ಡುಂಡಿರಾಜರೇ, ರಜೆ ಹಾಕಿ!

ಡುಂಡಿರಾಜರೇ, ರಜೆ ಹಾಕಿ!

ರೀ
ಡುಂಡಿರಾಜರೇ,
ಒಪ್ಪುತ್ತೇನೆ ನೀವು
'ಹನಿಗವನಗಳ ರಾಜರೇ';

ಸ್ವಾಮೀ, ದಯವಿಟ್ಟು
ಒಂದೆರಡು ತಿಂಗಳ
ರಜೆ ಹಾಕಿ ಬಿಡಿ,
ನಮ್ಮಂತವರಿಗೂ
ನಾಲ್ಕಾರು ಕವನಗಳ
ರಚಿಸಲು ಬಿಟ್ಟು ಬಿಡಿ;

ನಮ್ಮ ಭಾವನೆಗಳಿಗೆ
ನಾವು ಕವನಗಳ
ರೂಪ ಕೊಡುವ
ಮೊದಲೇ,
ನಾವೆಣಿಸಿದ್ದೆಲ್ಲಾ
ನಿಮ್ಮ ಹೆಸರಿನಲಿ
ಪ್ರಕಟವಾಗಿರುತ್ತವೆ
ಆಗಲೇ!
*-*-*-*-*
(೦೧ ನವಂಬರ್ ೨೦೦೨ ರಂದು ಬರೆದದ್ದು, ಕನ್ನಡಧ್ವನಿಯಲ್ಲಿ ಈಗಾಗಲೇ ಪ್ರಕಟವಾಗಿತ್ತು)
(ಇದಕ್ಕೆ ಪ್ರತಿಕ್ರಿಯಿಸಿದ್ದ ಡುಂಡಿರಾಜರು, ನಾನು ರಜೆ (ಕಛೇರಿಗೆ) ಹಾಕಿದರೆ ಇನ್ನೂ ಹೆಚ್ಚು ಹೆಚ್ಚು ಕವಿತೆ ಬರೆದು ಬಿಡಬಹುದು ಅಂತ ಅಂದಿದ್ದರು).

Rating
No votes yet

Comments