ತಿಪಟೂರು, ತಿಪ್ಪೇಸ್ವಾಮಿ

ತಿಪಟೂರು, ತಿಪ್ಪೇಸ್ವಾಮಿ

ಒಂದೊಂದುಸಾರಿ ಹೀಗೆ ಕೆಲವು ಹೆಸರುಗಳು 'ಇವುಗಳ ಅರ್ಥ ಏನಿರಬಹುದು?' ಎಂದು ಕಾಡಲು ಶುರುಮಾಡುತ್ತವೆ.

ತಿಪಟೂರುಮತ್ತು ತುಮಕೂರು ಎರಡರಲ್ಲೂ ಎರಡು ಪದಗಳಿಗೆ. ಊರು ಅನ್ನುವುದು ಉತ್ತರ ಪದ, ಅಥವ ನಮಗೆ ಈಗ ಅರ್ಥ ತಿಳಿಯದಿರುವ ಮೊದಲ ಪದಕ್ಕೆ ಸೇರ್ಪಡೆಯಾಗಿರುವ ಸಾಮಾನ್ಯವಾಚಕ.ಅದು ಗೊತ್ತು. ಆದರೆ ‘ತಿಪಟ' ಅಥವ ‘ತಿಪಟು', ‘ತುಮಕ' ಅಥವ 'ತುಮುಕು' ಅಂದರೆ?

ಇವು ಕನ್ನಡದಪದಗಳೋ, ಅಥವ ದ್ರಾವಿಡ ಮೂಲದ ಪದಗಳೋ, ಅರ್ಥ
ಏನು ಎಂದು ಬಹಳ ದಿನಗಳಿಂದ ಯೋಚನೆ ಮಾಡುತ್ತಲೇ ಇದ್ದೆ. ಇತ್ತೀಚೆಗೆಉಡುಪಿಯ ಗೋವಿಂದ ಪೈ
ಸಂಶೋಧನ ಕೇಂದ್ರದವರು ಬಹಳ ಹಿಂದೆಯೇ ಪ್ರಕಟಿಸಿದ ತುಳು ನಿಘಂಟನ್ನು ನೋಡುತ್ತಿರುವಾಗಈ
ಪದಗಳನ್ನೇ ಹೋಲುವ ಪದಗಳು ಕಂಡು ಆಶ್ಚರ್ಯವಾಯಿತು. ತುಳು ಭಾಷೆಯಲ್ಲಿ ಈಗ ಕನ್ನಡದಲ್ಲಿ
ಬಳಕೆ ತಪ್ಪಿರುವಎಷ್ಟೋ ರೂಪಗಳಿವೆಯಲ್ಲ, ಹಾಗಾಗಿ ತುಳು ಪದಗಳ ಮೂಲಕಇವನ್ನು ಅರ್ಥಮಾಡಿಕೊಳ್ಳಬಹುದೇ ಅನ್ನಿಸಿತು. ಎರಡು ಸಾಧ್ಯತೆಗಳು ಹೊಳೆದವು:

೧. ‘ತಿಪ್ಪಿ' ಅನ್ನುವುದು ತುಳು ನಾಡಿನ ಉತ್ತರಭಾಗದಪರಿಶಿಷ್ಟಜನಾಂಗದವರು, ಗಿರಿಜನರು ಬಳಸುವ ಪದ ಎಂದುವಿವರಿಸಿ ತೆಂಗಿನ ಕರಟ, ಗೆರಟೆ ಎಂಬ ಅರ್ಥವನ್ನು ನೀಡಿದ್ದಾರೆ.ಇದೇ ಪದ ತಮಿಳಿನಲ್ಲಿ ಸಿಪ್ಪಿ, ಮಲೆಯಾಳಂನಲ್ಲಿ ಇಪ್ಪಿ, ತೆಲುಗಿನಲ್ಲಿ ಸಿಪ್ಪ ಎಂದು ಇದೆ, ಕನ್ನಡದಲ್ಲಿಚಿಪ್ಪು ಎಂಬ ರೂಪ ತಳೆದಿದೆ ಅನ್ನುವ ವಿವರಣೆ ಇದೆ.

ಹಾಗಾದರೆತಿಪಟೂರು ಅನ್ನುವ ಊರಿನ ಹೆಸರಿನ ಮೊದಲ ಪದ ‘ತಿಪಟ' ಅನ್ನುವುದು 'ತಿಪ್ಪಿ' ಅನ್ನುವುದಕ್ಕೆ ಸಂಬಂಧಿಸಿದ್ದುಇದ್ದೀತು; ಭೌಗೋಳಿಕವಾಗಿ ಅದು ತೆಂಗಿನ ಕಾಯಿಗೆ ಪ್ರಸಿದ್ಧವಾದ ಊರುಕೂಡ ಅಲ್ಲವೇ? ಇರಬಹುದು ಅನ್ನುವುದಕ್ಕೆ ನೋಡಿ,

‘ತಿಪ್ಪಿ ಬುಡೊಡಾಂಡ ನೀರ್ ಆಜೊಡು, ಕಪ್ಪ್ ಬಳ್ಪೊಡಾಂಡ ಬರ್ಸ ಬರೊಡು' ಗೆರಟೆ ಬಿಡಬೇಕಾದರೆತೆಂಗಿನ ಒಳಗಿನ ನೀರು ಆರಬೇಕು, ಕಪ್ಪೆ
ಕೂಗಬೇಕಾದರೆ ಮಳೆ ಬರಬೇಕುಅನ್ನುವ ಗಾದೆಯೂ ಉದಾಹರಣೆಯಾಗಿದೆ. ಹಾಗೆ ತಿಪ್ಪಿ ಅನ್ನುವುದು
ತಂಗಿನ ಗೆರೆಟೆ ಅನ್ನುವುದಕ್ಕೆ ನಿಘಂಟಿನಲ್ಲಿಇನ್ನೂ ಹಲವು ಉದಾಹರಣೆಗಳಿವೆ.

೨. ತಿಪ್ಪ್:ರಾಶಿ, ಗೊಬ್ಬರ ಮೊದಲಾದವುಗಳ ರಾಶಿ ಮತ್ತು ಎತ್ತರದ ದಿಣ್ಣೆ ಅನ್ನುವಅರ್ಥಗಳಿವೆ. ಹಾಗಾದರೆ ‘ತಿಪಟ' ಅನ್ನುವುದು ದಿಣ್ಣೆಯ ಮೇಲಿನ ಊರು, ದಿಬ್ಬದ ಮೇಲಿನಊರು ಅನ್ನುವ ಅರ್ಥವೂ ಇದ್ದೀತು.

ಈ ಎರಡನೆಯಅರ್ಥ ನೋಡುವಾಗ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವತಿಪ್ಪೇಸ್ವಾಮಿ ಅನ್ನುವುದು ದಿಬ್ಬದ ಮೇಲಿರುವ ದೇವರು ಅನ್ನುವ ಅರ್ಥದ ಹೆಸರಿರಬೇಕು ಅನ್ನುವುದು ಹೊಳೆಯಿತು.

ಈಗ
ಬಳಕೆಯಲ್ಲಿತಪ್ಪಿ ಹೋಗಿರುವ ಪದಗಳ ಅರ್ಥವನ್ನು ಹುಡುಕುವುದು ಬಹುಮಟ್ಟಿಗೆ ಊಹೆಯ ಕೆಲಸವೇ
ಸರಿ. ನಮ್ಮ ಅಕ್ಕಪಕ್ಕದಭಾಷೆಗಳೊಂದಿಗೆ ಕನ್ನಡದ ಬಳಕೆ ತಪ್ಪಿದ ಪದಗಳನ್ನು
ತಿಕ್ಕಿನೋಡಿದರೆ ಹೊಸ ಅರ್ಥದ ಊಹೆಗಳು ಹೊಳೆದಾವು.

ಅಷ್ಟಾಗಿ ತುಮಕೂರು ಇನ್ನೂ ಬಗೆಹರಿದಿಲ್ಲ!

Rating
No votes yet

Comments