ಚೆಲುವೂ ಚಿನ್ನವೂ

ಚೆಲುವೂ ಚಿನ್ನವೂ

[ ಈ ಬರಹ ಈ ಹಿಂದೆ ಬೇರೆಡೆ ಪ್ರಕಟವಾಗಿತ್ತು ]

 
ಒಂದೆರಡು ತಿಂಗಳ ಹಿಂದೆ ರೇಡಿಯೋದಲ್ಲಿ ಕೇಳಿದ್ದು ಇದು. ಅಮೇರಿಕೆಯ ಸೇಂಟ್ ಲೂಯಿಸ್ ಪಟ್ಟಣದಲ್ಲಿನ ಫೆಡರಲ್ ರೆಸೆರ್ವ್ ಬ್ಯಾಂಕಿನಲ್ಲಿ ಕೆಲಸಕ್ಕಿರುವ ಅರ್ಥಶಾಸ್ತ್ರಜ್ಞನೊಬ್ಬಾತ ಇತ್ತೀಚೆಗೆ ತನ್ನ ಸಂಶೋಧನೆಯೊಂದನ್ನು ಪ್ರಕಟಿಸಿದನು. ಆದೇನೆಂದರೆ "ಹಣವಂತರು ಚೆಲುವರೂ/ಚೆಲುವೆಯರೂ ಆಗಿರುತ್ತಾರೆ". ಅಂದರೆ "ಸಾಮಾನ್ಯವಾಗಿ ಚೆಲುವು, ಚೆಲುವಿನ ಲಕ್ಷಣಗಳು, ಎಂದು ಅಂಗೀಕರಿಸಲಾದ ಎಲ್ಲ ಅಂಶಗಳೂ ಹಣವಂತರಲ್ಲಿ ಹೆಚ್ಚಾಗಿ ಕಂಡುಬರುತ್ತವೆ". ಚೆಲುವಿರುವವರಿಗೆ ಆತ್ಮವಿಶ್ವಾಸ ಹೆಚ್ಚಂತೆ, ಆದ್ದರಿಂದ ಅವರಿಗೆ ಹಣಕಾಸಿನ ವಿಷಯದಲ್ಲಿ ಯಶಸ್ಸು ದಕ್ಕುವುದು ಸುಲಭವೆಂದು ಆತನ ವ್ಯಾಖ್ಯೆ (ಹಾಗಾದರೆ ಚೆಲುವಿದ್ದವರು ಹಣವಂತರಾದರು ಎಂದಷ್ಟೇ ಸಿದ್ಧ. ಆತನದು ವಿಪರೀತ ವ್ಯಾಖ್ಯೆಯಾಯಿತು). ಅದು ಹೇಗಾದರೂ ಇರಲಿ, ನಮ್ಮಲ್ಲಿ ಬಹಳ ಹಿಂದೆಯೇ ಈ ಅನುಭವದ ಮಾತನ್ನು ಸುಬಾಷಿತಕ್ಕೆ ತಿರುಗುಸಿದ್ದರು.

यस्यास्ति वित्तं स नरः कुलीनः ।
स पण्डितॊ स शृतवान् गुणज्ञ्नः ।
स ऎव वक्ता स च दर्शनीयः |
सर्वॆ गुणा: काञ्चनमाश्रयंति ॥

 

ಹಣವಿದ್ದೆಡೆ ಕುಲವಿರುವುದು
ಹಣವಿದ್ದೊಡೆ ಗುಣದರಿವೂ ತಿಳಿವೂ ಬರುವವು
ಹಣಕಂಡೆಡೆ ಬಲು ಚೆಲುವೂ ಕಣ್ಣಿಗೆ
ಹಣವುಳ್ಳಾತನದೇಂ ಗುಣನಿಧಿಯೋ

 

ವೆಂ.

Rating
No votes yet