ಜಯ ಜಯ ಜಗದಂಬಿಕೆ....

ಜಯ ಜಯ ಜಗದಂಬಿಕೆ....

ಕೆಳದಿಯ ಆಸ್ಥಾನ ಕವಿ ಲಿಂಗಣ್ಣ. ಈತನ ನಂತರದ ವಂಶಸ್ಥರೆಲ್ಲರಿಗೂ ಕವಿ ಎಂಬ ಉಪಾದಿ ಮುಂದುವರೆದಿರುವುದು ವಿಶೇಷ. ಕ್ರಿ.ಪೂ.1750 ರಲ್ಲಿದ್ದ ಈ ಕವಿಯ ಮುಖ್ಯ ಕ್ಋತಿ ಎಂದರೆ "ಕೆಳದಿ ನ್ಋಪ ವಿಜಯ" - ಕೆಳದಿಯ ಸಮಗ್ರ ಇತಿಹಾಸದ ಕನ್ನಡಿ. ಈತರ ಇತರ ಕ್ಋತಿಗಳೆಂದರೆ, ಶಿವಪೂಜಾದಪಱಣ, ದಕ್ಷಾಧ್ವರ ವಿಜಯ, ಪಾವಱತಿ ಪರಿಣಯ, ಶಿವಕಲ್ಯಾಣ ಮುಂತಾದವು. ಈ ಕ್ಋತಿಗಳಲ್ಲಿ ಅಳವಡಿಸಿರುವ ಅನೇಕ ಸಂಗೀತ ರಚನೆಗಳೂ ಕೂಡ ಗಮನ ಸೆಳೆಯುತ್ತವೆ; ಕವಿಗೆ ಇದ್ದ ಸಂಗೀತ ಮಾಹಿತಿಯ ಬಗ್ಗೆ ಕೂಡ ಬೆಳಕು ಚೆಲ್ಲುತ್ತದೆ. ಭ್ಐರವಿ ರಾಗದಲ್ಲಿರುವ ಅಂತಹ ಒಂದು
ಕ್ಋತಿಯನ್ನು ಇಲ್ಲಿ ಮಾಹಿತಿಗಾಗಿ ನೀಡಿದೆ:

ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ | ಮುನಿಭಾವಿತೆ |
ಧರಣೀಧರ ವರಜಾತೆ |
ಬಾಲೆ ಸಕಲ ಜಗನ್ಮೋಹಿನಿ | ಸಿಂಹ ವಾಹಿನಿ |
ಲಾಲಿತ ಗಣಪ ಸೇನಾನಿ ||

ಸ್ಮೇರಾನನ ವಿಹಸಿತ ಶಶಿಬಿಂಬೆ |
ಚಾರು ನಯನ ಜಿತ ಮದನ ಕಳಂಬೆ || 1 ||

ನಿಗಮಾಗಮ ನುತ ಮಹಿಮ ಸಮಾಜೆ |
ಜಗದಭಿವಂದಿತ ಪಾದಪಯೋಜೆ || 2 ||

ಚಂದ್ರಶೇಖರ ಸಹಚಾರಿಣಿ | ಸೌಖ್ಯ ಕಾರಿಣಿ |
ಇಂದ್ರಾದಿವಂದ್ಐ ಶವಾಱಣಿ ||

Rating
No votes yet