ತಾಯೇ ನಿನ್ನ ಚರಣಕೆ

ತಾಯೇ ನಿನ್ನ ಚರಣಕೆ

(ಕನ್ನಡತಿಯಾಗಿ ಹುಟ್ಟಿದ್ದಕ್ಕೆ ಹೆಮ್ಮೆ, ಧನ್ಯತೆಯನ್ನು ಅನುಭವಿಸುತ್ತಾ.... ಈ ನನ್ನ ಸಾಲುಗಳು ತಾಯಿ ಕನ್ನಡಾಂಬೆಗೆ...)
ತಾಯೆ ನಿನ್ನ ಚರಣಕೆ
ನಮಿಪೆ ಮನವು ಕುಣಿದಿದೆ
ನಿನ್ನ ಕೀರ್ತಿ ಹಾಡಲು
ಎನ್ನ ನಾಲಗೆ ಬಯಸಿದೆ|

ಕನ್ನಡ ನಾಡಿನ ಎಲ್ಲೆಡೆಯಲ್ಲೂ
ತಾಯೆ ನಿನ್ನದೆ ಗುಣಗಾನ
ನಿನ್ನ ಉದರದೊಳು ಜನಿಸಿರಲು
ಜನ್ಮವಾಯಿತಿದು ಪಾವನ|

ಒಲವಿನಿಂದಲಿ ಸಲಹಿರೆ ತಾಯೆ
ನಿನ್ನೀ ಮಕ್ಕಳನೆಂದೆಂದೂ
ಅರಿಯೆನು ನಾನು ನಿನ್ನಯ ಋಣವ
ತೀರಿಸೋ ಬಗೆ ಆವುದು ಎಂದು |

Rating
No votes yet

Comments