ಕ್ರಿಕೇಟ್ ಕ್ರಿಕೇಟ್ ಕ್ರಿಕೇಟ್....

ಕ್ರಿಕೇಟ್ ಕ್ರಿಕೇಟ್ ಕ್ರಿಕೇಟ್....


ಇದೇತಕೊ ಕವಿದಿದೆ ಭಾರತಕೆ
ಕ್ರಿಕೇಟಿನ ಮಾಯೆಯ ಮತ್ತು|
ಅದೇತಕೊ ಕಾಣದಿದೆ ಬಾರತಕೆ
ಪಾಪಿ ಪಾಕಿಗಳು ತರುವ ಕುತ್ತು|


ಹಿಂದೊಮ್ಮೆ ದೇಶದ ಉದ್ದಗಲಕೂ
ಹಾಕಿದರು ಇವರೆ ಸಿಡಿಮದ್ದು|
ಇಂದು ನಮ್ಮವರೆ ಹೊಡೆದಿಹರು
ಗೆಲುವೆಂಬ ಭ್ರಮೆಯ ಪಟಾಕಿಸದ್ದು|


ಅಲ್ಲಿ ಪಾಕಿಗಳು ತೋಡುತಿಹರು
ದೇಶದ ಗಡಿಯ ಉದ್ದಗಲಕ್ಕು ಅಡಗು ಗುಂಡಿ|
ಇಲ್ಲಿ ನಮ್ಮ ಜನಗಳಿಗೇನೊ ಮೋಹ
ಕ್ರಿಕೇಟಿನ ಗಡಿಯ ಹೊರಗಡೆ ಬೌಂಡರಿ ಸಿಕ್ಸರ್ ಗಳು ದಂಡಿ!


ಆಟ ನೋಡುವ ನೆಪದ ಅಡಿಯೆ
ಬರುವರು ಪಾಕಿಗಳು ಸಾವಿರ ಸಾವಿರ|
ಅವರಲ್ಲಿ ಆಟ ನೋಡದೆ ಇಲ್ಲಿಯೆ
ಉಳಿಯುವರು ಕೆಲವು ಸಾವಿರ |


ಅವರಿಗೊ ಕ್ರಿಕೇಟ್ ಎಂಬ ಆಟ
ಬರಿ ರಾಜಕೀಯದ ಹೂಟ!
ನಮ್ಮವರಿಗೆ ಅದೆ ಕ್ರಿಕೇಟ ಎಂಬ ಆಟ
ತೋರುತಿದೆ ನಮಗೆ ಯಾರೊ ಮಾಡಿಸಿದ ಮಾಟ|


ಈಗ ನಮ್ಮವರು ಗೆದ್ದರೋ
ಆಗುವುದು ಅದೆ ದೊಡ್ಡ ಗುಲ್ಲು|
ಒಮ್ಮೆ ಪಾಕಿಗಳಿಗೆ ನಮ್ಮವರು ಸೋತರೊ?
ಮನೆಗಳ ಮೇಲೆ ಬೀಳುವುದು ಕಲ್ಲು|


ಆಳುವ ಬಿಳಿಯರು ಹೋದರೇನು ದೂರ
ಬಿಟ್ಟಿಹರು ಇಂತಹ ಚಿನ್ನದ ಜಿಂಕೆಯನ್ನ |
ಆಟವು ಆಟವೆ ಆದರೆ ಅದೆಷ್ಟು ಚೆನ್ನ !
ಆದರೆ ಕ್ರಿಕೇಟ್ ಆಳಿದೆ ದೇಶದ ಹೃದಯವನ್ನ

                                   -----------------------------------

 

ಪ್ರಿಯ ಸಂಪದಿಗರೆ ಕ್ರಿಕೇಟ್ ಎಂದರೆ ನನಗೇನು ದ್ವೇಷವಿಲ್ಲ ಇಷ್ಟವಾದ ಆಟವೆ . ಆದರೆ ಇಂದು ಕ್ರಿಕೇಟ್ ಮಾಯೆಯ ಅಡಿಯಲ್ಲಿ ದೇಶದಲ್ಲಿ ನಡೆಯುತ್ತಿರುವುದು ಕಂಡರೆ ಎಂತದೊ ಗೊಂದಲವಾಗುತ್ತದೆ. ಬಾರತ ಪಾಕ್ ಕ್ರಿಕೇಟ್ ಆಡುತ್ತಿರುವ ಈ ಸಂದರ್ಪದಲ್ಲಿ ಎರಡು ದೇಶಗಳು ಮಾತುಕತೆ ನಡೆಸುತ್ತವಂತೆ. ಜೈಲಿನಲ್ಲಿರುವ ರಾಜಕೀಯ ಕೈದಿಗಳ ಬಿಡುಗಡೆಯಂತೆ.....

 ಇದೇನು ರಾಷ್ಟ್ರೀಯ ಹಬ್ಬವೆ ನನಗೆ ಅರ್ಥವಾಗುತ್ತಿಲ್ಲ. ಸ್ವತಂತ್ರ್ಯ ವೀರರನ್ನು ನೇಣುಹಾಕಿದ ದಿನದಂದು ಸರ್ಕಾರ ಅವರನ್ನು ಗೌರವಿಸುವದನ್ನು ಅರಿತಿಲ್ಲ ಅದರೇನು ಕ್ರಿಕೇಟನ್ನು ಗೌರವಿಸುತ್ತಾರೆ.

 

ಇಷ್ಟರಲ್ಲಿ ಕ್ರಿಕೇಟೇಶ್ವರ ಎಂಬ ದೇವಾಲಯ ಕಟ್ಟದರು ಆಶ್ಚರ್ಯವಿಲ್ಲ

 

ಕ್ರಿಕೇಟಿಗೆ ಜಯವಾಗಲಿ ! ಕ್ರಿಕೇಟಿಗೆ ಜಯವಾಗಲಿ !

 

Rating
No votes yet