ಗುನುಗುತಿಹೆ ನಾನು ಇಂದು - ೧

ಗುನುಗುತಿಹೆ ನಾನು ಇಂದು - ೧

ನನಗೆ ಶಾಸ್ತ್ರೀಯ ಸಂಗೀತ ಇಷ್ಟವಿದ್ದರೂ ಹಂಸಾನಂದಿಗಳ ತರಹ ಅದನ್ನು ಅರೆದು ತಿಳಿದುಕೊಂಡಿಲ್ಲ. ಜೊತೆಗೆ ಜಾಸ್ತಿ ಹೊತ್ತು ಶಾಸ್ತ್ರೀಯ ಸಂಗೀತ ಕೇಳಿಸಿಕೊಂಡರೆ ಒಂಥರ ಸಣ್ಣಗೆ ತಲೆನೋವು ಶುರುವಾಗುತ್ತೆ, ಬಹಳ ಕಷ್ಟದ ಗಣಿತ ಸಮಸ್ಯೆ ಬಿಡಿಸಿದ ಹಾಗೆ :-) ಅದೇ ಚಿತ್ರಗೀತೆ ವಿಷಯ ಬೇರೆ. ಅದು ಕೇಳಿಸಿಕೊಳ್ಳದ ದಿನವೇ ಇಲ್ಲವೆನ್ನಬಹುದು. ಯಾಕೆ ಹೀಗೇಂತ? ಒಂದು ಸ್ವ-ವಿಶ್ಲೇಷಣೆ ಏನಪ್ಪ ಅಂದ್ರೆ, ಶಾಸ್ತ್ರೀಯ ಸಂಗೀತದಿಂದ ನನ್ನ ತಲೆಯ ನ್ಯೂರಾನ್ಸ್ ಸಿಕ್ಕಾಪಟ್ಟೆ ಉತ್ಸುಕಗೊಂಡು ಕುಣಿದಾಡಿ ದಣಿಯುತ್ತವೇನೋ. ಅದೇ ಅರ್ಥವಿಲ್ಲದ ಸಾಹಿತ್ಯದ ಜೊತೆಗೆ ಹೊಸೆದಿರುವ ಒಂದು ಸುಲಭದ ಚಿತ್ರಗೀತೆಯ ಸ್ವರ ನನ್ನ ನ್ಯೂರಾನ್ಗಳಿಗೆ ಹೆಚ್ಚು ತೊಂದರೆಯಿಲ್ಲದೆ ಜೀರ್ಣಿಸಿಕೊಳ್ಳುವಂತೆ ಮಾಡುತ್ತವೇನೋ. ಆದ್ದರಿಂದ ನಾನು ನನ್ನ ಮಟ್ಟಿಗೆ ಕಂಡುಕೊಂಡಿರುವ ಸತ್ಯ ಏನೆಂದರೆ, ಶಾಸ್ತ್ರೀಯ ಸಂಗೀತ ಮದುವೆಯೂಟದ ಹಾಗೆ, ಪದೇ ಪದೇ ತಿಂದರೆ ಜೀರ್ಣಿಸಿಕೊಳ್ಳಲು ಕಷ್ಟ. ಚಿತ್ರಗೀತೆಗಳು ತಿಳಿಸಾರನ್ನದ ಹಾಗೆ. ದಿನವೂ ತಿನ್ನಬಹುದು. ಆದ್ರೆ ಈಗ ಹಂಸಾನಂದಿಗಳು ದಿನವೂ ಹಬ್ಬದೂಟ ಬಡಿಸುತ್ತಿದ್ದಾರಲ್ಲ? ಅದನ್ನೂ ನೋಡಿಯೂ ತಿನ್ನದೆ ಹೇಗಿರಲಿ? ಹೀಗಾಗಿ ನಾನು ಅವರ ಲೇಖನ ಓದಿ, ಸಂಗೀತ ಕೇಳಿಸಿಕೊಂಡ ಮೇಲೆ ಒಂದು ಚಿತ್ರಗೀತೆ ಕೇಳಿಸಿಕೊಳ್ಳುತ್ತೇನೆ. ತಲೆನೋವು ಮಾಯ! (ನೋ ಅಫೆನ್ಸ್ ಹಂಸಾನಂದಿಗಳೆ :-))

ನಾನು ಈಗ ಗುನುಗುತ್ತಿರುವ ಚಿತ್ರಗೀತೆ ಇದು. ಸಾಹಿತ್ಯ ಏನಂದ್ರೆ ಅದು ಇದೆ, ಬಾಯಿಗೆ ಬಂದಿದ್ದು ಹಾಡಬಹುದು, ಪ್ರಾಸ ಹೊಂದಿದರೆ ಸರಿ :-)

Rating
No votes yet

Comments