ತಂದೆಯ ಕಹಿ ನೆನಪು

ತಂದೆಯ ಕಹಿ ನೆನಪು

ಸುರೇಶ್, ಶಾಮಲರವರು ಹಾಗು ಇನ್ನೂ ಅನೇಕರು ತಮ್ಮ ತಂದೆಯ ಸ್ಮರಣೇ ಮಾಡಿದ್ದಾರೆ
ಆದರೆ ನನ್ನ ಅಪ್ಪ ಎನಿಸಿಕೊಂಡ ನನ್ನ ತಾಯಿಯ ಪತಿರಾಯನಿಗೆ ಕಾಣೆಯಾದುದಕ್ಕೆ ನೂರೆಂಟು ಧನ್ಯವಾದಗಳು
ಶಾಲಾದಿನಗಳಲ್ಲಿ ಗೆಳೆಯ ಗೆಳತಿಯರೆಲ್ಲಾ ನಮ್ಮ ಅಪ್ಪ ಬೈತಾರೆ, ಅಪ್ಪ ಕೊಡಿಸ್ತಾರೆ ಹಾಗೆ ಹೀಗೆ ಹೇಳಿದಾಗಲೆಲ್ಲಾ ನಮ್ಮನ್ನು ಅಮ್ಮನನ್ನು ಚಿಕ್ಕವಯಸಿನಲ್ಲಿ
ನಡುನೀರಿನೀರಿನಲಿ ಕೈಬಿಟ್ಟು ಹೋದ ಅಪ್ಪನನ್ನು ನೆನೆಸಿಕೊಂಡು ಅಪ್ಪ ಹೀಗೂ ಇದ್ದಿರಬಹುದೆ. ಅಕಸ್ಮಾತ್ ಬಂದರೆ ಹೇಗೆ ವರ್ತಿಸುತ್ತಾರೆ ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಿದ್ದೆ
ಮರುಕ್ಷಣ ಅಪ್ಪ ಬಂದರೆ ಅಮ್ಮನಿಗೆ ಆಗಬಹುದಾಗಿದ್ದ ತೊಂದರೆ ನೆನೆಸಿಕೊಂಡು ಅಪ್ಪ ಮತ್ತೆ ಬರುವುದೇ ಬೇಡ ಎಂದು ಅತ್ತು ಸುಮ್ಮನಾಗುತ್ತಿದೆ
ಅಮ್ಮನಲ್ಲಿ ಅಪ್ಪನ್ನ ಕಂಡು ಖುಶಿ ಪಡುತ್ತಿದ್ದೆ
ಬೆಳೆದಂತೆಲ್ಲಾ ನಮ್ಮನ್ನು ಬೆಳೆಸಲು ಅಮ್ಮ ಪಡುತ್ತಿದ್ದ ಕಷ್ಟ ಅಮ್ಮ ಕಷ್ಟ ಪಡಲು ಕಾರಣರಾದ ಅಪ್ಪನ ಬಗ್ಗೆ ತಿರಸ್ಕಾರ ಮೂಡತೊಡಗಿತು.
ಕೊನೆಗೊಮ್ಮ್ಮೆ ಕಳೆದು ಹೋದ ಅಕ್ಕನೊಂದಿಗೆ ಅಪ್ಪ ಪ್ರತ್ಯಕ್ಷರಾದಾಗ ಈಗಾದರೂ ಅಪ್ಪನಿಗೆ ಒಳ್ಳೇ ಬುದ್ದಿ ಬಂತಲ್ಲ ಎಂಬ ಸಂತಸದೊಂದಿಗೆ ಇಲ್ಲೀವರೆಗೆ ಅಪರಿಚಿತನಾಗಿದ್ದ ವ್ಯಕ್ತಿಯನ್ನು
ಅಪ್ಪ ಎಂದು ಕರೆಯುವುದು ಹೇಗೆ ಎಂದನಿಸಿ ಆತನಿದ್ದ ಹತ್ತೂ ದಿನಗಳು ದೂರವೆ ಇರುತ್ತಿದ್ದೆ. ಅಪ್ಪ ಎಂದು ಒಮ್ಮೆಯೂ ಕರೆಯಲಿಲ್ಲ
ಆದರೆ ಹತ್ತನೇ ದಿನ ಅಮ್ಮ ನ ಸಂಬಳ ಮಾಯವಾದಾಗ ಅಪ್ಪ ಬಂದಿದ್ದು ಹಣಕ್ಕಾಗಿ ಎಂದನಿಸಿ ಎಲ್ಲೋ ಅವನ ಬಗ್ಗೆ ಇದ್ದ ಅದರ ಪ್ರೀತಿ ವಿಶ್ವಾಸ ಮರೆಯಾಗಿ ದ್ವೇಷ ಮೂಡತೊಡಗಿತು
ಆ ತಿಂಗಳು ಅಮ್ಮನ ಸಂಬಳವಿಲ್ಲದೆ ರೇಷನ್‌ಗಾಗಿ ಪರದಾಡುತ್ತಿದ್ದರೆ ಅಪ್ಪ ಮಾತ್ರ ಅಮ್ಮನ ಹಣದಿಂದ ಕುಡಿದು ತೂರಾಡಿತ್ತಿದ್ದ
ನಾವಿಬ್ಬರು (ನಾನು ನನ್ನ ಅಕ್ಕ )ಕೊನೆಗೊಮ್ಮೆ ಅಪ್ಪನ ಕುತ್ತಿಗೆ ಪಟ್ಟಿ ಹಿಡಿದು ಮನೆಯಿಂದ ಹೊರನೂಕಿದ್ದೆವು. ಇನ್ನವನ ಗೊಡವೆ ಬೇಡೆಂದು ಅಮ್ಮನೂ ನಿರ್ಧರಿಸಿದ್ದಳು
ಅವನಿಂದ ತಪ್ಪಿಸಿಕೊಳ್ಳಲು ನಾವೆಷ್ಟೋ ಮನೆ ಖಾಲಿ ಮಾಡಿದೆವೋ ಆ ಪಾಡು ಯಾರಿಗೂ ಬೇಡ.
ಬರೀ ಒಳ್ಳೇಯವರ ಬಗ್ಗೆಯೇ ಏಕೆ ಬರೆಯಬೇಕು. ಬಾಳಲ್ಲಿ ವಿಲನ್ ಆಗಿರುವ ಈತನ ಬಗ್ಗೆಯೋ ಎಲ್ಲರಿಗೂ ತಿಳಿಯಲಿ.
ಕಣ್ಣುಗಳು ತುಂಬುತ್ತಿವೆ,
ಕೈಗಳು ನಡುಗುತ್ತಿವೆ
ಸಾಕು ಇಷ್ಟೆ ಸಾಕು
ಮತ್ತೆ ಬರೆಯಲಾರೆ

Rating
Average: 4 (1 vote)

Comments