'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'

ಕಳೆದ ಶನಿವಾರ, ೨೯-೧೧-೨೦೦೮ ರಂದು, ಸಂಜೆ ೪-೩೦ಕ್ಕೆ, ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಅಲ್ಲಿನ ಕನ್ನಡ ಸಂಘದ ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ, ಹಲವು ವರ್ಷಗಳಿಂದಲೂ ಶ್ರೀನಿವಾಸ ರಾಜು ರವರು ಸ್ಥಾಪಿಸಿದ ಕನ್ನಡ ಸಂಘವಿದೆ, ಪ್ರಸ್ತುತ ಈ ಸಂಘವನ್ನು ಅಲ್ಲಿನ ಕನ್ನಡ ಪ್ರಾಧ್ಯಾಪಕ ವರ್ಗದವರು, ಅತಿಮುಖ್ಯವಾಗಿ ರತಿಯವರು, ಬೆಳೆಸಿಕೊಂಡು ಹೋಗುತ್ತಿದ್ದಾರೆ. ಕ್ರೈಸ್ಟ್ 'ಕನ್ನಡ ಸಂಘ' ದವರು ಈವರೆಗೆ ಹಲವಾರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಸಂಸ್ಕೃತಿಯ ಸಾಲಿನಲ್ಲಿಯೇ ಈ ಬಾರಿ 'ಜನ ಸಂಸ್ಕೃತಿ' ಮತ್ತು 'ಎನ್ನಂತರಂಗದ ಆತುಮ' ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 'ಜನ ಸಂಸ್ಕೃತಿ'ಯ ಲೇಖಕರು ಡಾ|| ಪುರುಷೋತ್ತಮ ಬಿಳಿಮಲೆ ಯವರಾದರೆ 'ಎನ್ನಂತರಂಗದ ಆತುಮ'ವನ್ನು ಬರೆದವರು ಡಾ|| ಹರೀಶ್ ಜಿ. ಬಿ. ರವರು.

ಸಭೆಗೆ 'ಕೆ. ಜಿ. ನಾಗರಾಜಪ್ಪ'ರವರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲರಾದ 'ಫಾದರ್ ಮ್ಯಾಥ್ಯೂ'ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ರಾಮಚಂದ್ರನ್ ರವರು 'ಜನ ಸಂಸ್ಕೃತಿ' ಪುಸ್ತಕ ಪರಿಚಯ ಮಾಡಿಸಿದರೆ, 'ರಾಮಲಿಂಗಪ್ಪ' ರವರು 'ಎನ್ನಂತರಂಗದ ಆತುಮ'ವನ್ನು ಪರಿಚಯಿಸಿದರು.

ಪ್ರಖ್ಯಾತ ವಿಮರ್ಶಕರು 'ಪ್ರೊ. ರಾಮಚಂದ್ರನ್'ರವರು 'ಜನ ಸಂಸ್ಕೃತಿ'ಯಲ್ಲಿ ಪ್ರಮುಖವಾಗಿ ಮೂಡಿಬಂದಿರುವ ಕುಮಾರರಾಮನ ಲೇಖನದ ಬಗ್ಗೆ ಮೆಚ್ಚಿಗೆಯ ಮಾತಾಡಿದರು. ಕುಮಾರರಾಮನ ಬಗ್ಗೆ ಬಿಳಿಮಲೆಯವರು ಮಾಡಿರುವ ಅಧ್ಯನಯನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೆಹಲಿ ಕನ್ನಡ ಸಂಘದ ಅಧ್ಯಕ್ಷರೂ 'ಅಂಬಿಕಾತನಯದತ್ತ ಪ್ರಶಸ್ತಿ' ಪುರಸ್ಕೃತರು ಆದ ಬಿಳಿಮಲೆಯವರು ಬಹು ಸಮಯದ ನಂತರ ಮತ್ತೆ ಲೇಖನಿ ಹಿಡಿದು 'ಜನ ಸಂಸ್ಕೃತಿ'ಯನ್ನು ಚಿತ್ರಿಸಿದ್ದಾರೆ. ಈ ಲೇಖನವು ಕರ್ನಾಟಕ ಸಂಸ್ಕೃತಿಯ ಅಧ್ಯಯನವಾಗಿದ್ದು, ಅದನ್ನು ಬೆಳೆಸಲು ಶ್ರಮ ಪಟ್ಟವರ ಬಗ್ಗೆ ಲೇಖನಗಳನ್ನು ಒಳಗೊಂಡಿದೆ. ಪುರುಷೋತ್ತಮ ಬಿಳಿಮಲೆಯವರು ದೆಹಲಿಯಲ್ಲಿ ನೆಲೆಸಿದ್ದು, 'ದೆಹಲಿ ಕನ್ನಡ ಸಂಘ'ದಲ್ಲಿ ಮುಖ್ಯವಾಗಿ ಕೆಲಸ ಮಾಡಿದವರು. ಕರ್ನಾಟಕದ ಪುಟ್ಟ ಗ್ರಾಮದಲ್ಲಿ ಹುಟ್ಟಿ ದೆಹಲಿಗೆ ಹೋಗಿ ಅಲ್ಲಿ ಅವರು ಮೊದಲಿಗೆ ಎದುರಿಸಿದ ಭಾಷ ತೊಂದರೆಗಳು, ಹಾಗು ಇದನ್ನೇ ಪ್ರೇರಣೆಯಾಗಿ ತಗೆದುಕೊಂಡು ದೆಹಲಿ ಕನ್ನಡ ಸಂಘ ಕಟ್ಟಿದ ನೆನೆಪುಗಳನ್ನು ಹಂಚಿಕೊಂಡರು.

ಕವಿಗಳು ವಿಮರ್ಶಕರು ಆದ 'ರಾಮಲಿಂಗಪ್ಪ'ರವರು 'ಎನ್ನಂತರಂಗದ ಆತುಮ'ವನ್ನು ಪ್ರಾಮಾಣಿಕವಾಗಿ ಪರಚಿಯಿಸುತ್ತ, 'ಹರೀಶ್'ರವರ ಬರವಣಿಗೆಯ ಬಗ್ಗೆ ಒಂದೆರಡು ಮಾತುಗಳನ್ನು ಆಡಿದರು. ಈ ವಿಮರ್ಶೆಯಲ್ಲಿ ಕೆಲವರ ಬಗೆಗಿನ ಲೇಖನದಲ್ಲಿರುವ ಸೌಮ್ಯತೆ ಮತ್ತು ಕೆಲವಲ್ಲಿ ಇರುವ ಆಕ್ರಮಣಕಾರಿ ರೂಪದ ಬಗ್ಗೆ ಪ್ರಶ್ನಿಸಿದರು. ಇದಕ್ಕುತ್ತರವಾಗಿ, ತಾನು ಅವರ ಬಗ್ಗೆ ಮಾಡಿದ ಅಧ್ಯಯನದ ಮೇರೆಗೆ, ಆ ಸಮಯದಲ್ಲಿ ತಮ್ಮ ಮನಸಿನಲ್ಲಿ ಅವರ ಬಗ್ಗೆ ಮೂಡಿದ ಭಾವನೆಯನ್ನು ಲೇಖನ ರೂಪಕ್ಕೆ ತಂದಿರುವುದಾಗಿ ಹರೀಶ್ ಉತ್ತರಿಸಿದರು. ಹರೀಶ್ ಈ ಮುಂಚೆ ಕ್ರೈಸ್ಟ್ ಕಾಲೇಜಿನ ಕನ್ನಡ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ನೆಚ್ಚಿನ ಅಧ್ಯಪಾಕರಗಿದ್ದವರು, ಈಗ ಒಂದು ಐ. ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ. ಕ್ರೈಸ್ಟ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳ ಬಗ್ಗೆ 'ಆರ್ಕುಟ್'ನಲ್ಲಿ ಒಂದು ಕಾಮ್ಮುನಿಟಿ ಆರಂಭಿಸಿದ್ದಾರೆ.
http://www.orkut.co.in/Main#Community.aspx?cmm=23263779

ಕೆ. ವಿ. ನಾಗರಾಜುರವರು ತಮ್ಮ ಭಾಷಣದಲ್ಲಿ ಇಬ್ಬರು ವಿಮರ್ಶಕರು ನೀಡಿದ ಪ್ರಾಮಾಣಿಕ ಪರಿಚಯವನ್ನು ಶ್ಲಾಘಿಸಿದರು. 'ಸಂಸ್ಕೃತಿ'ಎಂದರೇನು ಎಂದು ವಿವರಿಸುತ್ತ, ನೆಲಮುಟ್ಟು ಸಂಸ್ಕೃತಿ ಹಾಗು ಹರಿದು ಬಂದ ಸಂಸ್ಕೃತಿಯನ್ನು ಪರಿಚಯಿಸಿದರು. ಬಿಳಿಮಲೆಯವರ 'ಜನ ಸಂಸ್ಕೃತಿ'ಯನ್ನು ಬ್ರಹ್ಮಪುತ್ರ ದಡದವರ ನೆಲಮುಟ್ಟು ಸಂಸ್ಕೃತಿಯೆಂದು, 'ಎನ್ನಂತರಂಗದ ಆತುಮ'ವನ್ನು ಗಂಗಾ ತೀರದ ಹರಿದು ಬಂದ ಸಂಸ್ಕೃತಿಯೆಂದು ಹೋಲಿಸಿದರು.

ಕ್ರೈಸ್ಟ್ ಕನ್ನಡ ಸಂಘದವರು ಪ್ರತಿ ವರ್ಷ ನಾಲ್ಕು ಪುಸ್ತಕಗಳನ್ನು ಹೊರತರುತ್ತಿದ್ದಾರೆ, ಈ ನಿಟ್ಟಿನಲ್ಲಿ 'ಕ್ರೈಸ್ಟ್ ಕನ್ನಡ ಸಂಘ' ಹಾಗು ಕ್ರೈಸ್ಟ್ ವಿಶ್ವವಿದ್ಯಾನಿಲಯದ ಪಾತ್ರ ನಿಜವಾಗಿಯು ಶ್ಲಾಘನೀಯ. ಇವರ ಮುಂದಿನ ಪ್ರಯತ್ನಗಳು ಸಹ ಯಶಸ್ವಿಯಾಗಿ ನಡೆಯಲೆಂದು ಆಶಿಸುತ್ತೇನೆ.

ಕನ್ನಡವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ಅಧ್ಯಯನ ಮಾಡುವ ವಿಧ್ಯಾರ್ಥಿಗಳು ಈಗಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ಮಾತ್ರ ಎಲ್ಲರಲ್ಲೂ ವಿಷಾದ ಎದ್ದು ಕಾಣುತಿತ್ತು.

Rating
No votes yet

Comments