ಟೆಕ್ ಸುದ್ದಿ - ನಿಮಗಿದು ಗೊತ್ತೇ? -೧

ಟೆಕ್ ಸುದ್ದಿ - ನಿಮಗಿದು ಗೊತ್ತೇ? -೧

ಗೂಗಲ್ ನ ಮೊರೊಕ್ಕೊ ವೆಬ್ಸೈಟ್ ಹ್ಯಾಕ್ ಆಗಿತ್ತಂತೆ

 

ಹೌದು, ಮೇ ೧೦ರಂದು Google.co.ma PAKbugs ಅನ್ನೋ ಹ್ಯಾಕರ್ ಗಳಿಂದ ಹ್ಯಾಕ್ ಆಗಿತ್ತಂತೆ. ಈಗ ಸಧ್ಯಕ್ಕೆ ಇದು ಸರಿಯಾಗಿ ಕೆಲಸಮಾಡ್ಲಿಕ್ಕೆ ಪ್ರಾರಂಭಿಸಿದೆ. ಆದ್ರೆ ಶನಿವಾರ ಬಹಳಷ್ಟು ಗಂಟೆ ಈ ತೊಂದರೆ ಇದ್ದಿದ್ರಿಂದ ಸಾಕಷ್ಟು ಜನರಿಗೆ ಇದರ ಸ್ಕ್ರೀನ್ ಶಾಟ್ ತೆಗೆದು ಇಂಟರ್ನೆಟ್ ನಲಿ ಹಾಕ್ಲಿಕ್ಕೆ ಬಹಳಾನೇ ಸಮಯ ಸಿಕ್ತು ಅನ್ನಿ. ಅದರ ಜೊತೆ ವಿಡಿಯೋಗಳು ಬೇರೆ. Google Morocco hack  ಅಂಥ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿ ನಿಮಗೇ ಗೊತ್ತಾಗತ್ತೆ. ಶನಿವಾರ ಗೂಗಲ್ ನ ಸರ್ಚ್ ಬದಲು ಜನರಿಗೆ ಕಂಡಿದ್ದು ಕೆಳಕಂಡ ಎರಡು ಸಾಲುಗಳು.

“HackeD By PAKbugs. We are ZombiE_KsA Cyber Criminal spo0fer x00mx00m”.

ಗೂಗಲ್ ನ ಈ ವೆಬ್ಸೈಟನ್ನು  ಬೇರೆಯದೇ ಸರ್ವರ್ ಕಡೆಗೆ ದಾರಿತೋರಿಸಿದ (ಡಿ.ಎನ್.ಎಸ್ ಹ್ಯಾಕ್) ಹ್ಯಾಕರ್ ಗಳು , ಗೂಗಲ್ ನ ಸರ್ಚ್ಎಂಜಿನ್ ಬೇಕೆಂದು ಬಂದವರಿಗೆ ಮೇಲ್ಕಂಡ ಸಂದೇಶದ ದರ್ಶನ ನೀಡಿದರು. ಗೂಗಲ್ ತನ್ನ google.co.ma ಬಳಕೆದಾರರನ್ನು google.com ಕಡೆ ದೌಡಾಯಿಸಿದರೂ, ಗೂಗಲ್ ಮೊರೊಕ್ಕೊ ಮತ್ತೆ ಸರಿಯಾಗಿ ಕೆಲಸಮಾಡ್ಲಿಕ್ಕೆ ಬಹಳ ಸಮಯ ಬೇಕಾಯ್ತು. 


PAKbugs.com ಪಾಕಿಸ್ತಾನೀ ಹ್ಯಾಕರ್ಗಳ ಫೋರಂ ಆಗಿದ್ದು, ಈ ಹ್ಯಾಕ್ನ ಬಗ್ಗೆ ತನ್ನಂತಾನೇ ಬಹಳಷ್ಟು ಹೊಗಳಿಕೊಂಡಿದೆ ಈ ಕೊಂಡಿ ನೋಡಿ.

ಪ್ರಖ್ಯಾತ ಟೆಕ್ ಬ್ಲಾಗ್ ಟೆಕ್ ಕ್ರಂಚ್ ನ ಪ್ರಕಾರ ಹ್ಯಾಕರ್ಗಳು, .ma ವೆಬ್ಸೈಟುಗಳನ್ನು ನೊಂದಣಿ ಮಾಡಿಕೊಳ್ಳುವ NIC.ma ನ ಡಿ.ಎನ್.ಎಸ್ (ಡೊಮೈನ್ ನೇಮ್ ಸರ್ವೀಸ್) ಸರ್ವರ್ ನ ಒಳಹೊಕ್ಕುವುದರ ಮೂಲಕವೇ  ಈ ಕೆಲಸ ಮಾಡಿರಬೇಕು ಎಂದು ಅಂದಾಜು ಮಾಡಿದೆ.

 

Rating
No votes yet

Comments