ಡಿಸಿ - ಡಿಸಿ ಕನ್ವರ್ಟರ್

ಡಿಸಿ - ಡಿಸಿ ಕನ್ವರ್ಟರ್

ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧಿಕ ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ ( power) ಪೂರೈಕೆಯಾಗಬೇಕಾಗುತ್ತೆ.

  • ಇಂತಹ ಮಿಮ್ಬಲ್ಮೆ (?!) ಉಪಕರಣಗಳು (ಇಲೆಕ್ಟ್ರಾನಿಕ್ items) ಸಾಮಾನ್ಯವಾಗಿ ಹಲವು ಉಪ ಸರ್ಕೀಟ್ ಗಳನ್ನು ಹೊಂದಿರುತ್ತೆ ಮತ್ತು ಅವು ಒಂದಕ್ಕಿಂತ ಒಂದು ಬೇರೆ ಬೇರೆ ಶಕ್ತಿ ಪೂರೈಕೆ ( power supply )ಯಿಂದ ಕೆಲಸ ಮಾಡುವಂತವು ಆಗಿರಬಹುದು.

ಇಂತಹ ಸಂದರ್ಭದಲ್ಲಿ ಇರುವ ಒಂದು ವೋಲ್ಟೇಜು ಮಟ್ಟವನ್ನು ಉಪ ಸರ್ಕ್ಯುಟ್ ಗಳಿಗೆ ಬೇಕಾದ ಬೇರೆ ಬೇರೆ ವೋಲ್ಟೇಜು ಮಟ್ಟಕ್ಕೆ (ಗಳಿಗೆ) ಬದಲಾಯಿಸುವ ಕೆಲಸವನ್ನು ಈ DC DC converter ಮಾಡುತ್ತೆ.

  • ಈ ಸಾಧನಗಳು ಬ್ಯಾಟರಿಯಲ್ಲಿನ ಕಲೆಹಾಕಿದ ಶಕ್ತಿಯನ್ನು ಬಳಸಿಕೊಂಡು ಕೆಲಸಮಾಡುತ್ತವೆ. ಮತ್ತು ಈ ಶಕ್ತಿಯು ಹೆಚ್ಚು ಬಳಸಲ್ಪಟ್ಟಂತೆ ಬ್ಯಾಟರಿಯ ವೋಳ್ಟೇಜು ಕಡಿಮೆ ಆಗುತ್ತಾ ಹೋಗುತ್ತೆ.

ಇಂತಹ ಸಂದರ್ಭದಲ್ಲಿ.. ಭಾಗಶ: ಕಡಿಮೆಯಾದ ಬ್ಯಾಟರಿಯ ವೋಳ್ಟೇಜನ್ನು, DC DC converter ಮೊದಲಿನ ಮಟ್ಟಕ್ಕೆ ತರುತ್ತೆ. ಹಾಗಾಗಿ ಎರೆಡೆರಡು ಬ್ಯಾಟರಿ ಬಳಸುವ ಅತ್ವ ಮತ್ತೆ ಚಾರ್ಜ್ ಮಾಡುವ ಕೆಲಸ ತಪ್ಪುತ್ತೆ.

….ಒಂದು ಸರ್ಕೀಟ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು Voltage Doubler ಹೇಗೆ ಕೆಲಸ ಮಾಡುತ್ತೆ ಅಂತ ಮುಂದೆ ಸೇರುಸ್ತೀನಿ.

 

...

ಕೊಸರು

ಮೊನ್ನೆ ಒಮ್ಮೆ ವಿಕಿಪೀಡಿಯದಲ್ಲಿ DC DC converter ಬಗ್ಗೆ ನೋಡ್ತಾ ಇದ್ದಾಗ,  ಈ ವಿಷಯದ ಬಗ್ಗೆ ತಮಿಳು ವಿಕಿಪೀಡಿಯ ದಲ್ಲೂ ಮಾಹಿತಿ ( ಸ್ವಲ್ಪವಾದರೂ )  ಇರುವುದು ಆಶ್ಚರ್ಯ ತರಿಸಿತು. ಸರಿ.. ನಾನೂ ಕನ್ನಡ ದಲ್ಲಿ ಒಮ್ಮೆ ಪ್ರಯತ್ನ ಮಾಡುವ ಅಂತ ಈ ಪ್ರಯತ್ನ.

ಸ್ವಲ್ಪ ವಿಶೇಷ ಅಂದ್ರೆ ನಾನು ಒಂದು ಹೆಜ್ಜೆ ಮುಂದೆ ಇಟ್ಟು ಸರ್ಕೀಟ್ ಹಂತದಲ್ಲೂ , ಅಂದರೆ ಕಾರ್ಯ ರೂಪಕ್ಕೆ ತರುವ ಹಂತದಲ್ಲೂ ( implementation level ) ಬರೆಯಬೇಕು ಅಂತ ಈ ಬರಹ. 

Rating
No votes yet