ಝೆನ್ - ನಿಮಗೆಷ್ಟು ಗೊತ್ತು೟

ಝೆನ್ - ನಿಮಗೆಷ್ಟು ಗೊತ್ತು೟

ಯಾವುದೇ ಆಧಾರಗ್ರಂಥವಿಲ್ಲದೇ ಕೇವಲ ಮುಂಡಿಗೆ, ಒಗಟು, ಪ್ರಸಂಗಗಳ ಪರಂಪರೆಯನ್ನು ಮಾತ್ರ ಹೊಂದಿರುವ ಝೆನ್ ಯಾವುದೇ ಪೂರ್ವಾಗ್ರಹವಿಲ್ಲದೇ ಜೀವನಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಯಾವ ಹಂತದಲ್ಲೂ ಸಹ ಹೀಗೆ ಜೀವಿಸು ಎಂಬುದಾಗಿ ಹೇಳುವುದಿಲ್ಲ. ಲೌಕಿಕ ಬದುಕನ್ನು ಜೀವಿಸುತ್ತಲೇ, ಬದುಕಿನೆಲ್ಲ ದ್ವಂದ್ವಗಳನ್ನು ಅನುಭವಿಸುತ್ತಾ, ಎಲ್ಲವನ್ನೂ ಸ್ವೀಕರಿಸುತ್ತಾ ಬದುಕುವ ಪರಿಯೇ ಝೆನ್.
ಆಸಕ್ತಿರಿಗೊಂದು ಝೆನ್ ಕಥೆ.............
ಗುರು ಇಕ್ಕ್ಯೂ, ಇನ್ನೂ ಬಾಲಕನಾಗಿದ್ದಾಗಲೇ ಭಾರೀ ಬುದ್ಧಿವಂತ ಎನಿಸಿಕೊಂಡಿದ್ದ. ಒಮ್ಮೆ ಆತ, ಅಚಾತುರ್ಯದಿಂದ ತನ್ನ ಗುರುವಿನ ಚಹಾ ಬಟ್ಟಲನ್ನು ಒಡೆದುಹಾಕಿದ. ಅದು, ಗುರುವಿಗೆ ವಂಶಪಾರಂಪರ್ಯವಾಗಿ ದೊರಕಿದ್ದ ಅಮೂಲ್ಯವಾದ ಬಟ್ಟಲು. ಇದರಿಂದ ಇಕ್ಕ್ಯೂ ತನ್ನಲ್ಲೇ ಕ್ಷೋಭೆಗೊಂಡ. ಏನು ಮಾಡುವುದೆಂದು ತೋಚದೇ ದಿಙ್ಮೂಢನಾಗಿ ಕುಳಿತಿದ್ದ ಹೊತ್ತಿನಲ್ಲೇ, ಆ ಕಡೆಯಿಂದ ಗುರು ಬರುತ್ತಿರುವ ಸಪ್ಪಳ ಕೇಳಿಸಿತು. ತಕ್ಷಣವೇ ಆತ, ಆ ಬಟ್ಟಲಿನ ಚೂರುಗಳನ್ನು ತನ್ನ ವಸ್ತ್ರದಲ್ಲಿ ಅಡಕಿಸಿಕೊಂಡ.
ಗುರು ಬರುತ್ತಿರುವಂತೆ, ಗುರುವೇ, ವಸ್ತುಗಳು ಯಾಕೆ ನಾಶವಾಗುತ್ತವೆ ೟ ಎಂದು ಪ್ರಶ್ನಿಸಿದ.
ವಸ್ತುಗಳು ನಾಶವಾಗುವುದು ತೀರಾ ಸಹಜವಪ್ಪ. ವಸ್ತು ನಾಶವಾಗುತ್ತದೆ ಮತ್ತು ಅದರಲ್ಲಿ ಬೆರೆತುಕೊಂಡ ಮೂಲದ್ರವ್ಯಗಳು ವಿಕೀರ್ಣಗೊಂಡು ತಮ್ಮ ಸ್ವರೂಪಕ್ಕೆ ಮರಳುತ್ತವೆ. ಇದು ನಿಸರ್ಗ ಧರ್ಮ. ಕಾಲಬಂದಿತೆಂದರೆ, ಯಾವ ವಸ್ತುವೇ ಸರಿ, ಯಾವ ವ್ಯಕ್ತಿಯೇ ಸರಿ, ಹೋಗಲೇಬೇಕು... ಎಂದ ಗುರು.
ಬಾಲಕ ಇಕ್ಕ್ಯೂಈಗ ಬಟ್ಟಲಿನ ಚೂರುಗಳನ್ನು ಹೊರಕ್ಕೆ ತೆಗೆದು ಹೇಳಿದ - ಗುರುವೇ, ನಿಮ್ಮ ಬಟ್ಟಲಿಗೆ ಕಾಲ ಬಂದಿತ್ತು.
..................
ಝೆನ್ - ಲೇ. ಕೆ.ವಿ.ಸುಬ್ಬಣ್ಣ ................ಹೆಚ್ಚಿನ ಕಥೆಗಳು ಮತ್ತು ಒಗಟುಗಳು ಲಭ್ಯ
..................
ಸಹೃದಯರ ಸಂಗ್ರಹದಲ್ಲಿರಬಹುದಾದ ಝೆನ್ ವಿಚಾರಗಳ ಪ್ರತಿಸ್ಪಂದನವಿರಲಿ. ಪ್ರತಿಕ್ರಿಯಿಸಿ.
.....................................................................................................ಪ್ರಸಾದ್, ನಾಗಮಂಗಲ.

Rating
No votes yet

Comments