ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
ಇದೀಗ ಸಂಪದದಲ್ಲಿ ಹೊಸ ನಮೂನೆಯ ಅಡುಗೆಗಳು ಆರಂಭವಾಗಿದೆ. ನಾನೂ ಅಡುಗೆಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿರುವುದರಿಂದ ನೀವೂ ಯಾವತ್ತೂ ತಿನ್ನದ ಜುಂ ಜುಂ ಕೇಸರಿ ಬಾತ್ ಹೇಳಿಕೊಡುತ್ತಿದ್ದೇನೆ.
ಸಾಮಾಗ್ರಿಗಳು
1/2 ಲೀ ಹರಳೆಣ್ಣೆ
1ಕೆಜಿ ದಪ್ಪ ರವೆ ಅಥವಾ ಅಕ್ಕಿ ಹಿಟ್ಟು ( ಮನೆಯಲ್ಲಿ ತಿನ್ನುವವರ ಸಂಖ್ಯೆಯ ಮೇರೆ)
1/4 ಕೆಜಿ ತುಪ್ಪ
10ಗ್ರಾಂ ಕುಂಕುಮ ಅಥವಾ ಅರಿಸಿನ (ನಿಮ್ಮ ಆಯ್ಕೆ)
ಒಂದು 50ಗ್ರಾಂ ಮೆಂತ್ಯ ಹಾಗೂ ಸಾಸುವೆ
ಕೆಲವೇ ಮೆಣಸಿನ ಕಾಯಿ
ಮಾಡುವ ವಿಧಾನ
ಮೊದಲು ಹರಳೆಣ್ಣೆಯನ್ನು ಬಾಣಲೆಯಲ್ಲಿ ಇಟ್ಟು ಗ್ಯಾಸ್ ಅಥವಾ ಸೌದೆ ಒಲೆಯಲ್ಲಿ ಬೇಯಸಿ. ಕೊತ ಕೊತ ಕುದಿಯಲು ಆರಂಭಿಸಿದ ನಂತರ ಒದ್ದೆ ಬಟ್ಟೆಯಿಂದ ಕೆಳಗಿಳಿಸಿ. ನಂತರ ರವೆಯನ್ನು ಮತ್ತೊಂದು ಬಾಣಲೆಯಲ್ಲಿ ಹಾಕಿ ಚಟ ಚಟ ಅನ್ನುವವರೆಗೆ ಹುರಿಯಿರಿ. ನಂತರ ಅದನ್ನು ಇಕ್ಕಳದಿಂದ ಕೆಳಗೆ ಇಳಿಸಿ. ಗೋಡಂಬಿ ದ್ರಾಕ್ಷಿ ಬದಲು ಮೆಂತ್ಯ ಹಾಗೂ ಸಾಸುವೆ ಹಾಕಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ಇದನ್ನು ಸಣ್ಣ ಸವಟಿನಲ್ಲಿ ಹಾಕಿಕೊಂಡು ತುಪ್ಪದಲ್ಲಿ ಹರಿಯಿರಿ. ಸಾಸುವೆ ಮುಖಕ್ಕೆ ಸಿಡಿಯಬೇಕು. ಚಿಟ ಚಿಟ ಅಂತಾ. ಅಲ್ಲಿಯವರೆಗೂ ಕಾಯಿರಿ. ಹಾಗೇ ಸಣ್ಣ ಗಾಯಗಳಾಗಬೇಕು. ಇಲ್ಲದೇ ಹೋದಲ್ಲಿ ರುಚಿ ಹಾಳಾಗಬಹುದು. ಅದನ್ನೂ ಕೆಳಗಿಳಿಸಿ. ಅರಿಸಿನ ಅಥವಾ ಕುಂಕುಮ ಹಾಕುವುದರಿಂದ ಬಣ್ಣ ಬರುತ್ತದೆ. ಕಾಮಾಲೆ ಇರುವವರಿದ್ದರೆ ಯಾವುದಾದರೂ ಹಾಕಿ. ಯಾಕೆಂದರೆ ಅವರಿಗೆ ಎಲ್ಲವೂ ಹಳದಿಯಾಗೇ ಕಾಣುತ್ತದೆ. ಮೆಣಸಿನ ಕಾಯಿ ಚೂರುಗಳನ್ನು ಹಾಕುವುದರಿಂದ ಮೈಯೆಲ್ಲಾ ಜುಂ ಎನ್ನುವುದರಿಂದ ಹಾಕಲೇಬೇಕು. ಸುಗರ್ 400 ಪಾಯಿಂಟ್ ಇದ್ರೆ 100ಕ್ಕೆ ಬರುತ್ತೆ. ಇದೀಗ ಕಾದ ಹರಳೆಣ್ಣೆಗೆ ಮೇಲೆ ತಯಾರಿಸಿದ ಎಲ್ಲಾ ಪದಾರ್ಥಗಳನ್ನು ಹಾಕಿ ಗೊಟಾಯಿಸಿ. ನಂತರ ಬಾಲ್್ಗಳ ಮಾದರಿಯಲ್ಲಿ ಉಂಡೆಯನ್ನಾಗಿ ಮಾಡಿ ಬಡೆಸಿ. ಇದೀಗ ಜುಂ ಜುಂ ಕೇಸರಿ ಬಾತ್ ರೆಡಿ.
ಇದನ್ನು ನೀವು ಖುದ್ದಾಗಿ ಬಡಿಸಲೇ ಬೇಕೆಂದೇನಿಲ್ಲ. ಅಡುಗೆ ಮನೆಯಿಂದಲೇ ಬಾಲ್ ರೀತಿಯಲ್ಲಿ ಎಸೆದರೆ ತಿನ್ನುವವರು ಅಡ್ಡ ತಟ್ಟೆ ಹಿಡಿದರೆ ಸಾಕು ತಾನಾಗಿಯೇ ಅದಕ್ಕೆ ಅಂಟಿಕೊಳ್ಳುತ್ತದೆ. ಅಕಸ್ಮಾತ್ ತಿನ್ನಲು ಮರೆತರೆ. ಯಾವುದಾದರೂ ಜಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದರೆ. ಅಲ್ಲಿ ಎಂ ಸೀಲ್ ಮಾದರಿಯಲ್ಲಿ ಬಳಸಬಹುದು. ಚೆನ್ನಾಗಿ ಒತ್ತಿ ಅಂಟಿಸಿದರೆ ನೀರು ಸೋರುವುದಿಲ್ಲ. ಕೇವಲ 10ರೂಪಾಯಿಗೆ ನಿಮಗೆ ಎಂ ಸೀಲ್ ಸಿಕ್ಕಂತಾಗುತ್ತದೆ. ಹಣ ಉಳಿತಾಯ. ಆಮೇಲೆ ಮುಖ್ಯವಾದ ವಿಷಯವೇನೆಂದರೆ ತಿನ್ನುವವರ ಪಕ್ಕದಲ್ಲಿ ಮೊದಲೇ ಚೊಂಬನ್ನು ಇಡಿ. ಹರಳೆಣ್ಣೆಯಿಂದ ಈ ಬಾತ್್ನ್ನು ಮಾಡಿರುವುದರಿಂದ ತಿಂದ ತಕ್ಷಣವೇ ಕೆರೆತಾವ ಹೋಗ ಬೇಕಾಗುತ್ತದೆ. ಹಾಗಾಗಿ ಗ್ಯಾಸ್ ಆಗುವ ಪ್ರಮೇಯವೇ ಇಲ್ಲ. ಭಾರತದಲ್ಲಿ ಇದು ಸಾಕಷ್ಟು ಪ್ರಸಿದ್ದಿಯಾಗಿದ್ದು. ಅಮೇರಿಕಾದ ಕೆಲವು ರೆಸ್ಟೋರೆಂಟ್್ಗಳಲ್ಲಿ ಭಾರೀ ಡಿಮ್ಯಾಂಡ್ ಬಂದಿದೆಯಂತೆ. ಹಾಗಾಗಿ ನಾವು ಪೇಟೆಂಟನ್ನು ಇನ್ನು ಯಾರಿಗೂ ಕೊಟ್ಟಿಲ್ಲ.
ನೀವು ತಿನ್ನಿ. ಕೆರೆತಾವ ಹೋಗಿ - ಇದುವೇ ಜುಂ ಜುಂ ಕೇಸರಿಬಾತ್. ಮಾಡಲು ಮರೆಯದಿರಿ. ತಿನ್ನಲು ಕಾತುರರಾಗಿ
ಸೂಚನೆ
1. ಹರಳೆಣ್ಣೆ ಆದಷ್ಟು ಗಟ್ಟಿಯಾಗಿರಲಿ
2. ಕಾಯಿಸುವ ಮುನ್ನ ಗ್ಯಾಸ್ ಫುಲ್ ಇರಬೇಕು. ಇಲ್ಲದೇ ಹೋದಲ್ಲಿ ಮಾಡುವ ವಿಧಾನ ಮರೆಯಬಹುದು. ಕಟ್ಟಿಗೆಯಾದರೆ ಒಣ ದಿಂಡಿಗ ಕಟ್ಟಿಗೆಯನ್ನೇ ಬಳಿಸಿ. ಹಸಿಯಾದರೆ ನಿಮ್ಮ ಕಣ್ಣಿನ ಸೌಂದರ್ಯ ಎಕ್ಕುಟ್ಟಿ ಹೋಗುತ್ತದೆ. ಮಡ್ರಾಸ್ ಐ ಇದ್ದರೆ ಪರವಾಗಿಲ್ಲ.
3. ಆದಷ್ಟೂ ಸಾಮಾನುಗಳನ್ನು ಇಲಿ ಅಥವಾ ಹೆಗ್ಗಣದಿಂದ ದೂರ ಇಟ್ಟಿರಬೇಕು.ಇಲ್ಲದೇ ಹೋದಲ್ಲಿ ಪ್ರಾಬ್ಲಮ್ ನಿಶ್ಚಿತ. ಯಾಕೆಂದರೆ ನೀವು ನಿಗರ್್ಕಂಡ್ ಬಿಡ್ತೀರಾ. ಆಮೇಲೆ ನಿಮ್ಮನೆ ಮುಂದೆ ಹೊಗೆ ಹಾಕಬೇಕಾಗುತ್ತದೆ. ಸಂಬಂಧಿಕರು ಬಂದರೆ ಮತ್ತಷ್ಟು ಖರ್ಚು.
4. ಬಾಲ್ ಮಾದರಿಯಲ್ಲಿ ಮಾಡುವಾಗ ಕನಿಷ್ಟ ಪಕ್ಷ ಕ್ರಿಕೆಟ್ ಬಾಲ್ ನಂತೆ ಇರಬೇಕು. ಇಲ್ಲದೇ ಹೋದರೆ ನೀವು ಎಸೆದಾಗ ಅಪಾಯ ಸಂಭವವಿರುತ್ತದೆ. ಆದಷ್ಟು ಕೊಡುವವರಿಗೆ ಹೆಲಿಮೆಟ್ ಹಾಕಲು ಹೇಳಿ.
5. ಯಾರೂ ತಿನ್ನದಿದ್ದರೆ ಹಸುವಿಗೆ ಅಥವಾ ಮತ್ತಿತರ ಪ್ರಾಣಿಗೆ ಹಾಕಬೇಡಿ. ಯಾಕೆಂದರೆ ಅವೂ ಸಾನೇ ಹೊಗೆ ಹಾಕಿಸ್ಕಂಡ್ ಬಿಡ್ತವೆ
6. ಆದಷ್ಟು ತಿನ್ನುವವರ ಪಕ್ಕ ಚೊಂಬನ್ನು ಇಟ್ಟೇ ಇರಿ. ಅವರುಗಳು ಯಾವ ಸಮಯದಲ್ಲಾದರೂ ನಿಮ್ಮ ಮನೆಯಿಂದ ಎದ್ದು ಹೋಗಬಹುದು. ಹಾಗೇ ಬಾಗಿಲನ್ನು ತೆಗೆದೇ ಇರಿ. ಒಂದು ಎಲ್ಡೋಪಾರ್ ಮಾತ್ರೆಯನ್ನು ಬಾತ್ ನೊಂದಿಗೆ ನೀಡಿದರೆ ಮತ್ತಷ್ಟು ಉತ್ತಮ.
7. ಮಾಡುವಾಗ ನೀವು ಹುಷಾರಾಗಿರಿ. ಕಾರಣ ನಿಮಗೂ ಜುಂ ಜುಂ ಅಂದು ಎಣ್ಣೆ ಮೈ ಮೇಲೆ ಬಿದ್ದರೆ. ಆಮೇಲೆ ನಿಮ್ಮನ್ನು ಐಸಿಯು ನಲ್ಲಿ ಇಡಬೇಕಾಗುತ್ತೆ. ಅವಾಗ ನೀವು ರುಂ ರುಂ ಆಗಿರುತ್ತೀರಾ.
8. ಹಸೀ ಮೆಣಸಿನ ಕಾಯಿಯನ್ನು ಇಲಿಗೆಮಣೆಯಿಂದ ಕತ್ತರಿಸಬೇಡಿ. ಆದಷ್ಟೂ ಚಾಕುವಿನಿಂದಲೇ ಕತ್ತರಿಸಿ. ಸಣ್ಣ ಪೀಸ್ ಮಾಡಲು ಸುಲಭ.
9. ಹಸೀ ಮೆಣಸಿನ ಕಾಯಿ ಹೆಚ್ಚಾಗಿ ಹಾಕುವುದರಿಂದ ಪೈಲ್ಸ್ ಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆಯಾಗಿ ತಿನ್ನುವವರಿಗೆ ಔಷಧಿ ನೀಡಿ ನಂತರ ನೀಡಿದರೆ ಉತ್ತಮ.
10. ಹಳಸಿದ ಜುಂ ಜುಂ ಬಾತನ್ನು ವಾಷ್ ಬೇಸಿನ್ ಅಥವಾ ಬಚ್ಚಲು ಮನೆಯಲ್ಲಿ ಸೋರುತ್ತಿರರುವ ಜಾಗಕ್ಕೆ ಮೇಣದಂತೆ ಬಳಸಿ.
ಮತ್ತಿನ್ಯಾಕೆ ತಡ ಆರಂಭಿಸಿ. ತಿನ್ನಿ ಕೆರೆತಾವ ಓಡಿ. ಇದುವೇ ಜುಂ ಜುಂ ಜುಂ ಮಹಿಮೆ. ಮೊದಲು ನೀವು ಮಾಡಿ ಎಂಜಾಯ್ ಮಾಡಿ. ಆಮೇಲೆ ಮತ್ತೊಬ್ಬರಿಗೆ ತಿಳಿಸಿ.
ಜೈ ಜುಂ ಜುಂ
Comments
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by gopinatha
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by ಗಣೇಶ
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by komal kumar1231
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by Jayanth Ramachar
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by kamalap09
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by sharadamma
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ
In reply to ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ by kamalap09
ಉ: ಜುಂ ಜುಂ ಕೇಸರಿಬಾತ್ - ವಿಶಿಷ್ಟ ಅಡುಗೆ