ತಿಗೆ ಏರಿತ್ತು. ನೋಡೋ ಗೌಡ ನೀನು ಹೇಳಿದ್ದು ತಪ್ಪು. ನಿಂದು -50ಸಾವಿರ ಆಗೈತೆ. ಇದಕ್ಕೆ ಇನ್ನು 20ಸಾವಿರ ಎಕ್ಸ್್ಟ್ರಾ ಕೊಟ್ಟು ತೊಲಗು ಅಂದ. ಎಕ್ಸ್್ಟರಾ ಯಾಕ್ ಸಾ. ಈ ನಿನ್ನ ಸ್ಕ್ರಾಪ್, ಟಿಂಕರಿಂಗ್ ಮುಖ ಇಷ್ಟೊತ್ತು ದೇಸದ ಜನತೆಗೆ ತೋರಿಸಿಲ್ವಾ, ನಿನ್ನಿಂದ ಜಾಹೀರಾತು ಎಲ್ಲಾ ಕ್ಯಾನ್ಸಲ್ ಆಗೈತೆ ಅಂತು ಬಚ್ಚನ್, ಸರಿ ಗೌಡಪ್ಪ ಇರೋ ಬರೋ ಕಾಸು ಎಲ್ಲಾ ಕೊಟ್ಟು ಬಂದ. ಯಾವ ಕಾರ್ಯಕ್ರಮಕ್ಕೆ ಹೋಗಿದ್ರಿ ಅಂದ್ರೆ ಕೌನ್ ಬನೇಗಾ ಬೇಕಾರ್ ಪತಿ ಅಂತಾನೆ. ಏ ಥೂ

 

Rating
No votes yet

Comments